ಗಾಯಕ ಅರ್ಮಾನ್ ಮಲಿಕ್ ತಂದೆಗೆ ಐಷಾರಾಮಿ ಬಂಗಲೆ ಮಾರಿದ ಅಕ್ಷಯ್ ಕುಮಾರ್! ಬೆಲೆ ಎಷ್ಟು ಗೊತ್ತಾ?

ಮುಂಬೈನ ಅಂಧೇರಿ ವೆಸ್ಟ್‌ನಲ್ಲಿ 1281 ಚದರ ಅಡಿ ಕಾರ್ಪೆಟ್ ಪ್ರದೇಶ ವ್ಯಾಪಿಸಿರುವ ಈ ಪ್ರಮುಖ ಆಸ್ತಿಯನ್ನು ಕೆಲವು ವರ್ಷಗಳ ಹಿಂದಷ್ಟೇ ಅಕ್ಷಯ್ ಕುಮಾರ್ 4.12 ಕೋಟಿ ರೂ.ಗೆ ಖರೀದಿಸಿದ್ದರು.

Written by - Puttaraj K Alur | Last Updated : Sep 24, 2022, 01:57 PM IST
  • ಗಾಯಕ ಅರ್ಮಾನ್ ಮಲಿಕ್ ತಂದೆಗೆ ಐಷಾರಾಮಿ ಬಂಗಲೆ ಮಾರಿದ ಅಕ್ಷಯ್ ಕುಮಾರ್
  • ಮುಂಬೈನ ಅಂದೇರಿಯಲ್ಲಿರುವ ಭವ್ಯ ಬಂಗಲೆ 6 ಕೋಟಿ ರೂ.ಗೆ ಮಾರಾಟ
  • 1281 ಚದರ ಅಡಿ ವಿಸ್ತೀರ್ಣ ಹೊಂದಿರುವ ಬಂಗಲೆಯನ್ನು 4.12 ಕೋಟಿಗೆ ಖರೀದಿಸಿದ್ದ ಅಕ್ಕಿ
ಗಾಯಕ ಅರ್ಮಾನ್ ಮಲಿಕ್ ತಂದೆಗೆ ಐಷಾರಾಮಿ ಬಂಗಲೆ ಮಾರಿದ ಅಕ್ಷಯ್ ಕುಮಾರ್! ಬೆಲೆ ಎಷ್ಟು ಗೊತ್ತಾ? title=
ಐಷಾರಾಮಿ ಬಂಗಲೆ ಮಾರಿದ ಅಕ್ಷಯ್ ಕುಮಾರ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್‍ನ ಅನೇಕ ಸೆಲೆಬ್ರಿಟಿಗಳು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ನಟಿ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ದಿನಕ್ಕೊಂದು ಪ್ರಾಪರ್ಟಿ ಖರೀದಿ ಮತ್ತು ಸೇಲ್ ಮಾಡುತ್ತಲೇ ಇರುತ್ತಾರೆ. ಇದೀಗ ಈ ಸಾಲಿಗೆ ಅಕ್ಷಯ್ ಕುಮಾರ್ ಸೇರಿಕೊಂಡಿದ್ದಾರೆ.

ಹೌದು, ಬಾಲಿವುಡ್‍ನಲ್ಲಿಯೇ ಅತಿಹೆಚ್ಚು ತೆರಿಗೆ ಕಟ್ಟುವ ನಟನೆಂಬ ಹೆಗ್ಗಳಿಕೆ ಹೊಂದಿರುವ ನಟ ಅಕ್ಷಯ್ ಕುಮಾರ್ ತಮ್ಮ ಐಶಾರಾಮಿ ಬಂಗಲೆಯನ್ನು ಮಾರಾಟ ಮಾಡಿದ್ದಾರೆಂದು ವರದಿಯಾಗಿದೆ. ಮುಂಬೈನ ಅಂದೇರಿಯಲ್ಲಿ ಭವ್ಯ ಬಂಗಲೆಯನ್ನು ಈ ಹಿಂದೆ ಅಕ್ಷಯ್ ಕುಮಾರ್ ಖರೀದಿ ಮಾಡಿದ್ದರು. ಈಗ ಅದೇ ಬಂಗಲೆಯನ್ನು ನಟ ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.  

