Virushka : ʼಇದು ಭಾರತೀಯ ಸಂಪ್ರದಾಯʼ.. ದೇವರ ಮುಂದೆ ಸಾಮಾನ್ಯರಂತೆ ಕುಳಿತ ʼಕೊಹ್ಲಿ ದಂಪತಿʼ..!

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಶನಿವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ಈ ಜೋಡಿಯು ಇತರ ಆರಾಧಕರೊಂದಿಗೆ ದೇವಾಲಯದಲ್ಲಿ ಸಾಮಾನ್ಯರಂತೆ ಕುಳಿತು ಪ್ರಾರ್ಥಿಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ, ಇದು ಭಾರತೀಯ ಸಂಪ್ರದಾಯ ಅಂದ್ರೆ ಅಂತ ನೆಟ್ಟಿಗರು ಹೊಗಳುತ್ತಿದ್ದಾರೆ.

Written by - Krishna N K | Last Updated : Mar 4, 2023, 01:54 PM IST
  • ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.
  • ಇತರ ಆರಾಧಕರೊಂದಿಗೆ ದೇವಾಲಯದಲ್ಲಿ ಸಾಮಾನ್ಯರಂತೆ ಕುಳಿತು ಪ್ರಾರ್ಥಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.
  • ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಇಂದೋರ್‌ಗೆ ಪ್ರಯಾಣ ಬೆಳೆಸಿದ್ದರು.
Virushka : ʼಇದು ಭಾರತೀಯ ಸಂಪ್ರದಾಯʼ.. ದೇವರ ಮುಂದೆ ಸಾಮಾನ್ಯರಂತೆ ಕುಳಿತ ʼಕೊಹ್ಲಿ ದಂಪತಿʼ..! title=

Virushka : ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಶನಿವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ಈ ಜೋಡಿಯು ಇತರ ಆರಾಧಕರೊಂದಿಗೆ ದೇವಾಲಯದಲ್ಲಿ ಸಾಮಾನ್ಯರಂತೆ ಕುಳಿತು ಪ್ರಾರ್ಥಿಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ, ಇದು ಭಾರತೀಯ ಸಂಪ್ರದಾಯ ಅಂದ್ರೆ ಅಂತ ನೆಟ್ಟಿಗರು ಹೊಗಳುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಇಂದೋರ್‌ಗೆ ಪ್ರಯಾಣ ಬೆಳೆಸಿದ್ದರು. ಕೇವಲ ಮೂರು ದಿನಗಳ ಕಾಲ ನಡೆದ ಈ ಪಂದ್ಯ ಭಾರತ ಸೋಲನ್ನು ಅನುಭವಿಸಿತು. ನಂತರ ವಿರಾಟ್‌ ಅಲ್ಲಿಂದಲೇ ಉಜ್ಜಯಿನಿಯ ದೇವಾಲಯಕ್ಕೆ ತೆರಳಿದರು. ಇಂದೋರ್‌ನಿಂದ ಉಜ್ಜಯಿನಿ ದೇವಾಲಯ ಕೇವಲ ಎರಡು ಗಂಟೆಗಳ ಪ್ರಯಾಣವಾಗಿದೆ. ಇನ್ನು ದೇಗುಲದಲ್ಲಿ ದೇವರ ದರ್ಶನಕ್ಕೆ ಕೊಹ್ಲಿ ಜೋಡಿ ಸಾಮಾನ್ಯರಂತೆ ಕುಳಿತಿರುವ ಫೋಟೋಗಳು ವೈರಲ್‌ ಆಗಿದೆ.

ಇದನ್ನೂ ಓದಿ:  Swara Bhaskar : ಫಸ್ಟ್‌ ನೈಟ್‌ ಫೋಟೋ ಹಂಚಿಕೊಂಡ ಸ್ವರಾ ಭಾಸ್ಕರ್, ಹೂವಿನ ಹಾಸಿಗೆ.. ಸ್ವರ್ಗದ ಅನುಭವ!

ವೈರಲ್ ಫೋಟೋಗಳ ಮತ್ತು ವೀಡಿಯೊದಲ್ಲಿ, ಅನುಷ್ಕಾ ತೆಳು ಗುಲಾಬಿ ಬಣ್ಣದ ಸೂಟ್ ಧರಿಸಿರುವುದನ್ನು ಕಾಣಬಹುದು, ವಿರಾಟ್ ಬಿಳಿ ಶರ್ಟ್ ಮತ್ತು ಪ್ಯಾಂಟ್ ಅನ್ನು ಧರಿಸಿದ್ದಾರೆ. ಎಎನ್‌ಐ ಪ್ರಕಾರ, ಅನುಷ್ಕಾ ಶರ್ಮಾ, "ನಾವು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ ಮತ್ತು ಮಹಾಕಾಳೇಶ್ವರನ ದರ್ಶನ ಪಡೆದಿದ್ದೇವೆʼ ಎಂದು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅನುಷ್ಕಾ ಮತ್ತು ವಿರಾಟ್ ಹೆಚ್ಚು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. 

ಕಳೆದ ವರ್ಷ ವಿರುಷ್ಕಾ ಜೋಡಿ ಉತ್ತರಾಖಂಡಕ್ಕೆ ಹೋಗಿದ್ದರು. ಈ ವರ್ಷದ ಆರಂಭದಲ್ಲಿ ಋಷಿಕೇಶ ಮತ್ತು ವೃಂದಾವನ ಪ್ರವಾಸ ಬೆಳೆಸಿದ್ದರು. ಅಲ್ಲದೆ ತಮ್ಮ ಜೊತೆ ಪುತ್ರಿ ವಾಮಿಕಾಳನ್ನು ಕರೆದುಕೊಂಡು ಹೋಗಿದ್ದರು. ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿಯ ಆಶ್ರಮಕ್ಕೆ ಮತ್ತು ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಜಿ ಮಹಾರಾಜ್ ಅವರ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News