14 ಬಾರಿ ಟ್ರೈ ಮಾಡಿದ್ರೂ ಗರ್ಭಿಣಿಯಾಗದ ಈ ನಟಿ ಸಲ್ಮಾನ್ ಖಾನ್ ಕೊಟ್ಟ ಆ ಸಲಹೆಯಿಂದ 2 ಮಕ್ಕಳ ತಾಯಿಯಾದ್ಳು!

Kashmira Shah Krushna Abhishek Life Facts: 2013ರಲ್ಲಿ ಕಾಶ್ಮೀರಾ ಮತ್ತು ಕೃಷ್ಣ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ, ಇಬ್ಬರೂ 2017 ರಲ್ಲಿ ಪೋಷಕರಾದರು. ಆದರೆ ಆ ಜರ್ನಿ ಅವರಿಬ್ಬರಿಗೆ ಸುಲಭದ ಮಾತಾಗಿರಲಿಲ್ಲ.

Written by - Bhavishya Shetty | Last Updated : Jul 12, 2023, 10:57 AM IST
    • ಕಾಶ್ಮೀರಾ ಶಾ ಮತ್ತು ಕೃಷ್ಣ ಅಭಿಷೇಕ್ ಟಿವಿ ಉದ್ಯಮದ ಪ್ರಸಿದ್ಧ ಜೋಡಿಗಳು
    • ಕಾಶ್ಮೀರಾ ಗರ್ಭಿಣಿಯಾಗಲು ಒಂದಲ್ಲ ಎರಡಲ್ಲ 14 ಬಾರಿ ಪ್ರಯತ್ನಿಸಿದ್ದರು
    • ಕೃಷ್ಣ ಅಭಿಷೇಕ್ ಮತ್ತು ಕಾಶ್ಮೀರಿ ಶಾಗೆ ಸಲ್ಮಾನ್ ಖಾನ್ ಸಲಹೆಯೊಂದನ್ನು ನೀಡಿದ್ದರು
14 ಬಾರಿ ಟ್ರೈ ಮಾಡಿದ್ರೂ ಗರ್ಭಿಣಿಯಾಗದ ಈ ನಟಿ ಸಲ್ಮಾನ್ ಖಾನ್ ಕೊಟ್ಟ ಆ ಸಲಹೆಯಿಂದ 2 ಮಕ್ಕಳ ತಾಯಿಯಾದ್ಳು! title=
Kashmira Shah-Salman Khan

Kashmira Shah Krushna Abhishek Life Facts: ಕಾಶ್ಮೀರಾ ಶಾ ಮತ್ತು ಕೃಷ್ಣ ಅಭಿಷೇಕ್ ಟಿವಿ ಉದ್ಯಮದ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಇವರಿಬ್ಬರ ಬಾಂಧವ್ಯ ಚೆನ್ನಾಗಿದೆ, ಇನ್ನು ಕಪಿಲ್ ಶರ್ಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಇವರಿಬ್ಬರ ಲವ್ ಕೆಮೆಸ್ಟ್ರಿಗೆ ಅನೇಕರು ಫಿದಾ ಆಗಿದ್ದರು. ಆದರೆ ಇವರು ಪೋಷಕರಾಗುವ ಮುನ್ನ ಅನುಭವಿಸಿದ ನೋವು ಅಷ್ಟಿಷ್ಟಲ್ಲ.

ಇದನ್ನೂ ಓದಿ: ಕಪ್ಪು ಬಟ್ಟೆಯಲ್ಲಿ ಕಣ್ಕುಕ್ಕುವಂತಿದೆ ಸೌಂದರ್ಯ ದೇವತೆ ಸನ್ನಿ ಅಂದ ..! ಫೋಟೋಸ್ ನೋಡಿ

2013ರಲ್ಲಿ ಕಾಶ್ಮೀರಾ ಮತ್ತು ಕೃಷ್ಣ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ, ಇಬ್ಬರೂ 2017 ರಲ್ಲಿ ಪೋಷಕರಾದರು. ಆದರೆ ಆ ಜರ್ನಿ ಅವರಿಬ್ಬರಿಗೆ ಸುಲಭದ ಮಾತಾಗಿರಲಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ಕಾಶ್ಮೀರಾ ಗರ್ಭಿಣಿಯಾಗಲು ಒಂದಲ್ಲ ಎರಡಲ್ಲ 14 ಬಾರಿ ಪ್ರಯತ್ನಿಸಿದ್ದರು. ಆದರೆ ಯಶಸ್ವಿಯಾಗಲಿಲ್ಲ. ಮತ್ತೊಂದೆಡೆ, ಪದೇ ಪದೇ ವಿಫಲವಾದ ಕಾರಣ, ಕಾಶ್ಮೀರಾ ಐವಿಎಫ್ ತಂತ್ರದ ಮೂಲಕ ಗರ್ಭಿಣಿಯಾಗಲು ಪ್ರಯತ್ನಿಸಿದರು. ಐವಿಎಫ್ ನಿಂದಾಗಿ ಕಾಶ್ಮೀರಾ ತೂಕವೂ ಸಾಕಷ್ಟು ಹೆಚ್ಚಾಯಿತು ಎನ್ನಲಾಗಿದೆ. ಆದರೆ, ಈ ನಡುವೆ ಕೃಷ್ಣ ಅಭಿಷೇಕ್ ಮತ್ತು ಕಾಶ್ಮೀರಿ ಶಾಗೆ ಸಲ್ಮಾನ್ ಖಾನ್ ಸಲಹೆಯೊಂದನ್ನು ನೀಡಿದ್ದು, ಆ ಸಲಹೆ ಅವರ ಬದುಕನ್ನೇ ಬದಲಿಸಿದೆ.

ವರದಿಗಳು ಹೇಳುವ ಪ್ರಕಾರ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಯೋಜಿಸುವಂತೆ ಸಲ್ಮಾನ್ ಖಾನ್ ಕೃಷ್ಣ ಅಭಿಷೇಕ್ ಮತ್ತು ಕಾಶ್ಮೀರಾ ಶಾಗೆ ಸಲಹೆ ನೀಡಿದ್ದರು. ಸಲ್ಮಾನ್ ಖಾನ್ ಅವರ ಈ ಸಲಹೆಯ ಮೇರೆಗೆ ಮುಂದುವರಿದ ಕಾಶ್ಮೀರಾ ಮತ್ತು ಕೃಷ್ಣ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Gilli Nata: ಮಳವಳ್ಳಿ ಟು ಬೆಂಗಳೂರು.. ನಗುವಿನ ಮೂಲಕ ಜನರ ಮನಗೆದ್ದ ʻಗಿಲ್ಲಿ ನಟʼ ಯಾರು ಗೊತ್ತಾ?

ಆದರೆ ಕಾಶ್ಮೀರಾ ತನ್ನ ದೈಹಿಕ ಅಂದದ ಬಗ್ಗೆ ಬಹಳ ಜಾಗೃತಳಾಗಿದ್ದಳಂತೆ, ಅದಕ್ಕಾಗಿಯೇ ಅವಳು ಬಾಡಿಗೆ ತಾಯ್ತನವನ್ನು ಆರಿಸಿಕೊಂಡಳು ಎಂದು ಕೆಲವು ಮೂಲಗಳು ಹೇಳುತ್ತವೆ. ಆದರೆ ಕಾಶ್ಮೀರಾ ಪ್ರಕಾರ, ಅವೆಲ್ಲಾ ಸುಳ್ಳು ಸುದ್ದಿ, ಕೇವಲ ವದಂತಿಯಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News