ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?

ಬಿಗ್ ಬಾಸ್ ಮನೆಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಹೌದು, ಬಿಗ್ ಬಾಸ್ ಸ್ಪರ್ಧಿ ತನಿಷಾ ಮತ್ತು ಡ್ರೋನ್ ಪ್ರತಾಪ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.  

Written by - Ranjitha R K | Last Updated : Nov 15, 2023, 10:31 AM IST
  • ತನಿಷಾ, ಪ್ರತಾಪ್ ವಿಚಾರಣೆ ನಡೆಸಿದ ಪೊಲೀಸರು
  • ಆಕ್ಷೇಪಾರ್ಹ ಪಡ ಬಳಕೆ ಹಿನ್ನೆಲೆಯಲ್ಲಿ ದೂರು
  • ಕುಂಬಳಗೋಡು ಪೊಲೀಸರಿಂದ ವಿಚಾರಣೆ
ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?  title=

ಬೆಂಗಳೂರು : ಟಿವಿಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಈ ಸೀಸನ್ ಬಹಳ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಇದಾದ ಬಳಿಕ ವರ್ತೂರು ಸಂತೋಷ್ ಕೆಲ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲವೂ ಸರಿಯಾಗಿ ವರ್ತೂರ್ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸಿ ತನ್ನ ಆಟ ಮುಂದುವರೆಸಿದ್ದಾರೆ. ಅಷ್ಟರಲ್ಲೇ ಬಿಗ್ ಬಾಸ್ ಮನೆಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

ತನಿಷಾ ಮತ್ತು ಡ್ರೋನ್ ಪ್ರತಾಪ್ ವಿಚಾರಣೆ : 
ಹೌದು, ಬಿಗ್ ಬಾಸ್ ಸ್ಪರ್ಧಿ ತನಿಷಾ ಮತ್ತು ಡ್ರೋನ್ ಪ್ರತಾಪ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಪದ ಬಳಸಿರುವ ಆರೋಪದ ಮೇಲೆ ಇವರ ವಿಚಾರಣೆ ನಡೆಸಲಾಗಿದೆ. "ವಡ್ಡ ಅಲ್ಲಾ ವಡ್ಡನ ತರ ಆ್ಯಕ್ಟ್ ಮಾಡ್ತಿದೀಯಾ" ಎಂದು ಡ್ರೋನ್ ಪ್ರತಾಪ್ ಗೆ ಹೇಳಿರುವ ಆರೋಪದ ಮೇಲೆ ವಿಚಾರಣೆ ನಡೆಸಲಾಗಿದೆ. 

ಇದನ್ನೂ ಓದಿ : ತಮನ್ನಾ ಮದುವೆ ತಯಾರಿ!! ಮಿಲ್ಕಿ ಬ್ಯೂಟಿ ವಿವಾಹ ಎಲ್ಲಿ? ಯಾವಾಗ?

ಕುಂಬಳಗೋಡು ಪೊಲೀಸರಿಂದ ವಿಚಾರಣೆ :
ಬಿಗ್ ಬಾಸ್ ಕಾರ್ಯಕ್ರಮದಲ್ಲಿ "ವಡ್ಡ ಅಲ್ಲಾ ವಡ್ಡನಾ ತರ ಆ್ಯಕ್ಟ್ ಮಾಡ್ತಿದೀಯಾ" ಎಂದು ಡ್ರೋನ್ ಪ್ರತಾಪ್ ಗೆ ತನಿಷಾ ಹೇಳಿದ್ದಾರೆ ಎನ್ನಲಾಗಿದೆ. ಈ ಮಾತು ಬೋವಿ ಸಮುದಾಯಕ್ಕೆ ನೋವಾಗಿದೆ ಎಂದು ದೂರು ದಾಖಲಿಸಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಬಿಗ್ ಬಾಸ್ ಸೆಟ್ ಬಳಿ ತೆರಳಿ ವಿಚಾರಣೆ ನಡೆಸಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣಾ ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. 

ವರ್ತೂರ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ : 
ವರ್ತೂರ್ ಸಂತೋಷ್ ಬಂಧನ - ಬಿಡುಗಡೆಯಾಗಿ ಮತ್ತೆ ಮನೆಗೆ ಪ್ರವೇಶಿಸಿದ್ದರಾದರೂ ಆ ಘಟನೆ ಅವರನ್ನು ಇನ್ನೂ ಕಾಡುತ್ತಲೇ ಇದೆ. ಇದೇ ಕಾರಣದಿಂದತಾನು ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು ಎಂದು ವರ್ತೂರ್ ಹಠ ಹಿಡಿದಿದ್ದು, ನಂತರ ಅವರ ಅಮ್ಮನೇ ಬಂದು ಅವರನ್ನು ಸಮಾಧಾನಪದಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. 

ಇದನ್ನೂ ಓದಿ : ಖ್ಯಾತ ನಟಿಗೆ ಕಿಸ್‌ ಕೊಟ್ಟ ಅಲ್ಲು ಅರ್ಜುನ್‌ ತಮ್ಮ..! ಫೋಟೋ ವೈರಲ್

ಇದೀಗ ಮತ್ತೆ ತನಿಷಾ, ಪ್ರತಾಪ್ ಪೋಲೀಸ್ ವಿಚಾರಣೆ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಒಂದಲ್ಲ ಒಂದು ರೀತಿಯ ಕಂಟ್ರವರ್ಸಿ ನಡೆಯುತ್ತಲೇ ಇದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News