​BBK10: 'ಬಿಗ್ ಬಾಸ್ ಕನ್ನಡ 10' ಮನೆಗೆ ಕಾಲಿಟ್ಟ ಬೋಲ್ಡ್ ಬ್ಯೂಟಿ ಯಾರು ಗೊತ್ತಾ?

Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ್ದು.. ಈಗ ಇಬ್ಬರು ಸ್ಪರ್ಧಿಗಳು ಮನೆಯೊಳಗಡೆ ಎಂಟ್ರಿಕೊಟ್ಟಿದ್ದಾರೆ... ಅವರಲ್ಲಿ ಒಬ್ಬರು ಈ ಬೋಲ್ಡ್‌ ಬ್ಯೂಟಿ.. ಹಾಗಾದರೆ ಯಾರೀಕೆ? ಅಂತೀರಾ ಈ ಸ್ಟೋರಿ ಓದಿ..  

Written by - Savita M B | Last Updated : Nov 27, 2023, 12:46 PM IST
  • ಸದ್ಯ ಕಲರ್ಸ್‌ ಕನ್ನಡ ವೈಲ್ಡ್‌ ಕಾರ್ಡ್‌ ಎಂಟ್ರಿಯ ಪ್ರೋಮೋ ರಿಲೀಸ್‌ ಮಾಡಿದೆ
  • ಕೆಂಪು ಕಾರಿನಲ್ಲಿ ಇಬ್ಬರೂ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಕ್ಕೆ ಬಂದಿಳಿದಿದ್ದಾರೆ
  • ಬೋಲ್ಡ್‌ ಬ್ಯೂಟಿ ಬಿಗ್‌ ಬಾಸ್‌ಮನೆಗೆ ಬಂದಿದ್ದಾರೆ
​BBK10: 'ಬಿಗ್ ಬಾಸ್ ಕನ್ನಡ 10' ಮನೆಗೆ ಕಾಲಿಟ್ಟ ಬೋಲ್ಡ್ ಬ್ಯೂಟಿ ಯಾರು ಗೊತ್ತಾ?  title=

BBK Wild Card Entry: ಸದ್ಯ ಕಲರ್ಸ್‌ ಕನ್ನಡ ವೈಲ್ಡ್‌ ಕಾರ್ಡ್‌ ಎಂಟ್ರಿಯ ಪ್ರೋಮೋ ರಿಲೀಸ್‌ ಮಾಡಿದೆ.. ಅದರಲ್ಲಿ ಕೆಂಪು ಕಾರಿನಲ್ಲಿ ಇಬ್ಬರೂ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಕ್ಕೆ ಬಂದಿಳಿದಿರುವುದು ಸ್ಪಷ್ಟವಾಗಿದೆ.. ಆದರೆ ಆ ಇಬ್ಬರೂ ಸ್ಪರ್ಧಿಗಳು ಯಾರು ಎಂಬುದು ಮಾತ್ರ ಸಿಕ್ರೇಟ್‌ ಆಗಿದೆ.. 

ಪ್ರೋಮೋ ನೋಡಿದ ವೀಕ್ಷಕರು ಉದಯ್‌ ಸೂರ್ಯ.. ಶೈನ್‌ ಶೆಟ್ಟಿ .. ಪವಿ ಪೂವಪ್ಪ .. ಎಂದೆಲ್ಲಾ ಹೆಸರುಗಳನ್ನು ಹೇಳುತ್ತಿದ್ದಾರೆ.. ಆದರೆ ಯಾರು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ... ಇದೆಲ್ಲವೂ ತಿಳಿಯಬೇಕಾದರೆ ಬಿಗ್ ಬಾಸ್ ಕನ್ನಡ ಸೀಸನ್ 10 ಶೋನ ಇಂದಿನ ಎಪಿಸೋಡ್ ವರೆಗೂ ಕಾಯಲೇಬೇಕು.. 

ಇದನ್ನೂ ಓದಿ-Keerthy Suresh: OTT ಹಾದಿ ಹಿಡಿದ ಸೌತ್‌ ಬ್ಯೂಟಿ..! ಪ್ಯಾನ್ ಇಂಡಿಯಾ ಲೆವೆಲ್‌ಗೆ ವೆಬ್ ಸಿರೀಸ್

ಆದರೆ ಸೋಷಿಯಲ್‌ ಮಿಡಿಯಾದ ಊಹೆಯ ಪ್ರಕಾರ ಬೋಲ್ಡ್‌ ಬ್ಯೂಟಿ ಪವಿ ಪೂವಪ್ಪ ಲೇಡಿ ಕಂಟೆಸ್ಟಂಟ್‌ ಆಗಿದ್ದಾರೆ.. ಹೌದು ಸದ್ಯ ಪವಿ ಅವರ ಪೋಟೋಗಳು ಸಾಮಾಜಿಕ ಜಾಲತಾಣದ ತುಂಬೆಲ್ಲಾ ಹರಿದಾಡುತ್ತಿದೆ... ಆದರೆ ಯಾವುದು ನಿಜ ಯಾವುದು ಸುಳ್ಳು ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ..

ಇನ್ನು ಮೂಲತಃ ಮಾಡೆಲ್ ಆಗಿರುವ ಪವಿ ಪೂವಪ್ಪ ಅವರು 1500ಕ್ಕೂ ಅಧಿಕ ಶೋಗಳನ್ನು ಮಾಡಿದ್ದಾರೆ.. ಜೊತೆಗೆ ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಎಂಬ ಟೈಟಲ್‌ನ್ನು ಸಹ ಈ ಚೆಲುವೆ ಪಡೆದುಕೊಂಡಿದ್ದಾಳೆ.. ಹಾಗಾದರೆ ಬಿಗ್‌ ಬಾಸ್‌ ಮನೆಗೆ ಬಂದಿದ್ದು ಇದೇ ಬೋಲ್ಡ್‌ ಬ್ಯೂಟಿನಾ ಅನ್ನೋದನ್ನು ಕಾದು ನೋಡಬೇಕಿದೆ.. 

ಇದನ್ನೂ ಓದಿ-ನನ್ನ ಹೆಂಡತಿ ನನ್ನನ್ನು ಹೊಡೆಯುತ್ತಾಳೆ..! ಆಲಿಯಾ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ರಣಬೀರ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News