Bhoomi Shetty: 'ಮಜಾ ಭಾರತ' ಶೋನಿಂದ ಭೂಮಿ ಶೆಟ್ಟಿ ಔಟ್..!?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಭಾರತ ಕಾಮಿಡಿ ಶೋನಿಂದ ಭೂಮಿ ಅಧಿಕೃತವಾಗಿ ಹೊರ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Written by - Zee Kannada News Desk | Last Updated : Jan 5, 2021, 09:28 PM IST
  • 'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆ ಮನೋರಂಜನೆ ಕ್ಷೇತ್ರದಕ್ಕೆ ಕಾಲಿಟ್ಟ ಎಂಜಿನಿಯರಿಂಗ್ ಹುಡುಗಿ, ಕುಂದಾಪುರದ ಮೀನು ಭೂಮಿ ಶೆಟ್ಟಿ
  • ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಹೆಚ್ಚಿನ ಜನಪ್ರಿಯತೆ ಪಡೆದ ಈ ಚೆಲುವೆ 'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಗುರುತಿಸಿಕೊಂಡರು.
  • ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಭಾರತ ಕಾಮಿಡಿ ಶೋನಿಂದ ಭೂಮಿ ಅಧಿಕೃತವಾಗಿ ಹೊರ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Bhoomi Shetty: 'ಮಜಾ ಭಾರತ' ಶೋನಿಂದ ಭೂಮಿ ಶೆಟ್ಟಿ ಔಟ್..!? title=
bhoomi shetty out from majaa bharatha (Photo: Twitter)

ಬೆಂಗಳೂರು: 'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆ ಮನೋರಂಜನೆ ಕ್ಷೇತ್ರದಕ್ಕೆ ಕಾಲಿಟ್ಟ ಎಂಜಿನಿಯರಿಂಗ್ ಹುಡುಗಿ, ಕುಂದಾಪುರದ ಮೀನು ಭೂಮಿ ಶೆಟ್ಟಿ. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಹೆಚ್ಚಿನ ಜನಪ್ರಿಯತೆ ಪಡೆದ ಈ ಚೆಲುವೆ 'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಗುರುತಿಸಿಕೊಂಡರು. ಆದರೀಗ ಅದರಿಂದಲ್ಲೂ ಹೊರ ಬಂದಿರುವುದನ್ನು ಕೇಳಿ ಕೇಳಿ ನೆಟ್ಟಿಗರು ಗೊಂದಲದಲ್ಲಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಭಾರತ ಕಾಮಿಡಿ ಶೋನಿಂದ ಭೂಮಿ(Bhoomi Shetty) ಅಧಿಕೃತವಾಗಿ ಹೊರ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ಇಂದು ನನ್ನ ಮಜಾ ಭಾರತ ಶೋನ ಕಡೆಯ ಶೋ. ನಾನು ಈ ಶೋ ನಿರೂಪಣೆ ನಿಲ್ಲಿಸುತ್ತಿದ್ದೇನೆ. ಅಧಿಕೃತ ಕಡೆ ಎಪಿಸೋಡ್ ಚಿತ್ರೀಕರಣ. ನೀವೆಲ್ಲರೂ ನನ್ನ ನಿರೂಪಣೆಯನ್ನು ಎಂಜಾಯ್ ಮಾಡಿದ್ದೀರಾ ಎಂದು ಭಾವಿಸಿರುವೆ. ನಾನೀಗೊಂದು ನಿಲುವು ತೆಗೆದುಕೊಂಡಿರುವೆ. ನೀವೆಲ್ಲರೂ ಇಷ್ಟು ದಿನಗಳ ಕಾಲ ಪ್ರೋತ್ಸಾಹ ನೀಡಿರುವುದಕ್ಕೆ ಧನ್ಯವಾದಗಳು. ರಚಿತಾ ರಾಮ್ ಹಾಗೂ ಗುರು ಕಿರಣ್ ಸರ್ ನೀವಿಬ್ಬರೂ ರತ್ನಗಳು. ಹರೀಶ್ ರಾಜ್‌ ನನ್ನಗೆ ಒಳ್ಳೆಯ ಪಾರ್ಟ್‌ನರ್‌ ಆಗಿದ್ದರು' ಎಂದು ಭೂಮಿ ಸ್ಟೋರಿ ಹಾಕಿದ್ದಾರೆ.

ಇದನ್ನೂ ಓದಿ :D BOSS : ಏಪ್ರಿಲ್ ಮೂರನೇ ವಾರ ತೆರೆ ಕಾಣಲಿದೆ ದರ್ಶನ್ ಅಭಿನಯದ ರಾಬರ್ಟ್

ಹೊರ ಬರಲು ಕಾರಣ? ಭೂಮಿ ಶೆಟ್ಟಿ ಶೋನಿಂದ ಹೊರ ಬರುತ್ತಿರುವ ವಿಚಾರ ಮಾತ್ರ ಬಹಿರಂಗ ಮಾಡಿದ್ದಾರೆ. ಆದರೆ ಯಾವ ಕಾರಣಕ್ಕೆ ಎಂದು ಕ್ಲಾರಿಟಿ ನೀಡಿಲ್ಲ. ಕೆಲವು ಮೂಲಗಳ ಪ್ರಕಾರ ಭೂಮಿಗೆ ತೆಲುಗು ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅವಕಾಶ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ :Rocking Star Yash: ರಫ್ ಎಂಡ್ ಟಫ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಫೋಟೋ ರಿಲೀಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

iOS Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News