ಸಂಗೀತಾ ಶೃಂಗೇರಿ ಜೊತೆ ಸ್ನೇಹಿತ್ ಮದುವೆ‌ ಫಿಕ್ಸ್‌.. ಇದು ಕುಟುಂಬದವರ ನಿರ್ಧಾರವಂತೆ!

Sangeetha Sringeri Snehith Marriage : ನಿನ್ನೆಯ ಎಪಿಸೋಡ್‌ ನಲ್ಲಿ ಈ ಬಗ್ಗೆ ತೋರಿಸಲಾಗಿದೆ. ವಿನಯ್ ಜೊತೆ ಸಂಗೀತಾ ಮಾತನಾಡುತ್ತಾ ಕುಳಿತಿರುತ್ತಾರೆ. ಆಗ ಈ ವಿಚಾರ ಬಂದಿದೆ.

Written by - Chetana Devarmani | Last Updated : Nov 11, 2023, 09:41 AM IST
  • ಬಿಗ್‌ ಬಾಸ್‌ ಸ್ಪರ್ಧಿಗಳ ಮದುವೆ ಫಿಕ್ಸ್‌
  • ಸಂಗೀತಾ ಜೊತೆ ಸ್ನೇಹಿತ್ ಮದುವೆ
  • ಹೀಗಾದ್ರೆ ಕಾರ್ತಿಕ್‌ ಪಾಡೇನು?
ಸಂಗೀತಾ ಶೃಂಗೇರಿ ಜೊತೆ ಸ್ನೇಹಿತ್ ಮದುವೆ‌ ಫಿಕ್ಸ್‌.. ಇದು ಕುಟುಂಬದವರ ನಿರ್ಧಾರವಂತೆ!  title=
Sangeetha Snehith

Bigg Boss 10: ಬಿಗ್‌ ಬಾಸ್‌ ಮನೆಯಲ್ಲಿ ದಿನ ಕಳೆದಂತೆ ಸ್ಪರ್ಧಿಗಳು ಒಬ್ಬರಿಗೊಬ್ಬರು ಆತ್ಮೀಯರಾಗುತ್ತಿದ್ದಾರೆ. ಕಾರ್ತಿಕ್‌ ಹಾಗೂ ಸಂಗೀತಾ ಬೆಸ್ಟ್‌ ಫ್ರೆಂಡ್ಸ್‌ ಆಗಿದ್ದಾರೆ. ಕಾರ್ತಿಕ್‌ ಆಗಾಗ್ಗೆ ಸಂಗೀತಾ ಜೊತೆ ಫ್ಲರ್ಟ್‌ ಮಾಡ್ತಾ ಇರ್ತಾರೆ. ಸಂಗೀತಾ ಸಹ ಕಾರ್ತಿಕ್‌ ಅವರನ್ನು ತುಂಬಾ ಕೇರ್‌ ಮಾಡ್ತಾರೆ. ಬಿಗ್‌ ಬಾಸ್‌ ವೀಕ್ಷಕರಿಗೆ ಈ ಜೋಡಿ ಇಷ್ಟವಾಗುತ್ತಿದೆ. ಆದರೆ ಈ ಮಧ್ಯೆ ಬಿಗ್‌ ಟ್ವಿಸ್ಟ್‌ ಏನೆಂದರೆ ಸಂಗೀತಾ ಮತ್ತು ಸ್ನೇಹಿತ್‌ ಮದುವೆ ಫಿಕ್ಸ್‌ ಆಗಿರುವುದು. ಈ ಮದುವೆಯನ್ನು ಸಂಗೀತಾ ಮತ್ತು ಸ್ನೇಹಿತ್‌ ಕುಟುಂಬದವರೇ ನಿಶ್ಚಯ ಮಾಡಿದ್ದಾರೆ. 

ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ನಿನ್ನೆಯ ಎಪಿಸೋಡ್‌ ನಲ್ಲಿ ಈ ಬಗ್ಗೆ ತೋರಿಸಲಾಗಿದೆ. ವಿನಯ್ ಜೊತೆ ಸಂಗೀತಾ ಮಾತನಾಡುತ್ತಾ ಕುಳಿತಿರುತ್ತಾರೆ. ಆಗ ಈ ವಿಚಾರ ಬಂದಿದೆ. ಸಂಗೀತಾ ತಮಗೆ ಬಂದಿದ್ದ ಕನಸಿನ ಬಗ್ಗೆ ವಿನಯ್ ಬಳಿ ಹೇಳಿದ್ದರೆ. ಸಂಗೀತಾಗೆ ಒಂದು ವಿಚಿತ್ರ ಕನಸುಬಿದ್ದದೆಯಂತೆ. ಆ ಕನಸಿನಲ್ಲಿ ಮನೆಯವರು ಸ್ನೇಹಿತ್ ಜೊತೆಗೆ ಸಂಗೀತಾ ಮದುವೆ ಮಾಡಿಸುತ್ತಿದ್ದರಂತೆ. ಆದರೆ ಸಂಗೀತಾಗೆ ಈ ಮದುವೆಗೆ ಒಪ್ಪಿಗೆ ಇಲ್ಲವಂತೆ. 

ಇದನ್ನೂ ಓದಿ : Trisha Krishnan: 'ಥಗ್ ಲೈಫ್' ನಾಯಕಿ ತ್ರಿಶಾ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ? 

ಈ ಮದುವೆ ಬೇಡ.. ಸ್ನೇಹಿತ್ ಸರಿಯಿಲ್ಲ ಎಂದು ಸಂಗೀತಾ ಮನೆಯವರಿಗೆ ಹೇಳಿದರಂತೆ. ಅದಕ್ಕೆ ಸಂಗೀತಾ ಕುಟುಂಬಸ್ಥರು, ಅವನು ಬಹಳ ಶ್ರೀಮಂತ ಮದುವೆ ಮಾಡ್ಕೋ ಎನ್ನುತ್ತಿದ್ದರಂತೆ. ಸಂಗೀತಾ ಕನಸು ಕೇಳಿ ವಿನಯ್ ಜೋರಾಗಿ ನಕ್ಕಿದ್ದಾರೆ. 

ನಾನು ಸ್ನೇಹಿತ್ ಜೊತೆ ಮದುವೆಯಾಗಲ್ಲ, ಅವನಿಗಿಂತಲೂ ಕಾರ್ತಿಕ್ ಬೆಟರ್ ಅಂತ ಸಂಗೀತಾ ಇದೇ ಕನಸಿನಲ್ಲಿ ತಮ್ಮ ಮನೆಯವರಿಗೂ ಹೇಳಿದ್ದಾರಂತೆ. ಸ್ನೇಹಿತ್ ಬಳಿ ಹೋಗಿ, ನೀನಾದರೂ ನಿಮ್ಮ ಮನೆಯವರಿಗೆ ಹೇಳುವುದಲ್ಲವಾ.. ಆಕೆ ಆರೊಗೆಂಟ್ ಅಂತ ಎಂದು ಸಂಗೀತಾ ಹೇಳುತ್ತಾರಂತೆ. ಅದಕ್ಕೆ ಸ್ನೇಹಿತ್‌, ನಾನು ಬೇಡ ಅನ್ನಲ್ಲ, ಯಾರಾದರೂ ಇರಲಿ, ನನಗೆ ಮದುವೆ ಆದ್ರೆ ಸಾಕು ಅಂತಾರಂತೆ. 

ಸಂಗೀತಾ ಕನಸಿನ ಕತೆ ಕೇಳಿ ವಿನಯ್‌, ಇದು ಒಳ್ಳೆಯ ಕನಸೂ ಆಗಿರಬಹುದು.. ಯಾರಿಗೆ ಗೊತ್ತು ಕನಸು ನಿಜವೂ ಆಗಬಹುದು ಎಂದು ಹೇಳುತ್ತಾ ಎದ್ದು ಬಿದ್ದ ನಗಾಡಿದ್ದಾರೆ. ಬಿಗ್‌ ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್‌ ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಇದನ್ನೂ ಓದಿ : BBK10: "ಇದು ನನ್ನ ಟೀಂಗೆ ಮಾಡಿದ ಮೋಸ ಒಂದೇ ಅಲ್ಲ, ನನಗೆ ನಾನೇ ಮಾಡಿಕೊಂಡ ಮೋಸ": ಮೈಕಲ್ ಅಜಯ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News