Sushant Singh Rajput ಮ್ಯಾನೇಜರ್ ದಿಶಾ ಸಾಲಿಯಾನ್ ಕುರಿತು ಸಂವೇದನಶೀಲ ಮಾಹಿತಿ ಬಹಿರಂಗಗೊಳಿಸಿದ ನಾರಾಯಣ್ ರಾಣೆ

ಸುಶಾಂತ್ ಸಿಂಗ್ ರಾಜ್ಪುತ್ ಅವರ ಕುರಿತು ಹೊಸ ಮಾಹಿತಿಗಳು ಬಹಿರಂಗವಾಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದ ರಹಸ್ಯ ಮತ್ತಷ್ಟು ಆಳವಾಗಿದೆ.

Updated: Aug 4, 2020 , 10:17 PM IST
Sushant Singh Rajput ಮ್ಯಾನೇಜರ್ ದಿಶಾ ಸಾಲಿಯಾನ್ ಕುರಿತು ಸಂವೇದನಶೀಲ  ಮಾಹಿತಿ ಬಹಿರಂಗಗೊಳಿಸಿದ ನಾರಾಯಣ್ ರಾಣೆ

ಮುಂಬೈ: ಸುಶಾಂತ್ ಸಿಂಗ್ ರಾಜ್ಪುತ್(Sushant Singh Rajput) ಅವರ ಕುರಿತು ಹೊಸ ಮಾಹಿತಿಗಳು ಬಹಿರಂಗವಾಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದ ರಹಸ್ಯ ಮತ್ತಷ್ಟು ಆಳವಾಗಿದೆ. ಜೂನ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ಫ್ಲಾಟ್ ನಲ್ಲಿ ಸುಶಾಂತ್ ಸಿಂಗ್ ರಾಜ್ಪುತ್ ಅವರ ಶವ ದೊರೆತಿತ್ತು. ಸುಶಾಂತ್ ಸಾವಿಗೂ ಮುನ್ನ ಜೂನ್ 9 ರಂದು ಸುಶಾಂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಿಶಾ ಮಲಾಡ್ ನಲ್ಲಿರುವ ಬಹುಮಹಡಿಯ ಕಟ್ಟಡವೊಂದರ 12 ಮಹಡಿಯಿಂದ ಕೆಳಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಪ್ರಕಟಗೊಂಡಿದ್ದವು.

ಪ್ರಸ್ತುತ ಸುಶಾಂತ್ ಸಿಂಗ್ ರಾಜ್ಪುತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ನಾರಾಯಣ್ ರಾಣೆ, ಸಂವೇದನಶೀಲ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಸುಶಾಂತ್ ಅವರ ಮಾಜಿ ಮ್ಯಾನೇಜರ್ ಅವರನ್ನು ರೇಪ್ ಮಾಡಿ ಹತ್ಯೆಗೈಯಲಾಗಿದ್ದು, ಮಹಾರಾಷ್ಟ್ರ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ವಕ್ತಾರೆ ಸಾಯಿನಾ ಎನ್.ಸಿ, ಪ್ರಕರಣದಲ್ಲಿ ಗಂಭೀರ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ ಎಂದಿದ್ದು, ಸಿಬಿಐ ತನಿಖೆಯ ಮೂಲಕವೇ ಇದರಲ್ಲಿ ಸತ್ಯ ಸುನಿಶ್ಚಿತವಾಗಲಿದೆ ಎಂದಿದ್ದಾರೆ.

ಇದಕ್ಕೂ ಮೊದಲು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಕೂಡ ಸುಶಾಂತ್ ಸಿಂಗ್ ಅವರ ತಂದೆ ಕೆ.ಕೆ ಸಿಂಗ್ ಅವರ ಮನವಿಯ ಮೇರೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಪ್ರಕರಣದಲ್ಲಿ CBI ತನಿಖೆ ನಡೆಸಲು ಶಿಫಾರಸು ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಹಾರದ DGP ಗುಪ್ತೆಶ್ವರ್ ಪಾಂಡೆ, ಇದು ಅನಿವಾರ್ಯವಾಗಿದೆ. ಏಕೆಂದರೆ ಮುಂಬೈ ಪೊಲೀಸರು ತನಿಖೆಯಲ್ಲಿ ಸಾಥ್ ನೀಡುತ್ತಿರಲಿಲ್ಲ, ಹೀಗಾಗಿ CBI ಇದೀಗ ಪ್ರಕರಣದ ತನಿಖೆ ನಡೆಸಲಿದೆ ಎಂದಿದ್ದಾರೆ.