ಕಣ್ಸನ್ನೆ ಬೆಡಗಿ Priya Prakash Varrier ಮತ್ತೊಂದು ವಿಡಿಯೋ ಭಾರಿ ವೈರಲ್

ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಅವರು ತಮ್ಮ ಹಾಡಿನ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದಾರೆ. ಈ ವಿಡಿಯೋದಲ್ಲಿ 'ಎ ದಿಲ್ ಹೈ ಮುಷ್ಕಿಲ್' ಚಿತ್ರದ 'ಚನ್ನಾ ಮೇರಿಯಾ' (Channa Mereya) ಎಂಬ ಪ್ರಸಿದ್ಧ ಹಾಡನ್ನು ಅವರು ಹಾಡುತ್ತಿದ್ದಾರೆ.

Updated: Sep 25, 2020 , 07:06 PM IST
ಕಣ್ಸನ್ನೆ  ಬೆಡಗಿ Priya Prakash Varrier ಮತ್ತೊಂದು ವಿಡಿಯೋ ಭಾರಿ ವೈರಲ್

ನವದೆಹಲಿ: ಕೇವಲ ಕಣ್ಸನ್ನೆಯ ಮೂಲಕ ಒಂದೇ ರಾತ್ರಿಯಲ್ಲಿ ಇಂಟರ್ನೆಟ್ ನಲ್ಲಿ ಸೆಂಸೇಶನ್ ಸೃಷ್ಟಿಸಿದ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯಾರ್ (Priya Prakash Varrier) ಅವಳ ಮತ್ತೊಂದು ವಿಡಿಯೋ ಇದೀಗ ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗಲಾರಂಭಿಸಿದೆ. ಪ್ರಿಯಾ ಅವರ ಈ ಮಂತ್ರಮುಗ್ಧಗೊಳಿಸುವ ಅಂದಾಜ್ ಜನರಿಗೆ ಭಾರಿ ಇಷ್ಟವಾಗಿದೆ. ಅವಳು ತನ್ನ ಈ ವಿಡಿಯೋ ಅನ್ನು ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಹಾಡಿನ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದಾರೆ. ಈ ವಿಡಿಯೋದಲ್ಲಿ 'ಎ ದಿಲ್ ಹೈ ಮುಷ್ಕಿಲ್' ಚಿತ್ರದ 'ಚನ್ನಾ ಮೇರಿಯಾ' (Channa Mereya) ಎಂಬ ಪ್ರಸಿದ್ಧ ಹಾಡನ್ನು ಅವರು ಹಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಿಯಾ ಅಭಿಮಾನಿಗಳು ಅವರು ಹಾಡು ಹಾಡುತ್ತಿರುವುದನ್ನು ನೋಡುತ್ತಿದ್ದಾರೆ. ಅಭಿಮಾನಿಗಳು ಕೂಡ ಪ್ರಿಯಾ ಹಾಡಿನ ಶೈಲಿಗೆ ಭಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ವೀಡಿಯೊ 5 ದಿನಗಳ ಹಳೆಯದಾದರೂ, ಜನರು ಇನ್ನೂ ನಿರಂತರವಾಗಿ ತಮ್ಮ ವೀಡಿಯೊಗಳನ್ನು ಇಷ್ಟಪಡುತ್ತಿದ್ದಾರೆ. ಅವರ ಈ ವೀಡಿಯೊವನ್ನು 56 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ.

ಇದನ್ನು ಓದಿ- ರೊಮ್ಯಾಂಟಿಕ್ ಸಾಂಗ್ ಹಾಡಿ ಸಿಂಗರ್ ಆದ ಪ್ರಿಯಾ ವಾರಿಯರ್! ವೀಡಿಯೊ ವೈರಲ್...

ಪ್ರತಿ ಬಾರಿ ಪ್ರಿಯಾ ವಿಶಿಷ್ಠ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಾರೆ
ಪ್ರತಿ ಬಾರಿಯೂ ಪ್ರಿಯಾ ಕಂಗೊಳಿಸುವ ವಿಶಿಷ್ಠ ಶೈಲಿ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಪ್ರತಿ ಬಾರಿ ಪ್ರಿಯಾ ಅಭಿಮಾನಿಗಳು ಅವರನ್ನು ವಿಶಿಷ್ಠ ರೂಪದಲ್ಲಿ ನೋಡುತ್ತಾರೆ. ಇದಕ್ಕೂ ಮೊದಲು ಪ್ರಿಯಾ 'ವಿಂಕ್ ಹಾಗೂ ಫೇರ್ ಗನ್' ತೋರಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಒಂದೇ ರಾತ್ರಿಯಲ್ಲಿ ಸೆಂಸೇಶನ್ ಹುಟ್ಟುಹಾಕಿದ್ದರು. ನಂತರ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಹಾಗೂ ಫೋಟೋಗಳು ಮತ್ತು ಮೇಂ ಬಲು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದವು. ಅದಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ  ಪ್ರಿಯಾ ಅವರಿಗೆ 70 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಫಾಲೋ ಮಾಡಲು ಆರಂಭಿಸಿದ್ದರು.

ಇದನ್ನು ಓದಿ- ಪ್ರಿಯಾ ಪ್ರಕಾಶ್ ಚೊಚ್ಚಲ ಬಾಲಿವುಡ್ ಚಿತ್ರ 'ಶ್ರೀದೇವಿ ಬಂಗ್ಲೋ' Teaser ರಿಲೀಸ್!

ಬಾಲಿವುಡ್ ಗೂ ಹೆಜ್ಜೆ ಇಡಲು ಪ್ರಿಯಾ ಸಿದ್ಧರಾಗಿದ್ದಾರೆ
ಇತ್ತೀಚೆಗಷ್ಟೇ ಪ್ರಿಯಾ ಪ್ರಕಾಶ್ ವಾರಿಯರ್ ಹಂಚಿಕೊಂಡ ವಿಡಿಯೋವೊಂದು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.  ಇದರಲ್ಲಿ ಪ್ರಿಯಾ 'ರಾಧಾ ಕೈಸೆ ನ ಜಲೇ' ಹಾಡಿಗೆ ಹಾವ-ಭಾವ ನೀಡಿದ್ದರು. 'ಒರು ಅದರ ಲವ್' ಹೆಸರಿನ ಮಲಯಾಳಂ ಚಿತ್ರದಲ್ಲಿನ ಅವರ ಅಭಿನಯಕ್ಕೆ ವಿಮರ್ಶಕರ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಶೀಘ್ರದಲ್ಲಿಯೇ ಪ್ರಿಯಾ 'ಶ್ರೀದೇವಿ ಬಂಗಲೋ' ಹಾಗೂ 'ಲವ್ ಹ್ಯಾಕರ್ಸ್' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.