Tragedy: ಸೆಲ್ಫಿ ತೆಗೆದುಕೊಳ್ಳುವಾಗ ಜಲಪಾತದಿಂದ ಬಿದ್ದು ಪ್ರಸಿದ್ಧ ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್ ಸಾವು!

 ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸೋಫಿಯಾ ಚೆಯುಂಗ್ ದುರಂತ ಅಂತ್ಯ ಕಂಡಿದ್ದಾರೆ.

Written by - Puttaraj K Alur | Last Updated : Jul 15, 2021, 06:21 PM IST
  • ಜಲಪಾತದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ದುರ್ಘಟನೆ
  • ಸಮತೋಲನ ಕಳೆದುಕೊಂಡು 16 ಅಡಿ ಕೊಳಕ್ಕೆ ಬಿದ್ದು 32 ವರ್ಷದ ಸೋಫಿಯಾ ಸಾವು
  • ಪ್ರಸಿದ್ಧ ಮಹಿಳಾ ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್ ಆಗಿ ಖ್ಯಾತಿಯಾಗಿದ್ದ ಸೋಫಿಯಾ
Tragedy: ಸೆಲ್ಫಿ ತೆಗೆದುಕೊಳ್ಳುವಾಗ ಜಲಪಾತದಿಂದ ಬಿದ್ದು ಪ್ರಸಿದ್ಧ ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್ ಸಾವು! title=
ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್ ಸೋಫಿಯಾ ಚೆಯುಂಗ್

ನವದೆಹಲಿ: ಪ್ರಸಿದ್ಧ ಮಹಿಳಾ ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್ ಸೋಫಿಯಾ ಚೆಯುಂಗ್ ದುರಂತ ಅಂತ್ಯ ಕಂಡಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಜಲಪಾತದಿಂದ ಬಿದ್ದು 32 ವರ್ಷದ ಸೋಫಿಯಾ ಸಾವನ್ನಪ್ಪಿದ್ದಾರೆ.

ಹಾಂಗ್ ಕಾಂಗ್(Hong Kong)ನ ಸುಂದರ ಪ್ರಕೃತಿ ಉದ್ಯಾನವನವಾಗಿರುವ ‘ಹಾ ಪಾಕ್ ಲೈ’ಗೆ ತನ್ನ ಸ್ನೇಹಿತೆಯರೊಂದಿಗೆ ಸೋಫಿಯಾ ಹೊಗಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಜಲಪಾತದ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸೋಫಿಯಾ(Sofia Cheung) ಸಮತೋಲನ ಕಳೆದುಕೊಂಡು 16 ಅಡಿ ಆಳದ ಕೊಳಕ್ಕೆ ಬಿದ್ದಿದ್ದಾರೆ. ಕೂಡಲೇ ಆಕೆಯ ಸ್ನೇಹಿತೆಯರು ತುರ್ತು ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

 
 
 
 

 
 
 
 
 
 
 
 
 
 
 

A post shared by 🌵SOPHIA CHEUNG🌵 (@hike.sofi)

ಇದನ್ನೂ ಓದಿ: ಮೈಸೂರಿನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹಲ್ಲೆ: ಇಂದ್ರಜಿತ್ ಲಂಕೇಶ್ ದೂರು

ಸೋಫಿಯಾರನ್ನು ಹಾಂಗ್ ಕಾಂಗ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಸೋಫಿಯಾ ಪ್ರಸಿದ್ಧ ಮಹಿಳಾ ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್(Instagram Influencer) ಆಗಿ ಖ್ಯಾತರಾಗಿದ್ದರು. ಇನ್‌ಸ್ಟಾಗ್ರಾಮ್ ನಲ್ಲಿ18 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದ ಅವರು, ಅತ್ಯಂತ ಧೈರ್ಯಶಾಲಿ, ಸಾಹಸ ಪ್ರವೃತ್ತಿಯನ್ನು ಹೊಂದಿದ್ದರು. ಚಾರಣ, ಕಯಾಕಿಂಗ್, ಫೋಟೋಗ್ರಫಿ ಸೇರಿದಂತೆ ಅನೇಕ ಸಾಹಸಮಯ ಚಟುವಟಿಕೆಗಳನ್ನು ಮಾಡುತ್ತಿದ್ದರು.  

ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಸೋಫಿಯಾ ಆಗಾಗ ತಮ್ಮ ಸಾಹಸಮಯ ಸ್ಟಂಟ್ ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಅವು ಸಖತ್ ವೈರಲ್ ಆಗಿ ಸೋಫಿಯಾರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು. ತಮ್ಮ ಕೊನೆಯ ಪೋಸ್ಟ್ ಗೆ ಸೋಫಿಯಾ ‘ಉತ್ತಮ ದಿನಗಳು ಬರಲಿವೆ, ಅವುಗಳನ್ನು ಶನಿವಾರ ಮತ್ತು ಭಾನುವಾರವೆಂದು ಕರೆಯುತ್ತಾರೆ’ ಎಂಬ ಶೀರ್ಷಿಕೆ ನೀಡಿದ್ದರು.

ಇದನ್ನೂ ಓದಿ: Rocking Star: ತಮ್ಮ ಸ್ಟಾರ್‌ಡಮ್ ಸೀಕ್ರೆಟ್ ಬಿಚ್ಚಿಟ್ಟ ರಾಕಿ ಬಾಯ್..!

ಸೋಫಿಯಾ ನಿಧನದ ಸುದ್ದಿ ಅವರ ಸಾವಿರಾರು ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಂದೆರಗಿದೆ. ಅನೇಕರು ‘ರೆಸ್ಟ್ ಇನ್ ಪೀಸ್’ ಸಂದೇಶಗಳನ್ನು ಸೋಷಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಳ್ಳುವ ಮೂಲಕ ಸೋಫಿಯಾ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಒಟ್ಟಿನಲ್ಲಿ ಕೇವಲ ಒಂದು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಸಿದ್ಧ ಮಹಿಳಾ ಇನ್‌ಸ್ಟಾಗ್ರಾಮ್ ಇನ್​​​​ಫ್ಲ್ಯೂಯೆನ್ಸರ್ ಆಗಿದ್ದ ಸೋಫಿಯಾ ಚೆಯುಂಗ್(Sofia Cheung) ಪ್ರಾಣವನ್ನೇ ಕಳೆದುಕೊಂಡಿರುವುದು ದುರಂತವೇ ಸರಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News