ಐಶ್ವರ್ಯ ರೈ ಜೊತೆ ವಿಚ್ಛೇದನ ಖಚಿತ?! ಡಿವೋರ್ಸ್‌ ವದಂತಿಗಳ ಮಧ್ಯೆ ಅಭಿಷೇಕ್‌ ಬಚ್ಚನ್ ಮಾಡಿದ್ದೇನು ಗೊತ್ತಾ?

Aishwarya Rai -Abhishek Bachchan Separation: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ನಂತರ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಮತ್ತೊಮ್ಮೆ ಸುದ್ದಿಯಲ್ಲಿದೆ. ಇವರಿಬ್ಬರ ವಿಚ್ಛೇದನದ ಮಾತುಗಳು ಮರುಕಳಿಸಿದೆ. ಈ ಸುದ್ದಿಯ ನಡುವೆಯೇ ಅಭಿಷೇಕ್ ಬಚ್ಚನ್ ಮಾಡಿದ್ದೊಂದು ಕೆಲಸ ಇದೀಗ ಚರ್ಚೆಗೆ ಗ್ರಾಸವಾಗಿದೆ.‌

Written by - Savita M B | Last Updated : Jul 18, 2024, 08:27 AM IST
  • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ
  • ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಮತ್ತೊಮ್ಮೆ ಸುದ್ದಿಯಲ್ಲಿದೆ.
ಐಶ್ವರ್ಯ ರೈ ಜೊತೆ ವಿಚ್ಛೇದನ ಖಚಿತ?! ಡಿವೋರ್ಸ್‌ ವದಂತಿಗಳ ಮಧ್ಯೆ ಅಭಿಷೇಕ್‌ ಬಚ್ಚನ್ ಮಾಡಿದ್ದೇನು ಗೊತ್ತಾ?  title=

Aishwarya Rai -Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ನಂತರ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಮತ್ತೊಮ್ಮೆ ಸುದ್ದಿಯಲ್ಲಿದೆ. ಇವರಿಬ್ಬರ ವಿಚ್ಛೇದನದ ಮಾತುಗಳು ಮರುಕಳಿಸಿದೆ. ಈ ಸುದ್ದಿಯ ನಡುವೆಯೇ ಅಭಿಷೇಕ್ ಬಚ್ಚನ್ ಮಾಡಿದ್ದೊಂದು ಕೆಲಸ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಭಿಷೇಕ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಲೈಕ್‌ ಮಾಡಿದ್ದಾರೆ.. ಇದೀಗ ಆ ಪೋಸ್ಟ್ ಅನ್ನು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ ಎನ್ನಲಾಗ್ತಿದೆ.. ಅಭಿಷೇಕ್ ಬಚ್ಚನ್ ಅವರು ಇಷ್ಟಪಟ್ಟಿರುವ ಈ ಪೋಸ್ಟ್ ವಿಚ್ಛೇದನಕ್ಕೆ ಸಂಬಂಧಿಸಿದೆ. ಇದೀಗ ಈ ಪೋಸ್ಟ್ ಗೆ ಅಭಿಷೇಕ್ ನೀಡಿದ ಪ್ರತಿಕ್ರಿಯೆಯಿಂದ ಎಲ್ಲರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ-ಧನುಷ್ ಅಭಿನಯದ 'ರಾಯನ್' ಸಿನಿಮಾದ ಟ್ರೈಲರ್ ಬಿಡುಗಡೆ : ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್....!!!

ವಿಚ್ಛೇದನದ ಬಗ್ಗೆ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, 'ವಿಚ್ಛೇದನ ಸುಲಭವಲ್ಲ. ಸಂತೋಷದ ಕುಟುಂಬವನ್ನು ಯಾರು ಬಯಸುವುದಿಲ್ಲ? ತಮ್ಮವರೊಂದಿಗೆ ವೃದ್ಧಾಪ್ಯವನ್ನು ಕಳೆಯಲು ಯಾರು ಇಷ್ಟಪಡುವುದಿಲ್ಲ? ಆದರೆ ನೀನು ಬಯಸಿದ್ದು ಯಾವಾಗಲೂ ಆಗುವುದಿಲ್ಲ.' ಎಂದು ಬರೆದುಕೊಂಡಿದ್ದಾರೆ.. ಈ ಪೋಸ್ಟ್ ಅನ್ನು ಅಭಿಷೇಕ್ ಬಚ್ಚನ್ ಲೈಕ್ ಮಾಡಿದ್ದಾರೆ. ಅದರ ಸ್ಕ್ರೀನ್‌ಶಾಟ್ ಅನ್ನು ಪತ್ರಕರ್ತರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು.. ಅಭಿಷೇಕ್ ಬಚ್ಚನ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಜುಲೈ 12 ರಂದು ಅನಂತ್ ಮತ್ತು ರಾಧಿಕಾ ಅವರ ವಿವಾಹಕ್ಕಾಗಿ ಬಚ್ಚನ್ ಕುಟುಂಬದ ಫೋಟೋದಿಂದ ಐಶ್ವರ್ಯಾ ರೈ ಮತ್ತು ಅವರ ಮಗಳು ಆರಾಧ್ಯ ನಾಪತ್ತೆಯಾಗಿದ್ದರು, ನಂತರ ಕೌಟುಂಬಿಕ ಕಲಹದ ಸುದ್ದಿಯು ಹರಿದಾಡುತ್ತಿತ್ತು.. ಅದರ ನಂತರ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ಮತ್ತೆ ಏನಾಗುತ್ತಿದೆ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ.

ಇದನ್ನೂ ಓದಿ-ರಾಜವರ್ಧನ್ 'ಹಿರಣ್ಯ' ಸಿನಿಮಾದ ಡ್ಯಾನ್ಸಿಂಗ್ ನಂಬರ್ ರಿಲೀಸ್...ಬೈಲಾ ಬೈಲಾ ಅಂತಾ ಹೆಜ್ಜೆ ಹಾಕಿದ ದಿವ್ಯಾ ಸುರೇಶ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News