Aryan Khan Drugs Case: ಬಾಲಿವುಡ್ (Bollywood) ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ 22 ದಿನಗಳ ಬಳಿಕ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಇಂದು ಹೊರಬರಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಆರ್ಯನ್ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಜೈಲಿನ ಜಾಮೀನು ಪೆಟ್ಟಿಗೆ ತೆರೆಯಲಾಗಿದೆ. ನಿನ್ನೆ ಸಂಜೆ ಆರ್ಯನ್ ಖಾನ್ (Aryan Khan) ಜಾಮೀನು ಆದೇಶದ ಪ್ರತಿಯನ್ನು ಜಾಮೀನು ಪೆಟ್ಟಿಗೆಯಲ್ಲಿ ಹಾಕಲಾಗಿದೆ. ಅಂದರೆ ಇದೀಗ ಆರ್ಯನ್ ಖಾನ್ ಬಿಡುಗಡೆಯ ಪ್ರಕ್ರಿಯೆ ಶುರುವಾಗಿದೆ. ತಡವಾದ ಕಾರಣ ನಿನ್ನೆ ಜಾಮೀನು ಪೆಟ್ಟಿಗೆ ತೆರೆಯಲಾಗಿರಲಿಲ್ಲ.
ಆರ್ಥರ್ ರೋಡ್ ಜೈಲಿನಿಂದ (Arthur Road Jail) ಹಿಡಿದು ಶಾರುಖ್ ಖಾನ್ (Sharukh Khan) ಮನೆಯವರೆಗೂ ಎಲ್ಲರ ಕಣ್ಣು ಮನ್ನತ್ ಮೇಲೆ ನೆಟ್ಟಿದೆ. ಶಾರುಖ್ ಮತ್ತು ಅವರ ಆಪ್ತರು ಆರ್ಯನ್ ಖಾನ್ (Aryan Khan) ನನ್ನು ಜೈಲಿನಿಂದ ಕರೆದುಕೊಂಡು ಹೋಗುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. ಅಕ್ಟೋಬರ್ 2 ರ ದಾಳಿಯ (Mumbai Drugs Party Case) ನಂತರ ಆರ್ಯನ್ ಜೈಲಿನಲ್ಲಿ ದೀರ್ಘಕಾಲ ಕಳೆಯಬೇಕಾಯಿತು. ಶಾರುಖ್ ಅವರ ನೆಚ್ಚಿನ ಪುತ್ರನಿಗೆ ಇದು ಸುಲಭದ ಕೆಲಸ ಆಗಿರಲಿಲ್ಲ. ಮುಂದಿನ ಹಾದಿಯೂ ಸುಲಭವಲ್ಲ, ಏಕೆಂದರೆ ಆರ್ಯನ್‌ಗೆ ಜಾಮೀನು ಸಿಕ್ಕಿದೆ ಆದರೆ, ಕೇಸ್‌ನಿಂದ ಇನ್ನೂ ಮುಕ್ತಿ ದೊರೆತಿಲ್ಲ.
ಆರ್ಯನ್ ಗೆ ಜಾಮೀನು ದೊರೆತಿದೆ, ಆದರೆ ಹಲವಾರು ಷರತ್ತುಗಳ ಆಧಾರದ ಮೇಲೆ
>> ತನಿಖಾಧಿಕಾರಿಯ ಅನುಮತಿ ಇಲ್ಲದೆ ಆರ್ಯನ್ ಖಾನ್ ಮುಂಬೈ ಬಿಡುವಂತಿಲ್ಲ.
>> ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು.
>> ಬೇರೆ ಯಾವುದೇ ಆರೋಪಿಗಳೊಂದಿಗೆ ಸಂಪರ್ಕದಲ್ಲಿರಬೇಕಾಗಿಲ್ಲ.
>> ತನಿಖೆಗೆ ಸಂಬಂಧಿಸಿದ ವಿಷಯಗಳನ್ನು ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತಿಲ್ಲ.
>> ಆರ್ಯನ್ ತನ್ನ ಪಾಸ್‌ಪೋರ್ಟ್ ಅನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಸಲ್ಲಿಸಬೇಕು.
>> ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರಗೆ ಹೋಗುವಂತಿಲ್ಲ.
>> ಯಾವುದೇ ಷರತ್ತನ್ನು ಉಲ್ಲಂಘಿಸಿದರೆ, ವಿಶೇಷ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲು ಎನ್‌ಸಿಬಿಗೆ ಅಧಿಕಾರ ಇದೆ.
