Agnisakshi Serial Actor: ಅಗ್ನಿಸಾಕ್ಷಿ' ಧಾರಾವಾಹಿ ನಟ ಸಂಪತ್ ಜಯರಾಮ್‌ ನೇಣಿಗೆ ಶರಣು

Sampath Jayaram: ಕನ್ನಡದ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದ ಪ್ರತಿಭಾನಿತ್ವ ನಟ ಸಂಪತ್‌ ಜಯರಾಮ್‌ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಇತ್ತಿಚೀನ ದಿನಗಳಲ್ಲಿ ಯಾವುದೇ ಅವಕಾಶ ಸಿಗದೇ ಸಿನಿಮಾರಂಗದಿಂದ ಕೆಲ ದಿನಗಳ ಕಾಲ ದೂರ ಉಳಿದಿದ್ದರು ಎನ್ನಲಾಗಿದೆ. 

Written by - Zee Kannada News Desk | Last Updated : Apr 23, 2023, 11:10 AM IST
  • ಅಗ್ನಿಸಾಕ್ಷಿ' ಧಾರಾವಾಹಿ ನಟ ಸಂಪತ್ ನೇಣಿಗೆ ಶರಣು
  • ಪ್ರತಿಭಾನಿತ್ವ ನಟ ಚಿಕ್ಕಮಗಳೂರಿನ ಮಲೆನಾಡಿನ ನಿವಾಸಿ
  • ಅಗ್ನಿಸಾಕ್ಷಿ ಧಾರವಾಹಿ ಸೇರಿದಂತೆ, ಅನೇಕ ಸಿನಿಮಾಗಳಲ್ಲಿ ನಟನೆ
Agnisakshi Serial Actor: ಅಗ್ನಿಸಾಕ್ಷಿ' ಧಾರಾವಾಹಿ ನಟ ಸಂಪತ್ ಜಯರಾಮ್‌ ನೇಣಿಗೆ ಶರಣು title=

ಬೆಂಗಳೂರು: ಕನ್ನಡದ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದ ಪ್ರತಿಭಾನಿತ್ವ ನಟ ಸಂಪತ್‌ ಜಯರಾಮ್‌ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಇತ್ತಿಚೀನ ದಿನಗಳಲ್ಲಿ ಯಾವುದೇ ಅವಕಾಶ ಸಿಗದೇ ಸಿನಿಮಾರಂಗದಿಂದ ಕೆಲ ದಿನಗಳ ಕಾಲ ದೂರ ಉಳಿದಿದ್ದರು ಎನ್ನಲಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪು ಸಮೀಪದ ಗ್ರಾಮದವರಾಗಿದ್ದ ಇವರು, ನಟನೆಯಲ್ಲಿ ಮುಂದುವರಿಯ ಬೇಕೆಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನಗರದ ನೆಲಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Bollywood Stars: ಸಿನಿಮಾಗೋಸ್ಕರ ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್‌ ತಾರೆಯರು - ಇವ್ರೇ ನೋಡಿ

ಆರು ತಿಂಗಳಷ್ಟೇ ವಿವಾಹವಾಗಿದ್ದ ಇವರು,  ಇದೀಗ ಇಹಲೋಕ ತ್ಯಜಿಸಿರುವುದು ಅವರ ಆಪ್ತರಿಗೆ ತೀವ್ರ ನೋವು ಉಂಟುಮಾಡಿದೆ. ಈ  ನಟ ಕಿರುತೆರೆಯಲ್ಲಿಅಗ್ನಿ ಸಾಕ್ಷಿ, ಧಾರವಾಹಿ, ಇತ್ತೀಚೀಗೆ ಬಿಡುಗಡೆಯಾದ ಕಂಬ್ಳಿಹುಳ, ಬಾಲಾಜಿ ಫೋಟೋ ಸ್ಟುಡಿಯೊ ಸಿನಿಮಾಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ: Ravichandran : ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದೊಡ್ಮನೆ ಬೆಡಗಿ ಧನ್ಯಾ ರಾಮ್​ಕುಮಾರ್ 

ಆದರೆ ಕೆಲವು ದಿನಗಳಿಂದ ಯಾವುದೇ ಸಿನಿಮಾ , ಕಿರುತೆರೆಗಳಲ್ಲಿ ಅವಕಾಶ ಸಿಗದೇ ವಂಚಿತರಾಗಿದ್ದರು ಎನ್ನಲಾಗುತ್ತಿದೆ. ಸದ್ಯ ಇವರ ಮೃತ ದೇಹವನ್ನು ನೆಲಮಂಗಲದ ಆಸ್ಪತ್ರೆಯಿಂದ ಕೊಪ್ಪದಲ್ಲಿರುವ ನಿವಾಸಕ್ಕೆ ಅವರ ಮೃತದೇಹ ರವಾನೆ ಆಗಲಿದೆ.

ಇವರ ಸಾವಿಗೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅದರ ನಡುವೆ ಇವರ ಆತ್ಮೀಯ ನಟ ರಾಜೇಶ್‌ ಭಾವುಕರಾಗಿ ,ಲೋ ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ. ಅದೆಷ್ಟೋ ಸಿನೆಮಾ ಮಾಡೋದಿದೆ. ಅದೆಷ್ಟೋ ಜಗಳ ಬಾಕಿ ಇದೆ, ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ . ಬಾರೋ ವಾಪಾಸ್ ಪ್ಲೀಸ್ ಎಂದು ತೀವ್ರ ಭಾವುಕ ಸಂದೇಶವೊಂದನ್ನು ಫೋಸ್ಟ್‌ ಮಾಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News