ಬಿಸ್‌ ಬಾಸ್‌ 8 ವಿನ್ನರ್‌ ಮಂಜು ಪಾವಗಡ ಧಾರಾವಾಹಿಗೆ ಎಂಟ್ರಿ, ಏನಿದರ ಕಥೆ?

Manju Pavagada : ಬಿಗ್‌ ಬಾಸ್‌ ಸೀಸನ್‌ 8 ವಿನ್ನರ್‌ ಮಂಜು ಪಾವಗಡ ತಮ್ಮ ಕಾಮಿಡಿಯಿಂದಲೇ ಫೇಮಸ್‌, ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಹಾಸ್ಯ ನಟ...ಫೇಮಸ್‌ ಕಾಮಿಡಿ ಶೋ ಮಜಾ ಭಾರತ ಕಾರ್ಯಕ್ರಮದಿಂದ ಪ್ರಸಿದ್ಧಿಯಾಗಿದ್ದರು, ನಂತರ ಬಿಗ್ ಬಾಸ್ ಗೆ ಬಂದು ಮತ್ತಷ್ಟು ಪ್ರಖ್ಯಾತಿಯನ್ನು ಪಡೆದರು.  

Written by - Zee Kannada News Desk | Last Updated : Apr 27, 2023, 03:57 PM IST
  • ಇದೀಗ ಮಂಜು ಪಾವಗಡ ಮೊಟ್ಟ ಮೊದಲ ಬಾರಿಗೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ,
  • ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ
  • ಅಂತರಪಟ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಸ್‌ ಬಾಸ್‌ 8 ವಿನ್ನರ್‌ ಮಂಜು ಪಾವಗಡ ಧಾರಾವಾಹಿಗೆ ಎಂಟ್ರಿ, ಏನಿದರ ಕಥೆ? title=

Big Boss Season 8 : ಇದೀಗ ಮಂಜು ಪಾವಗಡ ಮೊಟ್ಟ ಮೊದಲ ಬಾರಿಗೆ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ, ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಅಂತರಪಟ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಂತರಪಟ ಧಾರಾವಾಹಿ ಕಥೆಯ ಕುರಿತು ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ ಮಂಜು ಪಾವಗಡ ಆರಾಧನಾ ಎಂಬ ಸ್ವಾಭಿಮಾನಿ ಹೆಣ್ಣು ಮಗಳ ಜೀವನದ ಸುತ್ತ ಸುತ್ತುತ್ತದೆ...ಆರಾಧನಾ ಚಿಕ್ಕವಳಿದ್ದಾಗ ತಂದೆಯನ್ನು ಕಳೆದುಕೊಂಡಿರುತ್ತಾಳೆ. ಅವಳ ತಾಯಿ ಮಗಳಿಗೆ ತಂದೆಯ ಪ್ರೀತಿ ದೊರಕಬೇಕೆಂದು ಎರಡನೇ ಮದುವೆಯಾಗುತ್ತಾರೆ. ಈ ರೀತಿಯ ಬ್ಯಾಗ್ರೌಂಡ್ ಇರುವ ಕಥೆ ಇದಾಗಿದೆ. ನನ್ನ ಪಾತ್ರ ಇದರಲ್ಲಿ ಬಹಳ ವಿಭಿನ್ನವಾಗಿದೆ. 

ಇದನ್ನೂ ಓದಿ-ಮನ್‌ ಕಿಬಾತ್‌ 100ನೇ ಸಂಚಿಕೆ ಸಮಾರಂಭದಲ್ಲಿ ಮೋದಿಯವರ ಬಗ್ಗೆ ಮಾತನಾಡಿದ ಆಮಿರ್ ಖಾನ್ ..! 

ನಾನು ಮೊಟ್ಟ ಮೊದಲ ಬಾರಿಗೆ ರಗಡ್‌ ವಿಲನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ, ಧಾರಾವಾಹಿ ತಂಡ ಹಾಗು ನಿರ್ದೇಶಕರಾದ ಸ್ವಪ್ನ ಕೃಷ್ಣ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಸಂತೋಷ ತಂದಿದೆ,ನನ್ನ ಜರ್ನಿ ಶುರುವಾಗಿದ್ದೇ ಕಿರುತೆರೆಯಿಂದ ಆದರೆ ಧಾರಾವಾಹಿಗೆ ಮೊಟ್ಟ ಮೊದಲ ಬಾರಿಗೆ ಎಂಟ್ರಿ  ಕೊಟ್ಟಿದ್ದೀನಿ, ಅಂತರಪಟ ಧಾರಾವಾಹಿ ಕಥೆ ಅದ್ಭುತವಾಗಿದೆ ಪ್ರತಿಯೊಬ್ಬರು ಮಿಸ್‌ ಮಾಡದೇ ನೋಡಿ ಎಂದು ಹೇಳಿದರು.

 

ನಂತರ ಬಿಗ್‌ ಬಾಸ್‌ ಶೋ ಬಗ್ಗೆ ಮಾತನಾಡಿದ ಮಂಜು ಪಾವಗಡ ನನ್ನ ಜೀವನವೇ ಬದಲಾಯಿಸಿದ್ದಂತಹ ಶೋ ಬಿಬ್‌ ಬಾಸ್‌ ಈ ಶೋ ವಿನ್ನರ್‌ ಆಗಿದ್ದು ಜೀವನವೇ ಸಾರ್ಥಕವಾಯ್ತು. ಇದೀಗ ಮತ್ತೊಮ್ಮೆ ಕಲರ್ಸ್‌ ಕನ್ನಡದಲ್ಲೇ ಅದ್ಭುತವಾಗಿರುವ ಧಾರಾವಾಹಿ ಮಾಡುತ್ತಿದ್ದೇನೆ. ಜೊತೆಗೆ ಮುಂಬರುವ ದಿನಗಳಲ್ಲಿ ಕೆಲವೊಂದು ಸಿನಿಮಾಗಳಲ್ಲು ನಟಿಸುತ್ತಿದ್ದೇನೆ ಎಂದರು.

ಇದನ್ನೂ ಓದಿ-Avatar : ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ 5 ಸಿಕ್ವೇಲ್ ಸಿನಿಮಾ ಇದು..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News