ಇದನ್ನೂ ಓದಿ: Samantha Second Marriage: ಎರಡನೇ ಮದುವೆಗೆ ಸಮಂತಾ ರೆಡಿ.? ಇದೇ ಸಾಕ್ಷಿ!

ಅಂದಹಾಗೆ ಈ ಐಶಾರಾಮಿ ಬಂಗಲೆಯನ್ನು ಅಕ್ಷಯ್ ಕುಮಾರ್ ಅವರು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ತಂದೆಗೆ ಮಾರಿದ್ದಾರಂತೆ. ಬರೋಬ್ಬರಿ 6 ಕೋಟಿ ರೂ.ಗೆ ಬಂಗಲೆ ಡೀಲ್ ಆಗಿದೆ. ಅಂಧೇರಿ ವೆಸ್ಟ್‌ನಲ್ಲಿ 1281 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ವ್ಯಾಪಿಸಿರುವ ಈ ಪ್ರಮುಖ ಆಸ್ತಿಯನ್ನು ಕೆಲವು ವರ್ಷಗಳ ಹಿಂದಷ್ಟೇ ಅಕ್ಷಯ್ ಕುಮಾರ್ 4.12 ಕೋಟಿ ರೂ.ಗೆ ಖರೀದಿಸಿದ್ದರು.

ಬಾಲಿವುಡ್‌ನ ಖ್ಯಾತ ಗಾಯಕರಾಗಿರುವ ಅರ್ಮಾನ್ ಮಲಿಕ್ ಹಾಗೂ ಅಮಾಲ್ ಮಲಿಕ್ ತಂದೆ ದಾಬೂ ಮಲಿಕ್ ಅವರಿಗೆ 6 ಕೋಟಿ ರೂ.ಗೆ ಅಕ್ಷಯ್ ಕುಮಾರ್ ಐಶಾರಾಮಿ ಬಂಗಲೆ ಮಾರಿದ್ದಾರೆ. ದಾಬೂ ಮಲಿಕ್ ಸಹ ಬಾಲಿವುಡ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಈ ಆಸ್ತಿ ಮಾರಾಟದಿಂದ ಅಕ್ಕಿ ಹೆಚ್ಚುಕಡಿಮೆ 2 ಕೋಟಿ ರೂ. ಲಾಭ ಮಾಡಿಕೊಂಡಿದ್ದಾರಂತೆ.

ಇದನ್ನೂ ಓದಿ: Rashmika Mandanna: ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದ ನಟಿ ರಶ್ಮಿಕಾ ಮಂದಣ್ಣ..! 

ಅಂದೇರಿಯ ಟ್ರಾನ್ಸ್‌ಕಾನ್ ಟ್ರ್ಯಾಂಪ್ ಟವರ್ 1ರಲ್ಲಿರುವ A2104 ಬಂಗಲೆಯ ವಿಸ್ತೀರ್ಣ 1281 ಚದರ ಅಡಿ. ಇದರಲ್ಲಿ 59 ಚದರ ಅಡಿ ಬಾಲ್ಕನಿ ಇದೆಯಂತೆ. ಆಗಸ್ಟ್ 12ರಂದೇ ಇಬ್ಬರೂ ಈ ಡೀಲ್‍ಗೆ ಓಕೆ ಅಂದಿದ್ದಾರಂತೆ. ಇನ್ನು ಅಕ್ಷಯ್ ಕುಮಾರ್ ಮುಂಬೈನಲ್ಲಿಯೇ ಹಲವು ಬಂಗಲೆಗಳನ್ನು ಹೊಂದಿದ್ದಾರಂತೆ. ಬೋರಿವಲಿ, ಮುಲುಂಡ್ ಹಾಗೂ ಜೂಹುವಿನಲ್ಲಿ ಅವರಿಗೆ ಸೇರಿದ ಐಶಾರಾಮಿ ಬಂಗಲೆಗಳಿವೆ ಎಂದು ತಿಳಿದುಬಂದಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News