ಆದಿತ್ಯ-ಅನನ್ಯ ಖಾಸಗಿ ಫೋಟೊ ವೈರಲ್..! ಬಟಾ ಬಯಲಾಯ್ತು ಬಾಲಿವುಡ್‌ ಲವ್ ಬರ್ಡ್ಸ್ ಪ್ರೇಮ್ ಕಹಾನಿ

Aditya Roy Kapur Ananya panday : ಬಾಲಿವುಡ್‌ ನಟ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಹುದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಬಿಟೌನ್‌ ಲವ್‌ ಬರ್ಡ್ಸ್‌ ಫೋಟೋ ಒಂದು ವೈರಲ್‌ ಆಗಿದ್ದು, ಲವ್‌ ಗುಟ್ಟು ರಟ್ಟಾಗಿದೆ.

Written by - Krishna N K | Last Updated : Jul 12, 2023, 10:30 PM IST
  • ನಟ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಸ್ಪೇನ್‌ ಪ್ರವಾಸದಲ್ಲಿದ್ದಾರೆ.
  • ಬಿಟೌನ್‌ ಲವ್‌ ಬರ್ಡ್ಸ್‌ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
  • ಜೋಡಿಯಾಗಿ ಸರೋವರವನ್ನು ನೋಡುತ್ತಿರುವ ಹಲವಾರು ಫೋಟೋಗಳು ವೈರಲ್ ಆಗುತ್ತಿವೆ.
ಆದಿತ್ಯ-ಅನನ್ಯ ಖಾಸಗಿ ಫೋಟೊ ವೈರಲ್..! ಬಟಾ ಬಯಲಾಯ್ತು ಬಾಲಿವುಡ್‌ ಲವ್ ಬರ್ಡ್ಸ್ ಪ್ರೇಮ್ ಕಹಾನಿ title=

Aditya roy Ananya pandey love : ಬಾಲಿವುಡ್‌ ಸ್ಟಾರ್‌ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಲವ್‌ ಮಾಡುತ್ತಿದ್ದಾರೆ ಎನ್ನುವ ರೂಮರ್ಸ್‌ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ಈ ಜೋಡಿಯ ಪ್ರೀತಿಗೆ ಪುರಾವೆ ಒಂದು ದೊರೆತಿದ್ದು, ಇಬ್ಬರು ವಿದೇಶದಲ್ಲಿ ಅಪ್ಪಿಕೊಂಡು ನಿಂತಿರುವ ಫೋಟೋ ವೈರಲ್‌ ಆಗಿದೆ.

ಹೌದು.. ಆದಿತ್ಯ ಮತ್ತು ಅನನ್ಯಾ ಸದ್ಯ ಸ್ಪೇನ್‌ನಲ್ಲಿ ಇದ್ದಾರೆ. ಅನನ್ಯಾ ಅವರನ್ನು ಆದಿತ್ಯ ಹಿಂಬದಿಯಿಂದ ತಬ್ಬಿಕೊಂಡಿರುವ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಷ್ಟು ದಿನ ಲವ್‌ ಇಲ್ಲ ಏನೂ ಇಲ್ಲ ಎಂಬಂತೆ ಇದ್ದ ಜೋಡಿಯ ಗುಟ್ಟು ರಟ್ಟಾಗಿದೆ. ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಇಬ್ಬರೂ ಸ್ಪೇನ್‌ನಲ್ಲಿ ಆರ್ಕ್ಟಿಕ್ ಮಂಕೀಸ್ ಸಂಗೀತ ಕಚೇರಿಯ ಫೋಟೋಗಳನ್ನು ಹಂಚಿಕೊಂಡ ನಂತರ, ಜೋಡಿಯ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿವೆ.

ಇದನ್ನೂ ಓದಿ:  ಶಿವಣ್ಣ- ಅಜಯರಾವ್ ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆ..!

ಜುಲೈ 11 ರಂದು, ಅನನ್ಯಾ ಅವರು ಸಂಗೀತ ಕಚೇರಿಯ ಫೋಟೋ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಮತ್ತೊಂದೆಡೆ, ಆದಿತ್ಯ ಕೂಡ ಅದೇ ಸಂಗೀತ ಕಚೇರಿಯ ವೀಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರಿಗೆ ಇಬ್ಬರು ಲವ್‌ ಮಾಡುತ್ತಿದ್ದಾರೆ ಅಂತ ಖಚಿತ ಪಡಿಸಿಕೊಳ್ಳಲು ಇಷ್ಟು ಸಾಕು ಅಲ್ಲವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News