"ಕೆಜಿಎಫ್ ಸಿನಿಮಾ ಬರುವ ಮುನ್ನ ಯಶ್ ಯಾರು? ಆತ ಎಷ್ಟು ದೊಡ್ಡ ಹೀರೋ?":‌ ಫ್ಯಾನ್ಸ್‌ಗಳ ಕೆಂಗಣ್ಣಿಗೆ ಗುರಿಯಾದ ಅಲ್ಲು ಅರವಿಂದ್.

Allu Arvind: ಅಭಿಮಾನಿಗಳು ಯಶ್‌19 ಅಪ್‌ಡೇಟ್‌ಗಾಗಿ ಕಾಯುತ್ತಿದದು, 'KGF' ಸರಣಿ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಯಶ್ ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಕುರಿತು ತೆಲುಗು ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ನೀಡಿರುವ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

Written by - Zee Kannada News Desk | Last Updated : Nov 8, 2023, 11:49 AM IST
  • ಅಲ್ಲು ಅರವಿಂದ್ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಣ್ಣ ಚಿತ್ರಗಳನ್ನು ನಿರ್ಮಾಣ ಮಾಡಲು ಸಿನಿಮಾ ನಿರ್ಮಾಣ ವೆಚ್ಚವೇ ಕಾರಣ ಎಂದರು.
  • ಕೆಜಿಎಫ್ ಸಿನಿಮಾ ಬರುವ ಮುನ್ನ ಯಶ್ ಯಾರು? ಆತ ಎಷ್ಟು ದೊಡ್ಡ ಹೀರೋ? ಎಂದ ಅಲ್ಲು ಅರವಿಂದ್.
  • ಸೋಷಿಯಲ್‌ ಮಿಡಿಯಾದಲ್ಲಿ ಯಶ್‌ ಫ್ಯಾನ್ಸ್‌ ಅಲ್ಲು ಅರವಿಂದ್‌ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
"ಕೆಜಿಎಫ್ ಸಿನಿಮಾ ಬರುವ ಮುನ್ನ ಯಶ್ ಯಾರು? ಆತ ಎಷ್ಟು ದೊಡ್ಡ ಹೀರೋ?":‌ ಫ್ಯಾನ್ಸ್‌ಗಳ ಕೆಂಗಣ್ಣಿಗೆ ಗುರಿಯಾದ ಅಲ್ಲು ಅರವಿಂದ್. title=

Allu Arvind Talk About Yash: ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ 'ಕೋಟಬೊಮ್ಮಲಿ ಪಿಎಸ್' ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಭಾಗಿಯಾಗಿದ್ದು, ಇದೇ ವೇಳೆ ಸ್ಟಾರ್ ನಟರ ಸಂಭಾವನೆ ಕುರಿತು ಪತ್ರಕರ್ತರಿಂದ "ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಣ್ಣ ಚಿತ್ರಗಳನ್ನು ಬಿಟ್ಟರೆ ದೊಡ್ಡ ಚಿತ್ರಗಳು ಏಕೆ ಬರುತ್ತಿಲ್ಲ" ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲು ಅರವಿಂದ್ "ಸಿನಿಮಾ ನಿರ್ಮಾಣ ವೆಚ್ಚವೇ ಕಾರಣ" ಎಂದರು. ಮತ್ತೆ  ಸಿನಿಮಾ ನಿರ್ಮಾಣ ವೆಚ್ಚದ ವಿಚಾರಕ್ಕೆ ಬಂದರೆ ಎಲ್ಲರೂ ಸ್ಟಾರ್ ನಟರ ಸಂಭಾವನೆ ಬಗ್ಗೆಯೇ ಮಾತನಾಡುತ್ತಿದ್ದಾರೆ. ಭಾರೀ ಸಂಭಾವನೆ ಪಡೆಯುವ ಹೀರೋಗಳಲ್ಲಿ ನಿಮ್ಮ ಕುಟುಂಬದ ಒಬ್ಬ ಹೀರೋ ಇದ್ದಾರೆ ಅಲ್ಲವೇ ಎಂದು ಪತ್ರಕರ್ತರೊಬ್ಬರು ಕೇಳಿದಕ್ಕೆ, ಅರವಿಂದ್ ಕೊಟ್ಟ ಉತ್ತರ ವಿಚಿತ್ರವಾಗಿತ್ತು.

