ಮನೆಯಿಂದ ಬಂದ ಪತ್ರ ಓದೋಕು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌..! ಕಣ್ಣೀರು ಹಾಕ್ತೀದಾರೆ ದೊಡ್ಮನೆ ಮಂದಿ

Bigg Boss Kannada 10: ಮನೆಯಿಂದ ಬಂದ ಪತ್ರಗಳನ್ನು ಪಡೆಯಲು ಬಿಗ್‌ ಬಾಸ್‌ ಸ್ಪರ್ಧಿಗಳು ಟಾಸ್ಕ್‌ ಎದುರಿಸಬೇಕಾಗಿದೆ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್‌ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡಲಾಗುತ್ತಿದೆ. ಇದರಿಂದ ಮನೆಮಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

Written by - Krishna N K | Last Updated : Nov 16, 2023, 03:57 PM IST
  • ಮನೆಯಿಂದ ಬಂದ ಪತ್ರ ಪಡೆಯಲು ಸ್ಪರ್ಧಿಗಳ ಹರಸಾಹಸ
  • ಪ್ರತಿಯೊಂದು ಪತ್ರಕ್ಕೂ ಒಂದೊಂದು ಟಾಸ್ಕ್‌ ನೀಡಿದ ಬಿಗ್‌ಬಾಸ್‌
  • ಟಾಸ್ಕ್‌ನಲ್ಲಿ ಗೆದ್ದವರಿಗೆ ಮಾತ್ರ ಪತ್ರ ನೀಡಲಾಗುತ್ತಿದೆ.
ಮನೆಯಿಂದ ಬಂದ ಪತ್ರ ಓದೋಕು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌..! ಕಣ್ಣೀರು ಹಾಕ್ತೀದಾರೆ ದೊಡ್ಮನೆ ಮಂದಿ title=

BBK10 : ದೀಪಾವಳಿ ಹಬ್ಬದ ಖುಷಿಗಾಗಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮನೆಯಡುಗೆ ಕೊಟ್ಟು ಕಳಿಸಿದ್ದರು. ಇದೀಗ ಮನೆಯವರಿಂದ ಬಂದ ಪತ್ರಗಳನ್ನೂ ಕೊಡುತ್ತಿದ್ದಾರೆ. ಆದರೆ ಮನೆಯಡುಗೆ ತಿಂದಷ್ಟು ಸುಲಭವಾಗಿ ಪತ್ರಗಳು ಸ್ಪರ್ಧಿಗಳ ಕೈಗೆ ಸಿಗುತ್ತಿಲ್ಲ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್‌ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡುವುದಾಗಿ ಹೇಳಿದ್ದಾರೆ. 

ಈಗಾಗಲೇ ವಿನಯ್ ಗೌಡ ಮತ್ತು ನಮ್ರತಾ ಮನೆಯಿಂದ ಬಂದ ಪತ್ರಗಳನ್ನು ಪಡದುಕೊಳ್ಳಲು ಯಶಸ್ವಿಯಾಗಿದ್ದಾರೆ. ಕೆಲವು ಸದಸ್ಯರು ಪತ್ರಗಳನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಇನ್ನುಳಿದ ಸದಸ್ಯರ ಅದೃಷ್ಟಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ. 

ಇದನ್ನೂ ಓದಿ: ಸೌತ್‌ ನಟಿ ನಮಿತಾ ಪತಿಗೆ ಸಂಕಷ್ಟ: ವೀರೇಂದ್ರ ಚೌಧರಿಗೆ ಪೋಲೀಸರಿಂದ ನೋಟಿಸ್‌!

ಇಂದು ಬಿಗ್‌ಬಾಸ್‌ ಮನೆಯಲ್ಲಿ ಇನ್ನಷ್ಟು ಜನರಿಗೆ ಪತ್ರ ಪಡೆದುಕೊಳ್ಳಲು ಟಾಸ್ಕ್ ನೀಡಿದ್ದಾರೆ. ಟಾಸ್ಕ್‌ ಏನೋ ತುಂಬ ಸಿಂಪಲ್ ಆಗಿ ಕಾಣಿಸುತ್ತಿದೆ. ಕನ್‌ಫೆಷನ್ ರೂಮಲ್ಲಿ ಕೂತ ಇಬ್ಬರು, ಬಿಗ್‌ಬಾಸ್‌ ಮನೆಯ ಕುರಿತಾಗಿಯೇ ಕೇಳುವ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಬೇಕು. 

ಆ ಪ್ರಶ್ನೆಗಳು ಎಷ್ಟು ಸರಳವಾಗಿವೆಯೆಂದರೆ, ಪ್ರತಿದಿನವೂ ಅದನ್ನು ನೋಡುತ್ತ, ಬಳಸುತ್ತಲೇ ಇದ್ದರೂ ಅದು ಸ್ಪರ್ಧಿಗಳ ಗಮನಕ್ಕೆ ಬಂದಿಲ್ಲ. ಹಾಗಾಗಿಯೇ ಉತ್ತರ ಕೊಡುವುದೂ ಕಷ್ಟವಾಗಿದೆ. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಯಾರು ಗೆಲ್ಲುತ್ತಾರೆ? ಯಾರ ಮನೆಯಿಂದ ಬಂದ ಪತ್ರ ಸ್ಪರ್ಧಿಗಳ ಕೈಸೇರುತ್ತದೆ? ಯಾರು ನಿರಾಸೆಯಲ್ಲಿ ಮುಳುಗಬೇಕಾಗುತ್ತದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News