ಒಂದೇ ದಿನಕ್ಕೆ ಧೂಮಪಾನ, ಮದ್ಯಪಾನವನ್ನು ಬಿಡುವ ಸುಲಭ ಮಾರ್ಗ ಹೇಳಿದ ಬಿಗ್‌ ಬಿ

Amitabh Bachchan on smoking and drinking quit : ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು ಅನೇಕ ಜನರಿಗೆ ಸವಾಲಾಗಿರಬಹುದು, ಆದರೆ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಇದು ಅತ್ಯಗತ್ಯ. ಪ್ರತಿಯೊಬ್ಬರ ಜೀವನ ಶೈಲಿ ವಿಭಿನ್ನವಾಗಿರುತ್ತದೆ, ಆದ್ರೆ, ಈ ದುಶ್ಚಟವನ್ನು ತೊರೆಯುವುದರಿಂದ ವ್ಯಕ್ತಿತ್ವ ಬದಲಾಗುತ್ತದೆ. ಇದೀಗ ಈ ಕೆಟ್ಟ ಅಭ್ಯಾಸದಿಂದ ಹೊರಬರುವುದು ಹೇಗೆ ಎಂದು ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ ಕೆಲವು ಸಲಹೆಗಳನ್ನು ನೀಡಿದ್ದಾರೆ.

Written by - Krishna N K | Last Updated : Apr 12, 2023, 10:05 AM IST
  • 'ಪ್ರಾಜೆಕ್ಟ್ ಕೆ' ಸೆಟ್‌ನಲ್ಲಿ ಗಾಯಗೊಂಡ ನಂತರ ನಟ ಅಮಿತಾಬ್‌ ಬಚ್ಚನ್‌ ವಿಶ್ರಾಂತಿ ಪಡೆಯುತ್ತಿದ್ದಾರೆ.
  • ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
  • ಇದೀಗ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದರ ಕುರಿತು ಸಲಹೆ ನೀಡಿದ್ದಾರೆ.
ಒಂದೇ ದಿನಕ್ಕೆ ಧೂಮಪಾನ, ಮದ್ಯಪಾನವನ್ನು ಬಿಡುವ ಸುಲಭ ಮಾರ್ಗ ಹೇಳಿದ ಬಿಗ್‌ ಬಿ title=

Amitabh Bachchan :  ನಟ ಪ್ರಭಾಸ್‌ ಅಭಿನಯದ ಬಿಗ್‌ ಸಿನಿಮಾ 'ಪ್ರಾಜೆಕ್ಟ್ ಕೆ' ಸೆಟ್‌ನಲ್ಲಿ ಗಾಯಗೊಂಡ ನಂತರ ಮನೆಯಲ್ಲಿ ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಮಿತಾಬ್ ಬಚ್ಚನ್ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಇದರ ನಡುವೆ, ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಸಕ್ರಿಯರಾಗಿರುವ ಅವರು, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಉತ್ತಮ ವಿಚಾರಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಅನೇಕ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಅಮಿತಾಬ್ ಬಚ್ಚನ್ ಅವರು ಧೂಮಪಾನ ಮತ್ತು ಮದ್ಯಪಾನ ಮಾಡುವ ಅಭ್ಯಾಸವನ್ನು ಹೇಗೆ ತ್ಯಜಿಸಿದರು ಎಂದು ಹಂಚಿಕೊಂಡಿದ್ದಾರೆ. ʼಒಂದು ದಿನ ಪದವಿಯ ಕೊನೆಯ ಪೇಪರ್ ಮುಗಿದಾಗ, ಕೆಲವು ಸ್ನೇಹಿತರು ಸೈನ್ಸ್ ಲ್ಯಾಬ್‌ನಲ್ಲಿ ಮದ್ಯ ಸೇವಿಸಿ ಸಂಭ್ರಮಿಸುತ್ತಿದ್ದೆ. ಪ್ರಯೋಗದ ನಿಮಿತ್ತ ಶುದ್ಧ ಮದ್ಯ ಸೇವಿಸಿದ್ದೆ. ಆಗ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದರು. ಈ ಘಟನೆಯು ಮದ್ಯಪಾನದ ಅಡ್ಡಪರಿಣಾಮಗಳು ಅಥವಾ ಮಾರಣಾಂತಿಕ ಪರಿಣಾಮಗಳ ಬಗ್ಗೆ ನನಗೆ ಬಹಳ ಬೇಗನೆ ಪಾಠ ಕಲಿಸಿತು ಎಂದು ಮಧ್ಯಪಾನದ ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಮತ್ತೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿರುವ ಬಿಗ್‌ ಬಿ, ಕೋಲ್ಕತ್ತಾದಲ್ಲಿ ತಮ್ಮ ಕೆಲಸದ ಸಮಯದಲ್ಲಿ, ಕುಡಿತ ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: BIGG BOSSನಲ್ಲಿ ಮೋಹನ್ ಲಾಲ್’ಗೆ ಅಗೌರವ! ಕಾರ್ಯಕ್ರಮ ಅರ್ಧಕ್ಕೇ ಬಿಟ್ಟು ಹೊರನಡೆದ ಖ್ಯಾತ ನಟ