ಅಲ್ಲು ಅರವಿಂದ್‌ "ಇತ್ತೀಚೆಗೆ ಹೆಚ್ಚಾದ ಸಿನಿಮಾ ಬಜೆಟ್‌ನಲ್ಲಿ ಹೀರೋಗಳು ಗರಿಷ್ಠ 20 ರಿಂದ 25%ರಷ್ಟು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಹಾಗಾಗಿ ಹೀರೋಗಳಿಂದ ಖರ್ಚು ಹೆಚ್ಚುತ್ತದೆ ಎಂದು ಹೇಳುವುದಕ್ಕಿಂತ, ನಿರ್ಮಾಣ ವೆಚ್ಚ ಹೆಚ್ಚಿಸಿದ ಸಿನಿಮಾಗಳಲ್ಲಿ ಹೀರೋಗಳು ಇರ್ತಾರೆ ಎಂದು ನನಗೆ ಅನ್ನಿಸುತ್ತಿದೆ. ಹೆಸರು ಹೇಳುವುದು ಬೇಡ. ಕೆಲ ಸಿನಿಮಾಗಳ ಬಜೆಟ್ ಎಷ್ಟಿದೆ ಎಂದು ನೀವೇ ಗಮನಿಸಿ. ಆ ಬಜೆಟ್‌ನಲ್ಲಿ ನಟರ ಸಂಭಾವನೆ ಎಷ್ಟು ಎಂದು ಲೆಕ್ಕಾ ಹಾಕಿಕೊಳ್ಳಿ. ಕಡಿಮೆ ಇರುತ್ತದೆ. ಹೀರೋಗಳಿಂದಾಗಿ ಪ್ರೊಡಕ್ಷನ್ ಬಜೆಟ್ ಹೆಚ್ಚಿದೆ, ಅದಕ್ಕೆ ನಿರ್ಮಾಪಕರು ಸಿನಿಮಾ ಮಾಡದೇ ದೂರ ಉಳಿಯುತ್ತಿದ್ದಾರೆ ಎನ್ನುವುದು ಸರಿಯಲ್ಲ."

ಇದನ್ನು ಓದಿ: ತೆರೆಗೆ ಬರಲು ರೆಡಿ ಎಸ್ತರ್ ನರೋನ್ಹಾ ಹೊಸ ಕನಸು.. ನ.17ಕ್ಕೆ ‘ದಿ ವೆಕೆಂಟ್ ಹೌಸ್’ ರಿಲೀಸ್

ನಿರ್ಮಾಪಕ ಅರವಿಂದ್ "ಈಗ ದೊಡ್ಡ ಚಿತ್ರಗಳನ್ನು ಅದ್ಧೂರಿಯಾಗಿ ತೋರಿಸದ ಹೊರತು ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ. ಹೀರೋಗಳು ಯಾರೇ ಆಗಿರಲಿ, ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಬೇಕು. 'KGF' ಸಿನಿಮಾ ಬರುವ ಮುನ್ನ ಆತ (ಯಶ್) ಯಾರು? ಆತ ಎಷ್ಟು ದೊಡ್ಡ ಹೀರೋ? ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಆ ಸಿನಿಮಾ ಗೆಲ್ತು. ಇದೊಂದು ಉದಾಹರಣೆ ಅಷ್ಟೇ' ಎಂದು  ಹೇಳಿದ್ದಾರೆ. 

ಯಶ್ ಅಭಿಮಾನಿಗಳು‌ ಅಲ್ಲು ಅರವಿಂದ್ ಮಾತಿಗೆ  ಕೆಂಡಾಮಂಡಲವಾಗಿದ್ದು, "ಕೆಜಿಎಫ್ ಬರೋಕ್ಕೆ ಮುನ್ನ ಯಶ್ ಸೂಪರ್ ಸ್ಟಾರ್ ನಟ. ಅದು ನಿಮಗೆ ಗೊತ್ತಿಲ್ಲ ಎನಿಸುತ್ತದೆ. ನಮ್ಮ 'KGF' ಸಿನಿಮಾ ನೋಡಿ 'ಪುಷ್ಪ' ಸಿನಿಮಾ ಮಾಡಿ ನಿಮ್ಮ ಮಗ ಗೆದ್ದಿದ್ದು. ರಾಷ್ಟ್ರಪ್ರಶಸ್ತಿ ಪಡೆದಿದ್ದು. ಅದನ್ನು ಮರೆಯಬೇಡಿ", ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಯಶ್ ಬಗ್ಗೆ ಅಲ್ಲು ಅರವಿಂದ್ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News