Prakash Raj : ಕನ್ನಡದ ನಟ, ಪರಭಾಷೆಗಳಲ್ಲಿಯೂ ಕರುನಾಡನ್ನು ಪ್ರತಿನಿಧಿಸುವ ಚಿಂತಕ ಪ್ರಕಾಶ್ ರಾಜ್. ತಮ್ಮ ಅತ್ಯುತ್ತಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆದವರು. ರಂಗಭೂಮಿ ಹಿನ್ನಲೆಯನ್ನು ಹೊಂದಿರುವ ಅವರು ಇಂದಿಗೂ ಅದರ ಮೇಲಿನ ಒಲವನ್ನು ಕಡಿಮೆ ಮಾಡಿಕೊಂಡಿಲ್ಲ. ರಂಗಭೂಮಿಗೆ ಪ್ರೋತ್ಸಾಹ ನೀಡುವ ಇವರು ಇದೀಗ ಒಂದು ಹೆಜ್ಜೆ ಮುಂದಿಟ್ಟು ಕಲೆಯ ಒಂದು ಬೃಹತ್ ವೇದಿಕೆಯನ್ನು ಸೃಷ್ಟಿಸಿದ್ದಾರೆ.
ಇವರು ಸೃಷ್ಟಿಸಿರುವ ಕಲಾವೇದಿಕೆಯ ಹೆಸರು ನಿರ್ದಿಗಂತ. ಇದು ಟ್ರೇನಿಂಗ್ ಶಾಲೆಯಲ್ಲ. ದಿಗಂತಕ್ಕೆ ಕರೆದೊಯ್ಯುವ ಸ್ಥಳ. ಇನ್ನು ಸಿನಿಮಾ ಹೊರತು ಪಡಿಸಿ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವಿಚಾರಗಳ ಕುರಿತು ಸದಾ ಸುದ್ದಿಯಲ್ಲಿರುತ್ತಾರೆ. ಕೇಂದ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡುವುದ, ಟೀಕೆ ಮಡುವುದು. ಜೊತೆಗೆ ಸರಿ ತಪ್ಪಗಳನ್ನು ತಿದ್ದುವ ಮತ್ತು ತಿವಿಯುವ ಕೆಲಸ ಮಾಡುತ್ತಾರೆ.
ಇದನ್ನೂ ಓದಿ-ಸದ್ಯದಲ್ಲೇ ತೆರೆಗೆ ಬರಲಿದೆ ʼ90 ಬಿಡಿ ಮನೀಗ್ ನಡಿʼ
ಪ್ರಕಾಶ್ ರಾಜ್ ಸೃಷ್ಟಿಸಿರುವ ಈ ನಿರ್ದಿಗಂತ ಎಂಬುದು ಏನಿದು? ಇದರ ಕಾರ್ಯವೇನು? ಇಲ್ಲಿದೆ ನೋಡಿ ಸಣ್ಣ ಮಾಹಿತಿ.. ಮೈಸೂರು ಜಿಲ್ಲೆಯ ಶ್ರೀರಂಗ ಪಟ್ಟಣದ ಕೆ. ಶೆಟ್ಟಿಹಳ್ಳಿ ಬಳಿಯ ಲೋಕಪಾವನಿ ನದಿ ತಟದಲ್ಲಿ ವಿಶಾಲವಾದ ತೋಟವನ್ನು ಪ್ರಕಾಶ ರಾಜ್ ಹೊಂದಿದ್ದಾರೆ. ರಾಜ್ಯದಲ್ಲಿ ಹತ್ತಾರು ರಂಗಸ್ಥಳಗಳಿಗೆ ಆದರೆ ತಾಲೀಮಿಗೆ ಸೂಕ್ತವಾದ ಸ್ಥಳವಿಲ್ಲ ಎಂಬುದನ್ನು ಅರಿತ ಪ್ರಕಾಶ್ ರಾಜ್ ಈ ನಿರ್ದಿಗಂತವನ್ನು ಸೃಷ್ಟಿಸಿದ್ದಾರೆ.
ಹಾಗಾದರೆ ಇದು ತರಬೇತಿ ಶಾಲೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್ "ಇದು ಟ್ರೇನಿಂಗ್ ಸೆಂಟರ್ ಅಲ್ಲ. ನಾವು ಇಲ್ಲಿ ನಾಟಕ ಮಾಡುತ್ತೇವೆ. ನಾಟಕನ್ನು ಎಂಜಾಯ್ ಮಾಡುತ್ತೇವೆ. ಇದು ಒಂದು ಬದುಕು. ಕಲಿಕೆ ಕ್ರಮ ಇಲ್ಲಿ ಬೇರೇಯದೇ ಇರುತ್ತದೆ. ಇದಂದು ವೇದಿಕೆ ತಾವು ಕಲಿತಿದ್ದನ್ನು ಅರ್ಪಿಸುವ ವೇದಿಕೆ. ಇನ್ನೊಬ್ಬರಿಂದ ನೋಡಿ ಕಲಿಯುತ್ತಾರೆ. ಕಲಿಕೆಯ ಹಸಿವು ನಿರಂತರವಲ್ಲವೇ" ಎಂದಿದ್ದಾರೆ ಸದ್ಯ ಪ್ರಕಾಶ ರಾಜ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ-Father's Day: ಫಾದರ್ಸ್ ಡೇ ಗೆ ವಿಭಿನ್ನ ಪೋಸ್ಟ್ ಹಂಚಿಕೊಂಡ ನಟಿ ರಾಧಿಕಾ ಪಂಡಿತ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.