ಇನ್ನು ಧೂಮಪಾನ ಮತ್ತು ಮದ್ಯಪಾನವನ್ನು ಬಿಡುವ ಸುಲಭ ಮಾರ್ಗವನ್ನು ಬಿಗ್ ಬಿ ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ. 'ಅದನ್ನು ಬಿಡಲು ಸುಲಭವಾದ ಮಾರ್ಗವೆಂದರೆ ʼದೃಢ ನಿರ್ಧಾರʼ. ಇದು ಸುಲಭ ಮಾರ್ಗ. ಸಿಗರೇಟನ್ನು ಪುಡಿ ಪುಡಿ ಮಾಡಿ, ವೈನ್ ಗ್ಲಾಸ್ ಒಡೆದು ಹಾಕಿ ಶಾಶ್ವತವಾಗಿ ವಿದಾಯ ಹೇಳಿʼ ಎಂದು ಬಿಗ್‌ ಬಿ ಸಲಹೆ ನೀಡಿದ್ದಾರೆ.

ನೀವು ಇದ್ದಕ್ಕಿದ್ದಂತೆ ಕುಡಿಯುವುದನ್ನು ನಿಲ್ಲಿಸಿದರೆ ಏನಾಗುತ್ತದೆ? : ಆರಂಭದಲ್ಲಿ, ನೀವು ಕುಡಿತವನ್ನು ಬಿಟ್ಟರೆ, ನೀವು ಆಯಾಸ, ಆತಂಕ, ಹೆದರಿಕೆ, ನಡುಕ, ಕಿರಿಕಿರಿ, ಬೆವರುವಿಕೆ, ನಿದ್ರಾಹೀನತೆ, ಭಾವನಾತ್ಮಕ ಪ್ರಕೋಪಗಳು, ರಕ್ತದೊತ್ತಡ ಹೆಚ್ಚಳ, ತಲೆನೋವು, ಹಸಿವಿನ ಕೊರತೆ, ತ್ವರಿತ ಹೃದಯ ಬಡಿತ ಮತ್ತು ಏಕಾಗ್ರತೆಯ ಅಸಾಮರ್ಥ್ಯದಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಆದರೆ, ಮದ್ಯಪಾನವನ್ನು ತ್ಯಜಿಸುವುದು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ : Salman Khan : ಬಾಲಿವುಡ್‌ ಬಾದ್‌ ಷಾ ಸಲ್ಲುಗೆ ಬಂತು ಮತ್ತೊಂದು ಜೀವ ಬೆದರಿಕೆ ಕರೆ 

ಆಲ್ಕೋಹಾಲ್ ತ್ಯಜಿಸುವ ನಿರ್ಧಾರವು ನಿಜವಾಗಿಯೂ ಶ್ಲಾಘನೀಯವಾಗಿದೆ, ಆದರೆ ಇಡೀ ಪ್ರಕ್ರಿಯೆಯಲ್ಲಿ ನೀವು ವೈದ್ಯರ ಬೆಂಬಲವನ್ನು ತೆಗೆದುಕೊಂಡರೆ ಉತ್ತಮ. ಏಕೆಂದರೆ ಆಲ್ಕೋಹಾಲ್ ತ್ಯಜಿಸುವುದು ಕೆಲವರಿಗೆ ಆರಂಭದಲ್ಲಿ ತುಂಬಾ ಕಷ್ಟವಾಗಬಹುದು ಮತ್ತು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವೈದ್ಯರ ಸಹಾಯದಿಂದ, ನೀವು ಈ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಅದರಿಂದ ಉಂಟಾಗುವ ಯಾವುದೇ ದೈಹಿಕ ಸಮಸ್ಯೆಗಳ ಬಗ್ಗೆ ನಿಮಗೆ ತಿಳಿದಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News