Archana Kottige: ಶುರುವಾಗಲಿದೆ ಅರ್ಚನಾ ಕೊಟ್ಟಿಗೆ ಅಭಿನಯದ ಸಾಲು ಸಾಲು ಚಿತ್ರಗಳ ಹಂಗಾಮ!

Archana Kottige: ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಅರ್ಚನಾಗೆ ಒಳ್ಳೆ ನಟಿ ಅನ್ನಿಸಿಕೊಳ್ಳುವ ಹೆಬ್ಬಯಕೆ ಇದೆ. ಇದೀಗ ಮತ್ತೊಂದಷ್ಟು ಅವಕಾಶಗಳೂ ಅವರನ್ನರಸಿ ಬರುತ್ತಿವೆ.

Written by - YASHODHA POOJARI | Edited by - Puttaraj K Alur | Last Updated : Aug 3, 2023, 02:55 PM IST
  • ಕಳೆದೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅರ್ಚನಾ ಕೊಟ್ಟಿಗೆ ಹೆಸರು ಪ್ರಸಿದ್ಧಿ ಪಡೆದುಕೊಂಡಿದೆ
  • ವಿಭಿನ್ನವಾದ ಪಾತ್ರಗಳ ಮೂಲಕವೇ ಗುರುತಿಸಿಕೊಳ್ಳುತ್ತಿರುವ ಅರ್ಚನಾ ಬ್ಯುಸಿ ನಟಿಯಾಗಿದ್ದಾರೆ
  • ಅರ್ಚನಾ ಅಭಿನಯಿಸಿರುವ ಚಿತ್ರಗಳೆಲ್ಲ ಸಾಲು ಸಾಲಾಗಿ ಬಿಡುಗಡೆಯ ಸರತಿಯಲ್ಲಿ ನಿಂತಿವೆ
Archana Kottige: ಶುರುವಾಗಲಿದೆ ಅರ್ಚನಾ ಕೊಟ್ಟಿಗೆ ಅಭಿನಯದ ಸಾಲು ಸಾಲು ಚಿತ್ರಗಳ ಹಂಗಾಮ! title=
ವಿಭಿನ್ನ ಆಲೋಚನೆಯ ನಟಿ ಅರ್ಚನಾ ಕೊಟ್ಟಿಗೆ

ಬೆಂಗಳೂರು: ಕಳೆದೊಂದು ವರ್ಷಗಳಿಂದೀಚೆಗೆ ಕನ್ನಡ ಚಿತ್ರರಂಗದಲ್ಲಿ ಅರ್ಚನಾ ಕೊಟ್ಟಿಗೆ ಎಂಬ ಹೆಸರು ಪ್ರಸಿದ್ಧಿ ಪಡೆದುಕೊಂಡಿದೆ. ಭಿನ್ನವಾದ ಪಾತ್ರಗಳ ಮೂಲಕವೇ ಗುರುತಿಸಿಕೊಳ್ಳುತ್ತಿರುವ ಅರ್ಚನಾ, ಕನ್ನಡ ಚಿತ್ರರಂಗದ ಮಟ್ಟಿಗೆ ಭಿನ್ನ ಆಲೋಚನೆಯ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಅವರಿಗೆ ನಾಯಕಿಯಾಗಿಯೇ ಫೇಮಸ್ ಆಗಬೇಕೆಂಬ ಉದ್ದೇಶವಿಲ್ಲ. ಪಾತ್ರ ಯಾವುದಾದರೂ ಅದು ಸವಾಲಿನದ್ದಾಗಿರಬೇಕು, ಪ್ರೇಕ್ಷಕರ ಮನಸಲ್ಲಿ ಅಚ್ಚಳಿಯದ ಛಾಪು ಮೂಡಿಸುವಂತಿರಬೇಕೆಂಬ ಮನಃಸ್ಥಿತಿ ಅವರದ್ದು. ಅದಕ್ಕೆ ತಕ್ಕುದಾಗಿಯೇ ಬಹಳಷ್ಟು ಅವಕಾಶಗಳು ಅವರನ್ನರಸಿ ಬರುತ್ತಿವೆ. ಇನ್ನೇನು ಅವರು ಅಭಿನಯಿಸಿರುವ ಚಿತ್ರಗಳೆಲ್ಲ ಸಾಲು ಸಾಲಾಗಿ ಬಿಡುಗಡೆಯ ಸರತಿಯಲ್ಲಿ ನಿಂತಿವೆ.

