Mann Ki Baat : ಈ ಮನ್ ಕಿ ಬಾತ್ ಕಾರ್ಯಕ್ರಮ ಇದೀಗ 100ನೇ ಸಂಚಿಕೆಯನ್ನು ಪೊರೈಸಿದ್ದು, ಈ ತಿಂಗಳು ಏಪ್ರಿಲ್ 30ಕ್ಕೆ ಹೊಸ ಸಂಚಿಕೆ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರ ಆಗಲಿದೆ. ಈ 100ನೇ ಸಂಚಿಕೆಯ ಸಂಬಂಧಿತ ವಿಶೇಷ ರಾಷ್ಟೀಯ ಸಮಾವೇಶವು ದೆಹಲಿಯಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದಿಂದ ಗಣ್ಯರು ಆಗಮಿಸಿದ್ದರು.
ಈ ವಿಶೇಷ ಕಾರ್ಯಕ್ರಮವನ್ನು ಭಾರತದ ಉಪರಾಷ್ಟ್ರಪತಿ ಆಗಿರುವಂತಹ ಜಗದೀಪ್ ಧನಕರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಕಾರ್ಯಕ್ರದ ಅಥಿತಿಯಾಗಿ ಕೇಂದ್ರ ಸಚಿವ ಅನುರಾಗ್ ಕಶ್ಯಪ್ ಆಗಮಿಸಿದ್ದರು. ಜೊತೆಗೆ ಬಾಲಿವುಡ್ ನಟ ನಟಿಯರಾದ ಆಮಿರ್ ಖಾನ್, ರವೀನಾ ಟಂಡನ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
VIDEO | "It's a very important piece of communication that the leader of the country does with the people, discussing important issues, putting forward thoughts and giving suggestions," says Bollywood actor Aamir Khan at National Conclave on 'Mann Ki Baat @ 100' in Delhi. pic.twitter.com/jrUAawtyAC
— Press Trust of India (@PTI_News) April 26, 2023
ಇದನ್ನೂ ಓದಿ-Avatar : ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ 5 ಸಿಕ್ವೇಲ್ ಸಿನಿಮಾ ಇದು..!
ಈ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆಯ ಸಂಭ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟ ಆಮಿರ್ ಖಾನ್ ಮೋದಿಯವರ ಕಾರ್ಯಕ್ರಮವನ್ನು ಹೊಗಳಿದ್ದಾರೆ. ಕಾರ್ಯಕ್ರಮದ ಕುರಿತು ಮಾತನಾಡಿದ ಅವರು " ಒಂದು ದೇಶದ ನಾಯಕ ತನ್ನ ಪ್ರಜೆಗಳೊಂದಿಗೆ ಸಂವಹನ ನಡೆಸುವ ಅತೀ ಮುಖ್ಯವಾದ ಕಾರ್ಯಕ್ರಮವಿದು, ಪ್ರಮುಖ ವಿಷಯಗಳು, ಆಲೋಚನೆಗಳು, ಸಲಹೆಗಳನ್ನು ನೀಡುವುದು ಈ ಕಾರ್ಯಕ್ರಮದ ಮುಖ್ಯ ಅಂಗವಾಗಿದೆ" ಎಂದರು.
ಇದಲ್ಲದೇ ಬಾಲಿವುಡ್ ನಟ ಆಮಿರ್ ಖಾನ್ ಪ್ರಧಾನಿ ಮೋದಿ ಅವರ ಕುರಿತಾಗಿಯೂ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ಪ್ರಧಾಮನಿ ಕುರಿತು ಮಾತನಾಡಿದ ಅವರು "ಪರಿಣಾಮಕಾರಿ ಮಾತುಕಥೆ ಅಥವಾ ಸಂವಹನದೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ದಶದ ಜನರಿಗೆ ತಾವು ನೋಡಿರುವ ಮತ್ತು ಕಂಡಿರುವ ದೃಶ್ಯವನ್ನು ಹೇಳುತ್ತಾರೆ. ಮತ್ತು ತಮ್ಮ ದೃಷ್ಟಿಕೋನದಲ್ಲಿ ಭವಿಷ್ಯವನ್ನು ಯಾವರೀತಿ ನೋಡುತ್ತಾರೆ ಎನ್ನುವುದನ್ನು ತಿಳಿಸುತ್ತಾರೆ. ಓರ್ವ ದೇಶದ ನಾಯಕ ಜನರಿಂದ ಯಾವ ರೀತಿಯ ಬೆಂಬಲವನ್ನು ಬಯಸುತ್ತಾರೆ ಎನ್ನುವುದನ್ನು ತಿಳಿಯಲು ಈ ಮನ್ ಕಿ ಬಾತ್ ಕಾರ್ಯಕ್ರಮ ಒಂದು ಉತ್ತಮ ನಿದರ್ಶನ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-Photos: ಹೊಸ ಫೋಟೋ ಶೂಟ್ ನಲ್ಲಿ ಸುಪ್ರೀಂ ಲೇಡಿ ಬಾಸ್ ಆದ ಬಾಲಿವುಡ್ ನಟಿ ಅಲಿಯಾ ಭಟ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.