ಇದನ್ನೂ ಓದಿ-Aryan Khan get Bail : ಆರ್ಯನ್ ಖಾನ್ ಗೆ ಜಾಮೀನು ಕೊಡಿಸಿದ ವಕೀಲ ಮುಕುಲ್ ರೋಹಟಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ಆರ್ಯನ್ ಖಾನ್ ಬಿಡುಗಡೆಗೆ ಸಂಬಂಧಿಸಿದಂತೆ ನಿನ್ನೆ ಎಲ್ಲ ಪ್ರಯತ್ನಗಳ ಬಳಿಕವೂ ಕೂಡ ಬೆಲ್‌ನ ಆದೇಶ ಪ್ರತಿ ಆರ್ಥರ್ ರೋಡ್ ಜೈಲು ಪೆಟ್ಟಿಗೆಯನ್ನು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಯನ್ ಅಕ್ಟೋಬರ್ 29 ರ ರಾತ್ರಿಯನ್ನು ಜೈಲಿನಲ್ಲಿ ಕಳೆಯಬೇಕಾಯಿತು. ಆದೇಶದ ಪ್ರತಿ ಜಾಮೀನು ಪೆಟ್ಟಿಗೆಗೆ ತಲುಪಿದಾಗ, ಜೈಲಿನೊಳಗೆ ಅದರ ನಂತರ ನಡೆಯುವ ಪ್ರಕ್ರಿಯೆ ಈ ಕೆಳಗಿನಂತಿದೆ.
ಇದನ್ನೂ ಓದಿ-Aryan Drugs Case : ಆರ್ಯನ್ ಖಾನ್‌ಗೆ ಕೊನೆಗೂ ಸಿಕ್ಕಿತು ಜಾಮೀನು : ಇಂದಿಗೆ ಅಂತ್ಯೆ 25 ದಿನಗಳ ಜೈಲು ವಾಸ!
>> ಜಾಮೀನು ಆದೇಶ ಬಂದ ಕೈದಿಯ ಕುರಿತು ಜೈಲಿನಲ್ಲಿ ಘೋಷಣೆ ಮಾಡಲಾಗುತ್ತದೆ.
>> ಆ ಬಳಿಕ ಒಬ್ಬೊಬ್ಬರಾಗಿ ಬಿಡುಗಡೆಯಾಗುವ ಕೈದಿಗಳನ್ನು ಕಚೇರಿಯ ಗೇಟ್ ಬಳಿ ಕರೆತರಲಾಗುತ್ತದೆ.
>> ಖೈದಿಯ ಹೆಸರಿನಲ್ಲಿ ಮತ್ತು ತಂದೆಯ ಹೆಸರಿನಲ್ಲಿ ಹಾಜರಾತಿಯನ್ನು ತೆಗೆದುಕೊಳ್ಳಲಾಗುತ್ತದೆ.
>> ನಂತರ ಖೈದಿಯನ್ನು ಕಚೇರಿಯೊಳಗೆ ಕರೆತರಲಾಗುತ್ತದೆ.
>> ಕೈದಿಯ ಬಟ್ಟೆಗಳನ್ನು ತೆಗೆದು ದೇಹದ ಮೋಲ್ ಅಥವಾ ಗುರುತು ಪರೀಕ್ಷಿಸಲಾಗುತ್ತದೆ.
>> ಈ ಗುರುತುಗಳನ್ನು ಜೈಲಿನ ಒಳಗಡೆ ಬರುವಾಗಲೇ ಗುರುತಿಸಲಾಗಿರುತ್ತದೆ ಮತ್ತು ಅವುಗಳನ್ನು ಬಿಡುಗಡೆ ಮಾಡುವಾಗಲು ಕೂಡ ಪರಿಶೀಲಿಸಲಾಗುತ್ತದೆ.
>> ಜೈಲರ್ ಸ್ವತಃ ಈ ಗುರುತುಗಳನ್ನು ಪರಿಶೀಲಿಸುತ್ತಾನೆ.
>> ನಂತರ ಕೈದಿಯ ಹೆಸರು, ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ಕೇಳಲಾಗುತ್ತದೆ.
ಇದನ್ನೂ ಓದಿ-Mumbai Drugs Case: ಇಂದೂ ಕೂಡ ಆರ್ಯನ್ ಖಾನ್ ಗೆ ಸಿಗಲಿಲ್ಲ ಜಾಮೀನು, ವಿಚಾರಣೆ ನಾಳೆಗೆ ಮುಂದುಡಿದ ಬಾಂಬೆ ಹೈ ಕೋರ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