Appu Fans : ಅಪ್ಪು ಅಗಲಿದ ನೋವು ಅಭಿಮಾನಿಗಳ ಮನದಲ್ಲಿ ಇನ್ನೂ ಹಾಗೆಯೇ ಉಳಿದಿದೆ. ಇನ್ನೇನು ಅಪ್ಪು ಸಿನಿಮಾ ನೋಡುವುದಕ್ಕೆ ಆಗೋದಿಲ್ಲ ಅಂತ ನೊಂದು ಕೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಖುಷಿ ವಿಷಯವೊಂದು ಸಿಕ್ಕಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವತಾರದಲ್ಲಿಯೇ ಜೂ.ಪವರ್‌ಸ್ಟಾರ್ ಎಂಟ್ರಿಯಾಗಿದೆ. ಯುವರಾಜ್‌ಕುಮಾರ್ ಚೊಚ್ಚಲ ಸಿನಿಮಾ ಒಂದಿಷ್ಟು ದಿನಗಳ ಕಾತುರದ ಮೇಲೆ ಗ್ರ್ಯಾಂಡ್ ಆಗಿ ಸೆಟ್ಟೇರಿದೆ.
'ಯುವ' ಕಂಡು ಅಪ್ಪು ಫ್ಯಾನ್ಸ್ ಭಾವುಕರಾಗಿದ್ದೇಕೆ? ಯುವ ರಾಜ್‌ಕುಮಾರ್ ಅನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರೋದು ನಿರ್ದೇಶಕ ಸಂತೋಷ್ ಆನಂದ್‌ರಾಮ್. 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ', 'ರಾಜಕುಮಾರ' ಹಾಗೂ 'ಯುವರತ್ನ'ದಂತಹ ಸಿನಿಮಾಗಳನ್ನು ಕೊಟ್ಟಿರೋ ನಿರ್ದೇಶಕರ ಮೇಲೆ ಎಲ್ಲಿಲ್ಲದ ನಂಬಿಕೆಯಿದೆ. ಆ ನಿರೀಕ್ಷೆಯಂತೆಯೇ ಟೈಟಲ್ ಟೀಸರ್ ಕೂಡ ಪ್ರಾಮಿಸಿಂಗ್ ಆಗಿದೆ. 'ಯುವ' ಟೈಟಲ್ ಟೀಸರ್ ನೋಡಿ ರಾಜವಂಶದ ಅಭಿಮಾನಿಗಳು ಖುಷಿಯಲ್ಲಿ ಕುಣಿದಾಡಿದ್ದಾರೆ.
ಇದನ್ನೂ ಓದಿ-Virushka : ʼಇದು ಭಾರತೀಯ ಸಂಪ್ರದಾಯʼ.. ದೇವರ ಮುಂದೆ ಸಾಮಾನ್ಯರಂತೆ ಕುಳಿತ ʼಕೊಹ್ಲಿ ದಂಪತಿʼ..!
ಯುವ ಮೊದಲ ಚಿತ್ರದ ಟೈಟಲ್ ಟೀಸರ್ ರಿಲೀಸ್; ಖಡಕ್ ಡೈಲಾಗ್‌ಗಳಿಗೆ ಫ್ಯಾನ್ಸ್ ಫಿದಾ ಒಂದ್ಕಡೆ ಅಪ್ಪು ಜಾಗ ತುಂಬುವುದಕ್ಕೆ ಯುವ ರಾಜ್‌ಕುಮಾರ್ ಬಂದಿದ್ದ ಖುಷಿಯಲ್ಲಿದ್ದಾರೆ. ಹಾಗೇ ಪುನೀತ್ ರಾಜ್‌ಕುಮಾರ್ ಸಿನಿಮಾ ಇನ್ಮುಂದೆ ನೋಡುವುದಕ್ಕೆ ಆಗೋದಿಲ್ವಲ್ಲ ಅಂತ ನೊಂದುಕೊಂಡವರಿಗೆ ಹೊಸ ಭರವಸೆನೂ ಬಂದಂತಾಗಿದೆ. ಈ ಕಾರಣಕ್ಕೆ ಟೀಸರ್‌ನಲ್ಲಿ ಕಂಡ ಯುವನನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದರ ಜೊತೆಗೆ ಪುನೀತ್ ಹಾಗೂ ಯುವ ಇಬ್ಬರ ಮೊದಲ ಸಿನಿಮಾಗಿರುವ ಸಾಮ್ಯತೆಯನ್ನೂ ಹುಡುಕಿ ತೆಗೆದಿದ್ದಾರೆ.
'ಅಪ್ಪು'-'ಯುವ' ಶೀರ್ಷಿಕೆಯಲ್ಲಿ ಅಂತಹದ್ದೇನಿದೆ? ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ಸಿನಿಮಾ 'ಅಪ್ಪು'. ಇದು ಪುನೀತ್ ರಾಜ್‌ಕುಮಾರ್ ನೆಕ್ ನೇಮ್. ಇದನ್ನೇ ಟೈಟಲ್ ಆಗಿ ಇಡಲಾಗಿತ್ತು. ಈಗ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ 'ಯುವ'. ಇಬ್ಬರ ಮೊದಲ ಸಿನಿಮಾ ಟೈಟಲ್ ಅವರ ಹೆಸರುಗಳೇ ಆಗಿರೋದು ವಿಶೇಷ. ಹೀಗಾಗಿ ಯುವ ಕೂಡ ಅಪ್ಪು ಹಾದಿಯನ್ನೇ ಹಿಡಿದಿದ್ದಾರೆಂದು ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ 'ಅಪ್ಪು' ಸೂಪರ್ ಸಕ್ಸಸ್ ಕೊಟ್ಟು ಒಳ್ಳೆಯ ಬುನಾದಿ ಹಾಕಿತ್ತು. ಈಗ ಯುವ ರಾಜ್‌ಕುಮಾರ್ ಸರದಿ. ಈಗ 'ಯುವ'ಗೂ ಹೀಗೆ ಮೆಗಾ ಸಕ್ಸಸ್ ಸಿಗುತ್ತಾ? ಅನ್ನೋ ಕುತೂಹಲದಲ್ಲಿ ಅಭಿಮಾನಿಗಳು ಇದ್ದಾರೆ. ಅದಕ್ಕೆ ಈ ವರ್ಷದ ಕೊನೆಯ ತಿಂಗಳವರೆಗೂ ಕಾಯಲೇಬೇಕಿದೆ. ಅಲ್ಲಿವರೆಗೂ 'ಯುವ' ಗ್ಯಾಂಗ್ ವಾರ್ ಅನ್ನು ಹೇಗೆ ಎದುರಿಸುತ್ತಾನೆ? ಅನ್ನೋದನ್ನು ತಾಳ್ಮೆಯಿಂದ ಕಾಯಬೇಕಷ್ಟೇ.
ಇದನ್ನೂ ಓದಿ-Swara Bhaskar : ಫಸ್ಟ್ ನೈಟ್ ಫೋಟೋ ಹಂಚಿಕೊಂಡ ಸ್ವರಾ ಭಾಸ್ಕರ್, ಹೂವಿನ ಹಾಸಿಗೆ.. ಸ್ವರ್ಗದ ಅನುಭವ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.