ʼಈʼ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಅನುಷ್ಕಾ ಶೆಟ್ಟಿ.. ಸ್ವೀಟಿಯನ್ನ ಕಾಡ್ತೀರೋ ಆ ಸಮಸ್ಯೆ ಏನು ಗೊತ್ತಾ?!

Anushka Shetty: ನಟಿ ಅನುಷ್ಕಾ ಶೆಟ್ಟಿ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅತಿ ಕಡಿಮೆ ಸಮಯದಲ್ಲಿ ಅನುಷ್ಕಾ ತನಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. 

Written by - Savita M B | Last Updated : Jun 20, 2024, 04:10 PM IST
  • ನಟಿ ಅನುಷ್ಕಾ ಶೆಟ್ಟಿ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ
  • ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಿ ವಿಶೇಷ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.
 ʼಈʼ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಅನುಷ್ಕಾ ಶೆಟ್ಟಿ.. ಸ್ವೀಟಿಯನ್ನ ಕಾಡ್ತೀರೋ ಆ ಸಮಸ್ಯೆ ಏನು ಗೊತ್ತಾ?! title=

South Actress Anushka Shetty: ನಟಿ ಅನುಷ್ಕಾ ಶೆಟ್ಟಿ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅತಿ ಕಡಿಮೆ ಸಮಯದಲ್ಲಿ ಅನುಷ್ಕಾ ತನಗೊಂದು ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ತೆಲುಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಫುಲ್ ಜನಪ್ರಿಯತೆ ಗಳಿಸಿದ್ದಾರೆ.. ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಿ ವಿಶೇಷ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಅರುಂಧತಿ ಸಿನಿಮಾದಿಂದ ಅನುಷ್ಕಾ ರೇಂಜ್ ಅಗಾಧವಾಗಿ ಬದಲಾಗಿತ್ತು... ತೆಲುಗು ಹಿರೋಗಳ ಲೆವೆಲ್‌ ಅನುಷ್ಕಾಗೆ ಇದೆ ಎಂದರೆ ಅತಿಶಯೋಕ್ತಿಯಲ್ಲ.

 ಆದರೆ ಕೆಲ ದಿನಗಳಿಂದ ಅನುಷ್ಕಾ ತಮ್ಮ ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ.. ಝೀರೋಸೈಜ್ ಚಿತ್ರದ ಮೂಲಕ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ನಂತರ ಕಳೆದ ವರ್ಷ ಯಂಗ್ ಹೀರೋ ನವೀನ್ ಅವರ ಪೋಲಿಶೆಟ್ಟಿ ಜೊತೆ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೂಲಕ ಅನುಷ್ಕಾ ಪ್ರೇಕ್ಷಕರ ಮುಂದೆ ಬಂದಿದ್ದರು.

ಇದನ್ನೂ ಓದಿ-ಆ ಭಾಗವನ್ನು ಬಾಡಿಗಾರ್ಡ್ ಅಸಭ್ಯವಾಗಿ ಮುಟ್ಟಿದ..! ಕಹಿ ಅನುಭವ ಹಂಚಿಕೊಂಡ ಸ್ಟಾರ್‌ ನಟಿ

 ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿದೆ. ಅದರ ನಂತರ ಅನುಷ್ಕಾ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಅನುಷ್ಕಾ ತಮ್ಮ ಹೊಸ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಮೂಲಕ ಅನುಷ್ಕಾ ಮಲಯಾಳಂ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 19 ವರ್ಷಗಳ ನಂತರ ಅನುಷ್ಕಾ ಮೊದಲ ಬಾರಿಗೆ ಮಲಯಾಳಂ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

 ಈ ಮಧ್ಯೆ ಅನುಷ್ಕಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ.. ಒಮ್ಮೆ ನಗಲು ಶುರು ಮಾಡಿದ ಅನುಷ್ಕಾ ತುಂಬಾ ಹೊತ್ತು ನಗುತ್ತಲೇ ಇರುತ್ತಾರಂತೆ.. ಅದರಿಂದಾಗಿ ಚಿತ್ರದ ಶೂಟಿಂಗ್ ವೇಳೆ ತುಂಬಾ ಮುಜುಗರ ಅನುಭವಿಸಿದ್ದೆ ಎಂದಿದ್ದಾರೆ. ನಗುವುದು ಹೇಗೆ ಸಮಸ್ಯೆಯಾಗಬಹುದು ಎಂದು ಯೋಚಿಸಿದರೆ.. ಸಾಮಾನ್ಯವಾಗಿ ಜೋಕ್ ಕೇಳಿದರೆ ಸ್ವಲ್ಪ ಹೊತ್ತು ನಕ್ಕು ನಿಲ್ಲಿಸುತ್ತೇವೆ. ಆದರೆ ಸ್ವೀಟಿ ಹಾಗಲ್ಲ ಆಕೆ ನಗೋದೇ ನಿಲ್ಲಿಸುವುದಿಲ್ಲವಂತೆ.. ಇದೊಂದು ಖಾಯಿಲೆ ಇದ್ದಂತೆ ಎಂದು ಸ್ವತಃ ಅನುಷ್ಕಾ ಹೇಳಿರುವುದು ಗಮನಾರ್ಹ.

ಇದನ್ನೂ ಓದಿ-Renukaswamy Murder Case: ನಾಳೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ & ಗ್ಯಾಂಗ್‌ ಶಿಫ್ಟ್‌!?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News