ಇತ್ತೀಚೆಗೆ ಹೇಗಾಗಿದೆಯೆಂದರೆ ಬಿಡುಗಡೆಯಾಗೋ ಸಿನಿಮಾಗಳಲ್ಲೆಲ್ಲ ಅರ್ಚನಾ ಇರುವಿಕೆಯೇ ದಟ್ಟವಾಗಿ ಕಾಣಿಸುತ್ತಿದೆ. ವಾರಗಳ ಹಿಂದಷ್ಟೇ ಬಿಡುಗಡೆಗೊಂಡು, ಇದೀಗ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಅದರಲ್ಲಿಯೂ ಅರ್ಚನಾ ಕೊಟ್ಟಿಗೆ ಒಂದೊಳ್ಳೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದಕ್ಕೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆಗಳೂ ಕೇಳಿ ಬರುತ್ತಿವೆ. ಇದರ ಬೆನ್ನಲ್ಲಿಯೇ ಅರ್ಚನಾ ನಟಿಸಿರುವ ಮತ್ತೊಂದಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ...

ಇದನ್ನೂ ಓದಿ: ಕೇರಳ ಸ್ಟೋರಿ ನಟಿ ಅದಾ ಶರ್ಮಾ ಆಸ್ಪತ್ರೆಗೆ ದಾಖಲು..! ಚೇತರಿಕೆಗಾಗಿ ಅಭಿಮಾನಿಗಳ ಪ್ರಾರ್ಥನೆ

‘ಬಯಲು ಸೀಮೆ’, ‘ಎಲ್ಲರ ಕಾಲೆಳೆಯುತ್ತೆ ಕಾಲ’, ‘ಜುಗಲ್ಬಂಧಿ’ ಮುಂತಾದ ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಅದೆಲ್ಲದರಲ್ಲಿ ಒಂದಕ್ಕಿಂತ ಒಂದು ಭಿನ್ನವೆಂಬಂಥಾ ಪಾತ್ರಗಳಲ್ಲಿ ಅರ್ಚನಾ ನಟಿಸಿದ್ದಾರಂತೆ. ‘ಜುಗಲ್ಬಂಧಿ’ ಚಿತ್ರದಲ್ಲಿ ಅರ್ಚನಾ ನೆಗೆಟಿವ್ ಶೇಡಿನ ಪಾತ್ರದಲ್ಲಿ ನಟಿಸಿದ್ದರೆ, ‘ಬಯಲು ಸೀಮೆ’ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ‘ಎಲ್ಲರ ಕಾಲೆಳೆಯುತ್ತೆ ಕಾಲ’ ಸಿನಿಮಾದಲ್ಲಿ ರ್ಯಾಪರ್ ಚಂದನ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಇಲ್ಲಿ ಅರ್ಚನಾ ಹಳ್ಳಿ ಸೀಮೆಯ ಬಜಾರಿಯಾಗಿ ನಟಿಸಿದ್ದಾರಂತೆ. ಈ ಎಲ್ಲಾ ಚಿತ್ರಗಳೂ ಒಂದರ ಹಿಂದೊಂದರಂತೆ ಬಿಡುಗಡೆಗೊಳ್ಳಲಿವೆ.

2018ರಲ್ಲಿ ‘ಅರಣ್ಯಕಾಂಡ’ ಚಿತ್ರದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಿದ್ದವರು ಅರ್ಚನಾ ಕೊಟ್ಟಿಗೆ. ಆ ನಂತರ ‘ವಾಸ್ ನಾನ್ ಪಕ್ಕಾ ಕಮರ್ಶಿಯಲ್’, ‘ಮೇಡ್ ಇನ್ ಬೆಂಗಳೂರು’, ‘ಡಿಯರ್ ಸತ್ಯಾ’, ‘ಕಟಿಂಗ್ ಶಾಪ್’, ‘ಹೊಂದಿಸಿ ಬರೆಯಿರಿ’, ಪ್ಯಾನ್‍ ಇಂಡಿಯಾ ಚಿತ್ರವಾದ ‘ವಿಜಯಾನಂದ’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಹೀಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಅರ್ಚನಾಗೆ ಒಳ್ಳೆ ನಟಿ ಅನ್ನಿಸಿಕೊಳ್ಳುವ ಹೆಬ್ಬಯಕೆ ಇದೆ. ಇದೀಗ ಮತ್ತೊಂದಷ್ಟು ಅವಕಾಶಗಳೂ ಅವರನ್ನರಸಿ ಬರುತ್ತಿವೆ. ಸದ್ಯ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿರೋ ಅರ್ಚನಾ, ಆ ಬಗೆಗಿನ ಮಾಹಿತಿಗಳನ್ನು ಸದ್ಯದಲ್ಲಿಯೇ ಪ್ರೇಕ್ಷಕರ ಮುಂದಿಡಲಿದ್ದಾರೆ.

ಇದನ್ನೂ ಓದಿ: OMG 2 Trailer: ವಿವಾದ ಸೃಷ್ಟಿಸುವುದಾ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸುವ ʻಒಎಂಜಿ 2’ ಸಿನಿಮಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News