D BOSS : ಏಪ್ರಿಲ್ ಮೂರನೇ ವಾರ ತೆರೆ ಕಾಣಲಿದೆ ದರ್ಶನ್ ಅಭಿನಯದ ರಾಬರ್ಟ್

ಕನ್ನಡ ಚಿತ್ರ ರಸಿಕರಿಗೆ ಏಪ್ರಿಲ್ ನಲ್ಲಿ ರಸದೌತಣ.. ಬ್ಬರು ಸ್ಟಾರ್ ನಟರ ಚಿತ್ರಗಳು ಈ ವರ್ಷ ಏಪ್ರಿಲ್ ತಿಂಗಳಲ್ಲಿ ತೆರೆ ಕಾಣಲಿದೆ. 

Written by - Zee Kannada News Desk | Last Updated : Jan 4, 2021, 04:15 PM IST
  • ಏಪ್ರಿಲ್ ನಲ್ಲಿ ರಿಲೀಸ್ ಆಗಲಿದೆ ಇಬ್ಬರು ಸ್ಟಾರ್ ನಟರ ಚಿತ್ರಗಳು
    ಏಪ್ರಿಲ್ 1ಕ್ಕೆ ಯುವರತ್ನ ತೆರೆ ಕಂಡರೆ, ಏಪ್ರಿಲ್ ಮೂರನೇ ವಾರದಲ್ಲಿ ರಾಬರ್ಟ್ ಬಿಡುಗಡೆ
    ರಾಬರ್ಟ್ ಬಿಡುಗಡೆಯ ದಿನಾಂಕವನ್ನು ಚಿತ್ರರಂಗ ಬಹಿರಂಗಪಡಿಸುವುದಷ್ಟೇ ಬಾಕಿ
 D BOSS : ಏಪ್ರಿಲ್ ಮೂರನೇ ವಾರ ತೆರೆ ಕಾಣಲಿದೆ ದರ್ಶನ್ ಅಭಿನಯದ ರಾಬರ್ಟ್ title=
ಏಪ್ರಿಲ್ ಮೂರನೆ ವಾರದಲ್ಲಿ ರಾಬರ್ಟ್ ತೆರೆಗೆ ಸಾಧ್ಯತೆ

ಬೆಂಗಳೂರು: ಸಿನಿಪ್ರಿಯರಿಗೊಂದು ಸಿಹಿ ಸುದ್ದಿ. ಈ ವರ್ಷ ಕನ್ನಡ ಚಿತ್ರರಂಗದ ದೊಡ್ಡಮಟ್ಟದ ಎರಡು ಚಿತ್ರಗಳು ಬಿಡುಗಡೆಯಾಗಲಿವೆ. ಎರಡೂ ಚಿತ್ರಗಳು ಏಪ್ರಿಲ್ ನಲ್ಲಿಯೇ ಬಿಡುಗಡೆಯಾಗಲಿವೆ. ಪವರ್ ಸ್ಟಾರ್ ನಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ನವರತ್ನ ಏಪ್ರಿಲ್ ಒಂದಕ್ಕೆ ತೆರೆ ಕಾಣಲಿದೆ ಎಂದು ಚಿತ್ರ ತಂಡ ಈಗಾಗಲೇ ಪ್ರಕಟಿಸಿದೆ. ಇನ್ನು ಡಿ ಬಾಸ್ ದರ್ಶನ್ (D BOSS) ಅಭಿನಯದ ರಾಬರ್ಟ್ (Roberrt) ಕೂಡಾ ಏಪ್ರಿಲ್ 3ನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ರಾಬರ್ಟ್ (Roberrt) ಗಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಅಭಿಮಾನಿಗಳ ಕಾಯುವಿಕೆ ಕೊನೆಗೊಳ್ಳಲಿದೆ.  ರಾಬರ್ಟ್ ತೆರೆಗೆ ಬರಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಚಿತ್ರ ಬಿಡುಗಡೆಯಾಗುವ ದಿನಾಂಕವನ್ನು ಚಿತ್ರರಂಗ ಪ್ರಕಟಿಸುವುದಷ್ಟೇ ಬಾಕಿಯಿದೆ. ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿದ್ದು, ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ರವಿ ಕಿಶನ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಐಶ್ವರ್ಯ ಪ್ರಸಾದ್ ಮತ್ತಿತರರು ಅಭಿನಯಿಸಿದ್ದಾರೆ. 

 ALSO READ: Rocking Star Yash: ರಫ್ ಎಂಡ್ ಟಫ್ ಲುಕ್ ನಲ್ಲಿ ರಾಕಿಂಗ್ ಸ್ಟಾರ್, ಕೆಜಿಎಫ್ ಚಾಪ್ಟರ್ 2 ಚಿತ್ರದ ಫೋಟೋ ರಿಲೀಸ್

ಎಲ್ಲವೂ ಸರಿಯಾಗಿದಿದ್ದರೆ ರಾಬರ್ಟ್ ಕಳೆದ ಏಪ್ರಿಲ್ ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ಮಹಾಮಾರಿಯ ಕಾರಣದಿಂದಾಗಿ ಚಿತ್ರ ತೆರೆ ಕಂಡಿರಲಿಲ್ಲ. ಇದೀಗ ಚಿತ್ರ ಬಿಡುಗಡೆಗೆ ಸಂಬಂಧಪಟ್ಟಂತೆ ಚಿತ್ರತಂಡ ಕೆಲಸ ಶುರು ಮಾಡಿದೆ. ಏಪ್ರಿಲ್ 3ನೇ ವಾರದಲ್ಲಿ ರಾಬರ್ಟ್ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಯಾವ ದಿನಾಂಕದಂದು ಸಿನೆಮಾ (Cinema) ತೆರೆಕಾಣಲಿದೆ ಎನ್ನುವುದನ್ನು ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.

ಸ್ಯಾಂಡಲ್ ವುಡ್ ನ (Sandalwood) ಇಬ್ಬರು ಸ್ಟಾರ್ ನಟರ ಚಿತ್ರ  ಒಂದೇ ತಿಂಗಳಲ್ಲಿ ತೆರೆ ಕಾಣುವ ಬಗ್ಗೆಯೂ ಕುತೂಹಲ ಮೂಡಿದೆ. ಆದರೆ ಈ ಮೊದಲು ಕೂಡಾ, ಪುನೀತ್ ರಾಜ್ ಕುಮಾರ್ (Puneeth Rajkumar) ಮತ್ತು ದರ್ಶನ್ (Darshan) ಚಿತ್ರಗಳು ಒಂದೇ ತಿಂಗಳಲ್ಲಿ ಅಥವಾ ಒಂದೇ ತಿಂಗಳ ಅಂತರದಲ್ಲಿ ಬಿಡುಗಡೆಯಾಗಿದೆ.  ಚಾಲೆಂಜಿಂಗ್ ಸ್ಟಾರ್ (Challenging Star) ಅಭಿನಯದ ಸಾರಥಿ 2011ರ ಸೆಪ್ಟೆಂಬರ್ ಕೊನೆಯಲ್ಲಿ ಬಿಡುಗಡೆಯಾದರೆ ಪುನೀತ್ ಅಭಿನಯದ ಪರಮಾತ್ಮ ಅಕ್ಟೋಬರ್ ನಲ್ಲಿ ತೆರೆ ಕಂಡಿತ್ತು. ಇನ್ನು ಚಕ್ರವರ್ತಿ ಮತ್ತು ರಾಜಕುಮಾರ ಚಿತ್ರಗಳು ಹೀಗೆ ಒಟ್ಒಟ್ಟಿಗೆ ರಿಲೀಸ್ ಆಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News