ಪ್ರಭಾಸ್ ಮತ್ತು ಅನುಷ್ಕಾ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌..! ಶೀರ್ಘದಲ್ಲೇ ಒಂದಾಗಲಿದೆ ಸ್ಟಾರ್‌ ಜೊಡಿ

Prabhas and Anushka shetty : ಡಾರ್ಲಿಂಗ್‌ ಪ್ರಭಾಸ್‌ ಮತ್ತು ಸ್ವೀಟಿ ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದರು. ಅಲ್ಲದೆ ಕೆಲವು ವರ್ಷಗಳಿಂದ ಈ ಜೋಡಿ ಮದುವೆಯಾಗಲಿದೆ ಎನ್ನುವ ಸುದ್ದಿ ಇತ್ತು. ಇದೀಗ ಗುಡ್‌ ನ್ಯೂಸ್‌  ಒಂದು ಹೊರ ಬಿದ್ದಿದೆ.

Written by - Krishna N K | Last Updated : Aug 2, 2023, 09:56 PM IST
  • ಪ್ರಭಾಸ್‌ ಮತ್ತು ಅನುಷ್ಯಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ.
  • ಕೆಲವು ವರ್ಷಗಳಿಂದ ಈ ಜೋಡಿ ಮದುವೆಯಾಗಲಿದೆ ಎನ್ನುವ ರೂಮರ್ಸ್‌ ಇತ್ತು.
  • ಇದೀಗ ಮತ್ತೊಂದು ಗುಡ್‌ ನ್ಯೂಸ್‌ ಹೊರ ಬಿದ್ದಿದೆ.
ಪ್ರಭಾಸ್ ಮತ್ತು ಅನುಷ್ಕಾ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌..! ಶೀರ್ಘದಲ್ಲೇ ಒಂದಾಗಲಿದೆ ಸ್ಟಾರ್‌ ಜೊಡಿ title=

Prabhas and Anushka shetty movies : ರೆಬಲ್‌ ಸ್ಟಾರ್‌ ಪ್ರಭಾಸ್‌ ಮತ್ತು ಅನುಷ್ಯಾ ಶೆಟ್ಟಿ ಸಿನಿಮಾಗಳು ತೆರೆ ಮೇಲೆ ಬಂದ್ರೆ ಸಾಕು ಬಾಕ್ಸ್‌ ಆಫೀಸ್‌ ಧೂಳಿಪಟವಾಗುತ್ತೆ. ಆದ್ರೆ ಇತ್ತೀಚಿಗೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದರು. ಅಲ್ಲದೆ ಕೆಲವು ವರ್ಷಗಳಿಂದ ಈ ಜೋಡಿ ಮದುವೆಯಾಗಲಿದೆ ಎನ್ನುವ ರೂಮರ್ಸ್‌ ಇತ್ತು. ಇದೀಗ ಮತ್ತೊಂದು ಗುಡ್‌ ನ್ಯೂಸ್‌ ಹೊರ ಬಿದ್ದಿದೆ.

ಆದಿಪುರುಷ ಸಿನಿಮಾದ ನಂತರ ಪ್ರಭಾಸ್‌ ನಟನೆಯ ಸಲಾರ್‌ ಚಿತ್ರದ ಮೇಲೆ ಫ್ಯಾನ್ಸ್‌ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದಾರೆ. ಇದೀಗ ಡಾರ್ಲಿಂಗ್‌ ಫ್ಯಾನ್ಸ್‌ಗೆ ಖಷಿ ನೀಡುವ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಭಾಸ್‌ ಮತ್ತು ಅನುಷ್ಕಾ ಒಟ್ಟಾಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಪಾತ್ರದಲ್ಲಿ ವಿಜಯ್‌ ಸೇತುಪತಿ ನಟನೆ..! ʼಲೀಡರ್ ರಾಮಯ್ಯʼ ಚಿತ್ರಕ್ಕೆ ತಮಿಳು ನಟ ನಾಯಕ

ಹೌದು.. ಸದ್ಯಕ್ಕೆ ಬೇಡಿಕೆಯ ಸ್ಟಾರ್ ಚಿತ್ರ ನಿರ್ದೇಶಕ ಲೋಕೇಶ್ ಕನಕರಾಜ್ ಈಗ ಪ್ರಭಾಸ್‌ಗಾಗಿ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಕೆಲವು ವರದಿಗಳು ಸುತ್ತುತ್ತಿವೆ. ಲಿಯೋವನ್ನು ಪೂರ್ಣಗೊಳಿಸಿ ಬಿಡುಗಡೆ ಮಾಡಿದ ನಂತರ ಪ್ರಭಾಸ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ವಿಜಯ್ ಅಭಿನಯದ ಲಿಯೋ ಚಿತ್ರವು ಅಕ್ಟೋಬರ್ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಬಾಹುಬಲಿ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಪ್ರಭಾಸ್ ಮತ್ತು ಲೋಕೇಶ್ ಅವರ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ, ಇದರಲ್ಲಿ ಅನುಷ್ಕಾ ನಿರ್ಣಾಯಕ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇನ್ನೊಬ್ಬ ಬಾಲಿವುಡ್ ನಾಯಕಿ ಕೂಡ ಈ ಚಿತ್ರದಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸಾರಾ ಲೆಹೆಂಗಾ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ..! ಫೋಟೋ ನೋಡಿ

ಈ ವದಂತಿಯಲ್ಲಿ ಯಾವುದೇ ಸತ್ಯ ಇಲ್ಲವಾದರೂ, ಪ್ರಸ್ತುತ ಈ ಬಗ್ಗೆ ಅಭಿಮಾನಿಗಳು ಮಾತ್ರ ಉತ್ಸುಕರಾಗಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಒಂದು ಸೂಪರ್‌ಹಿಟ್ ಜೋಡಿ, ಅವರು ನಿಜ ಜೀವನದಲ್ಲಿಯೂ ಸಹ ಸಂಬಂಧ ಹೊಂದಿದ್ದಾರೆ ಅಂತ ಹೇಳಲಾಗುತ್ತಿದೆ. ಆದರೆ ಇಬ್ಬರೂ ಯಾವಾಗಲೂ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News