ಮೀಸೆ ಎಲ್ಲಿದೆ.. ಅವ್ರರಿಗೆ ಗಡ್ಡ ಇದ್ಯಾ..! : ಬಿಗ್‌ಹೌಸ್‌ನಲ್ಲಿ ʼಪಟ ಪಟ ಚಿತ್ರಟಪʼ

ಬಿಗ್‌ಬಾಸ್‌ ಮನೆ ಮಂದಿ ಇಂದು ಸಖತ್‌ ಬ್ಯುಸಿಯಾಗಿದ್ರು. ಮನೆ ಮಂದಿಗೆ ಫೋಟೋಗಳ ತುಣುಕು ಕೊಟ್ಟು ಬಿಗ್‌ಬಾಸ್‌ ಆಡು... ಆಟ ಆಡು.. ಅಂತ ತುಂಡು ತುಂಡಾಗಿದ್ದ ಫೋಟೋಗಳನ್ನು ಜೋಡಿಸುವ ʼಪಟ ಪಟ ಚಿತ್ರಪಟʼ ಟಾಸ್ಕರ್‌ ನೀಡಿದ್ರು. ಮನೆ ಸದಸ್ಯರು ಪೂರ್ಣ ಫೋಟೋ ಜೋಡಿಸುವಲ್ಲಿ ಸಾಕಪ್ಪ ಸಾಕು ಎನ್ನುತಿದ್ದರು.

Written by - Krishna N K | Last Updated : Oct 17, 2022, 09:37 PM IST
  • ಬಿಗ್‌ಹೌಸ್‌ನಲ್ಲಿ ʼಪಟ ಪಟ ಚಿತ್ರಟಪʼ ಟಾಸ್ಕ್‌
  • ಮನೆ ಮಂದಿಗೆ ಫೋಟೋಗಳ ತುಣುಕು ಕೊಟ್ಟು ಜೋಡಿಸು ಎಂದ ಬಿಗ್‌ಬಾಸ್‌
  • ಗಡ್ಡ ಎಲ್ಲಿದೆ.. ನಿಮ್ದು ಮೀಸೆ ಇತ್ತಾ... ಅಂತ ತಲೆ ಕೆರೆದುಕೊಂಡ ಸ್ಪರ್ಧಿಗಳು
ಮೀಸೆ ಎಲ್ಲಿದೆ.. ಅವ್ರರಿಗೆ ಗಡ್ಡ ಇದ್ಯಾ..! : ಬಿಗ್‌ಹೌಸ್‌ನಲ್ಲಿ ʼಪಟ ಪಟ ಚಿತ್ರಟಪʼ title=

Bigg Boss 9 : ಬಿಗ್‌ಬಾಸ್‌ ಮನೆ ಮಂದಿ ಇಂದು ಸಖತ್‌ ಬ್ಯುಸಿಯಾಗಿದ್ರು. ಮನೆ ಮಂದಿಗೆ ಫೋಟೋಗಳ ತುಣುಕು ಕೊಟ್ಟು ಬಿಗ್‌ಬಾಸ್‌ ಆಡು... ಆಟ ಆಡು.. ಅಂತ ತುಂಡು ತುಂಡಾಗಿದ್ದ ಫೋಟೋಗಳನ್ನು ಜೋಡಿಸುವ ʼಪಟ ಪಟ ಚಿತ್ರಪಟʼ ಟಾಸ್ಕರ್‌ ನೀಡಿದ್ರು. ಮನೆ ಸದಸ್ಯರು ಪೂರ್ಣ ಫೋಟೋ ಜೋಡಿಸುವಲ್ಲಿ ಸಾಕಪ್ಪ ಸಾಕು ಎನ್ನುತಿದ್ದರು.

ಹೌದು, ಬಿಗ್‌ಬಾಸ್‌ನಲ್ಲಿ ಟಾಸ್ಕ್‌ಗಳ ಸುರಿಮಳೆ ಸುರಿಯುತ್ತಿದೆ. ದರ್ಶ್‌ ಎಲಿಮಿನೆಟ್‌ನಂತರ ಫುಲ್‌ ಅರ್ಲಟ್‌ ಆಗಿರುವ ಸ್ಪರ್ಧಿಗಳು ಫುಲ್‌ ಜೋಶ್‌ನಲ್ಲಿ ಆಟವಾಡುತ್ತಿದ್ದಾರೆ. ಇನ್ನು ವಿವಿಧ ಫೋಟೋಗಳ ತುಣುಕು ಕೊಟ್ಟು ಇವುಗಳನ್ನು ಸರಿಯಾಗಿ ಜೋಡಿಸಿ ಅಂತ ಡೊಡ್ಮನೆ ಮಂದಿಗೆ ಬಿಗ್‌ಬಾಸ್‌ ಟಾಸ್ಕ್‌ ನೀಡಿದ್ದರು. ಕಷ್ಟ ಪಟ್ಟು ಕೆಲ ಸ್ಪರ್ಧಿಗಳು ಟಾಸ್ಕ್‌ ಮುಗಿಸಿದ್ರೆ, ಇನ್ನು ಕೆಲ ಸ್ಪರ್ಧಿಗಳು ಎಲ್ಲಿಂದ ಮೀಸೆ ಎಲ್ಲಿದೆ, ಗಡ್ಡ ಎಲ್ಲಿದೆ.. ನಿಮ್ದು ಮೀಸೆ ಇತ್ತಾ... ಅಂತ ತಲೆ ಕೆರೆದುಕೊಂಡು ಹುಡುಕಾಡುತ್ತಿದ್ದರು.

ಇದನ್ನೂ ಓದಿ: ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ತಾತ-ಮೊಮ್ಮಗ..!

ಆರ್ಯವರ್ಧನ್‌ ಗುರೂಜಿ ಅಂತೂ ಬರೋಬ್ಬರಿ ಹುಲ್ಲಿನ ರಾಶಿ ಮೇಲೆ ತುಂಡು ತುಂಡಾಗಿದ್ದ ಫೋಟಗಳ ತುಣುಕುಗಳನ್ನು ಹಾಕಿ, ಅದರಲ್ಲಿ ಯಾರ ಚಿತ್ರವಿದೆ ಅಂತ ತಲೆ ಮೇಲೆ ಆಕಾಶವೇ ಬಿದ್ದಿರುವಂತೆ ಕುಳಿತಿದ್ದರು. ಇನ್ನು ಕಾವ್ಯಶ್ರೀ ಗೌಡ ನಮ್ಮ ಕೈಯಿಂದ ಆಗೋದು ಇಲ್ಲ ನಾನು ಮಾಡೋದು ಇಲ್ಲ ಬಿಗ್‌ಬಾಸ್‌ ಅಂತ ತಲೆ ಮೇಲೆ ಕೈಯಿಟ್ಟುಕೊಂಡು ಹೊರಟರು, ಅರುಣ್‌ ಸಾಗರ್‌ ಅಂತು ತುಂಬಾ ಸೀರಿಯಸ್‌ ಆಗಿ ಟಾಸ್ಕ್‌ ತೆಗೆದುಕೊಂಡು ಆಟವಾಡುತ್ತಿದ್ರು. ಇನ್ನು ಎಲ್ಲಿಂದ ಸ್ಟಾರ್‌ ಮಾಡ್ಬೇಕು ಎನ್ನುವ ಡಬಲ್‌ ಮೀನಿಂಗ್‌ ಮಾತಿಗೆ ಮನೆ ಮಂದಿ ನಕ್ಕು ಸುಮ್ಮನಾದ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News