Ravichandran : ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದೊಡ್ಮನೆ ಬೆಡಗಿ ಧನ್ಯಾ ರಾಮ್​ಕುಮಾರ್ 

Ravichandran-Dhanya Ramkumar: ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರಾಂತಿ ಸಿನಿಮಾದ ಬಳಿಕ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅವರ ಜೊತೆಯಲ್ಲಿ ದೊಡ್ಮನೆ ಬೆಡಗಿ ಧನ್ಯಾ ರಾಮ್‌ಕುಮಾರ್ ಕೂಡ ಒಂದೇ ಸಿನಿಮಾದಲ್ಲಿ ಮುಖಾಮುಖಿಯಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. 

Written by - Zee Kannada News Desk | Last Updated : Apr 22, 2023, 01:39 PM IST
  • ರವಿಚಂದ್ರನ್ ಹೊಸ ಸಿನಿಮಾದಲ್ಲಿ ದೊಡ್ಮನೆ ಬೆಡಗಿ ಧನ್ಯಾ ರಾಮ್​ಕುಮಾರ್
  • ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರಾಂತಿ ಸಿನಿಮಾದ ಬಳಿಕ ಇದೀಗ ಮತ್ತೆ ತೆರೆ ಮೇಲೆ
  • ರವಿಚಂದ್ರನ್ ಅಭಿನಯದ ಈ ಚಿತ್ರಕ್ಕೆ ಗುರುರಾಜ್ ಕುಲಕರ್ಣಿ ನಿರ್ದೇಶನ
Ravichandran : ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದೊಡ್ಮನೆ ಬೆಡಗಿ ಧನ್ಯಾ ರಾಮ್​ಕುಮಾರ್  title=

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರಾಂತಿ ಸಿನಿಮಾದ ಬಳಿಕ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅವರ ಜೊತೆಯಲ್ಲಿ ದೊಡ್ಮನೆ ಬೆಡಗಿ ಧನ್ಯಾ ರಾಮ್‌ಕುಮಾರ್ ಕೂಡ ಒಂದೇ ಸಿನಿಮಾದಲ್ಲಿ ಮುಖಾಮುಖಿಯಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. 

ಹೌದು , 
ಕ್ರೇಜಿ ಸ್ಟಾರ್ ರವಿಚಂದ್ರನ್ ಮೇನ್ ಲೀಡ್‌ ಹಾಗೂ ಇವರ ಜೊತೆಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮಕುಮಾರ್ ಹೊಸ ಚಿತ್ರವೊಂದನ್ನ ಒಪ್ಪಿದ್ದಾರೆ. 

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಈ ಚಿತ್ರಕ್ಕೆ ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಲೀಗಲ್ ಥ್ರಿಲ್ಲರ್ ವಿಷಯ ಹೊಂದಿರುವ  ಈ ಚಿತ್ರದಲ್ಲಿ ರವಿಚಂದ್ರನ್ ಅವರು ಸ್ಪೆಷಲ್ ಆಗಿ ಕಾಣಿಸಿಕೊಳ್ಳಿದ್ದಾರೆ. 

ಇದನ್ನೂ ಓದಿ: Anushka Shetty: ಗುಟ್ಟಾಗಿ ಮದುವೆಯಾಗೇ ಬಿಟ್ರಾ ನಟಿ ಅನುಷ್ಕಾ ಶೆಟ್ಟಿ!?

ಸದ್ಯ ಈ ಸಿನಿಮಾ ಲೀಗಲ್ ಸಿಸ್ಟಮ್‌ ಕಥೆಯಾಗಿದೆ ಎಂಬ  ಒಂದಿಷ್ಟು ಮಾಹಿತಿ ಹೊರ ಬಿದ್ದಿದೆ. ಆದರೆ ಈ ಚಿತ್ರದ ಹೆಸರನ್ನು ನಿಗದಿ ಮಾಡಿಲ್ಲ ಎಂದು ಹೇಳಲಾಗುತ್ತಿದೆ. 

ಈ ಸಿನಿಮಾದ ಚಿತ್ರೀಕರಣವನ್ನು ರಾಜ್‌ಕುಮಾರ್ ಅವರ ಜನ್ಮ ದಿನ ಏಪ್ರಿಲ್-24 ರಂದು ಆರಂಭಿಸುವುದಾಗಿ  ಹೇಳಿದ್ದಾರೆ. ಆ ದಿನ ರ್ದೇಶಕ ಗುರುರಾಜ್ ಕುಲಕರ್ಣಿ ಅವರು ಶೂಟಿಂಗ್ ಸ್ಪಾಟ್ ಅಲ್ಲಿ ಚಿಕ್ಕದೊಂದು ಪೂಜೆಯನ್ನ ಕೂಡ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: Monalisa : ಸಿಲ್ವರ್‌ ಸ್ಕರ್ಟ್‌ನಲ್ಲಿ ಅದ್ಭುತವಾಗಿ ಕಂಗೊಳಿಸಿತು ʼಮೊನಾಲಿಸಾʼ ಅಂದ..! ಫೋಟೋ ನೋಡಿ

ಕನಸುಗಾರ ರವಿಚಂದ್ರನ್ ಮತ್ತು ಧನ್ಯಾ ರಾಮಕುಮಾರ್ ಸಿನಿಮಾ, ರಾಜ್‌ಕುಮಾರ್ ಅವರ ಜನ್ಮ ದಿನ ಏಪ್ರಿಲ್-24 ರಂದು ಚಿತ್ರೀಕರಣ ಆರಂಭಿಸುತ್ತಿದೆ. ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು ಶೂಟಿಂಗ್ ಸ್ಪಾಟ್ ಅಲ್ಲಿ ಚಿಕ್ಕದೊಂದು ಪೂಜೆಯನ್ನ ಕೂಡ ಪ್ಲಾನ್ ಮಾಡಿದ್ದಾರೆ.

ರಾಜ್‌ಕುಮಾರ್ ಅವರ ಅಪ್ಪಟ್ಟ ಅಭಿಮಾನಿಯಾಗಿರೋ ಗುರುರಾಜ್ ಕುಲಕರ್ಣಿ, ದೊಡ್ಮನೆ ಹುಡುಗಿ, ಕನಸುಗಾರ ರವಿಚಂದ್ರನ್  ತಮ್ಮ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ತುಂಬಾ ಸಂತಸ ಎಂದಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News