Virat Kohli Birthday: ದಾಖಲೆಗಳ ಸರದಾರನಿಗೆ ಅನುಷ್ಕಾ ಲವ್ಲಿ ವಿಶ್! ಏನಂದ್ರು ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜನ್ಮ ದಿನಕ್ಕೆ ಬಿಸಿಸಿಐ, ಸೌರವ್ ಗಂಗೂಲಿ, ಮೊಹಮದ್ ಖೈಫ್ ಸೇರಿದಂತೆ ಅನೇಕರು ಶುಭಾಶಯ ಕೋರಿದ್ದಾರೆ. 

Last Updated : Nov 5, 2018, 01:26 PM IST
Virat Kohli Birthday: ದಾಖಲೆಗಳ ಸರದಾರನಿಗೆ ಅನುಷ್ಕಾ ಲವ್ಲಿ ವಿಶ್! ಏನಂದ್ರು ಗೊತ್ತಾ? title=
Pic: Twitter/@AnushkaSharma

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲರ ಗಮನ ಸೆಳೆದಿರುವ, ಸೆಳೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು 30ನೇ ವರ್ಷದ ಜನ್ಮ ದಿನದ ಸಂಭ್ರಮ. ಇದೀಗ ಅವರ ಹುಟ್ಟುಹಬ್ಬಕ್ಕೆ ಪತ್ನಿ ಅನುಷ್ಕಾಳಿಂದ ಹಿಡಿದು, ಕೊಹ್ಲಿ ಸ್ನೇಹಿತರು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. 

ಪತಿ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಪ್ರೀತಿಯ ಶುಭಾಶಯ ಕೋರಿರುವ ಅನುಷ್ಕಾ, 'ಕೊಹ್ಲಿ ಹುಟ್ಟಿಗೆ ಕಾರಣವಾದ ದೇವರಿಗೆ ಧನ್ಯವಾದ' ಎಂದು ಹೇಳುತ್ತಾ ತಮ್ಮಿಬ್ಬರ ಆತ್ಮೀಯ ಫೋಟೋವೊಂದನ್ನು ಟ್ವಿಟ್ಟರ್'ನಲ್ಲಿ ಶೇರ್ ಮಾಡಿದ್ದಾರೆ. 

ಟ್ವೆಂಟಿ-20, ಟೆಸ್ಟ್‌, ಏಕದಿನ ಸಹಿತ ಎಲ್ಲ ವರ್ಗದ ಕ್ರಿಕೆಟ್‌ನಲ್ಲಿ ಒಂದರ ಹಿಂದೊಂದರಂತೆ ದಾಖಲೆಗಳನ್ನು ಬರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜನ್ಮ ದಿನಕ್ಕೆ ಬಿಸಿಸಿಐ, ಸೌರವ್ ಗಂಗೂಲಿ, ಮೊಹಮದ್ ಖೈಫ್ ಸೇರಿದಂತೆ ಅನೇಕರು ಶುಭಾಶಯ ಕೋರಿದ್ದಾರೆ. ಭಾರತದ ಕ್ರಿಕೆಟ್ ಖ್ಯಾತಿಯನ್ನು ಕೊಹ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದ್ದಾರೆ.

Trending News