50 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಖ್ಯಾತ ನಟ, ಮದುವೆಯಾಗದೇ ಎರಡನೇ ಮಗು ಪಡೆದ ಬಾಲಿವುಡ್‌ ತಾರೆ!

Arjun Rampal baby: ಕೆಲವು ತಿಂಗಳ ಹಿಂದೆ, ಅರ್ಜುನ್ ಮತ್ತು ಗೇಬ್ರಿಯೆಲಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಗೇಬ್ರಿಯೆಲಾ ಪ್ರೆಗ್ನೆನ್ಸಿ ಫೋಟೋಶೂಟ್ ಕೂಡ ಮಾಡಿಸಿದ್ದು, ಫೋಟೋಗಳು ವೈರಲ್ ಆಗಿದ್ದವು.   

Written by - Chetana Devarmani | Last Updated : Jul 21, 2023, 12:09 PM IST
  • ಎರಡನೇ ಮಗುವನ್ನು ಸ್ವಾಗತಿಸಿದ ಅರ್ಜುನ್ ಮತ್ತು ಗೇಬ್ರಿಯೆಲಾ
  • ಮದುವೆಯಾಗದೇ ಎರಡನೇ ಮಗು ಪಡೆದ ಬಾಲಿವುಡ್‌ ತಾರೆ!
  • 50 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಖ್ಯಾತ ನಟ
50 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಖ್ಯಾತ ನಟ, ಮದುವೆಯಾಗದೇ ಎರಡನೇ ಮಗು ಪಡೆದ ಬಾಲಿವುಡ್‌ ತಾರೆ!  title=
Arjun Rampal

Arjun Rampal - Gabriella Demetriades:  ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮತ್ತೆ ತಂದೆಯಾಗಿದ್ದಾರೆ. ಅವರ ಗೆಳತಿ ಗೇಬ್ರಿಯೆಲಾ ಡಿಮೆಟ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 50 ವರ್ಷದ ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು  ಹಂಚಿಕೊಂಡಿದ್ದು, ನಮ್ಮ ಮನೆಯಲ್ಲಿ ಗಂಡು ಮಗು ಜನಿಸಿರುವುದರಿಂದ ನಾನು ಮತ್ತು ನನ್ನ ಕುಟುಂಬ ತುಂಬಾ ಸಂತೋಷವಾಗಿದ್ದೇವೆ ಎಂದು ಬರೆದಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ವೈದ್ಯರು ಮತ್ತು ದಾದಿಯರ ಅದ್ಭುತ ತಂಡಕ್ಕೆ ಧನ್ಯವಾದಗಳು. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ. 

ಇದನ್ನೂ ಓದಿ: 

ಅರ್ಜುನ್ ಮತ್ತು ಅವರ ಗೆಳತಿ ಗೇಬ್ರಿಯೆಲಾ ಸುಮಾರು 5- 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಇನ್ನೂ ಮದುವೆಯಾಗಿಲ್ಲ. 2019 ರಲ್ಲಿ, ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು̤ ಮಗುವಿಗೆ ಅರಿಕ್ ರಾಂಪಾಲ್ ಎಂದು ಹೆಸರಿಟ್ಟರು. ಕೆಲವು ತಿಂಗಳ ಹಿಂದೆ, ಅರ್ಜುನ್ - ಗೇಬ್ರಿಯೆಲಾ  ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಂಚಿಕೊಂಡರು. ಇದಾದ ಬಳಿಕ ಗೇಬ್ರಿಯೆಲಾ ಪ್ರೆಗ್ನೆನ್ಸಿ ಫೋಟೋಶೂಟ್ ಕೂಡ ಮಾಡಿಸಿದ್ದು ವೈರಲ್ ಆಗಿದೆ. ಅರ್ಜುನ್ ಮತ್ತು ಗೇಬ್ರಿಯೆಲ್ಲಾ ಮದುವೆಯಾಗದೆ ಪೋಷಕರಾಗಲು ಮತ್ತು ಲಿವ್-ಇನ್‌ನಲ್ಲಿ ಇರುವ ಕಾರಣಗಳಿಂದ ಯಾವಾಗಲೂ ಟ್ರೋಲ್‌ಗಳಿಗೆ ಗುರಿಯಾಗುತ್ತಾರೆ. ಆದರೂ ಅವರು ಎಂದಿಗೂ ಅದರಿಂದ ತಲೆಕೆಡಿಸಿಕೊಂಡಿಲ್ಲ.

 

 

ಅರ್ಜುನ್ ಮೊದಲ ಮದುವೆ 2019 ರಲ್ಲಿ ಮುರಿದುಬಿತ್ತು. ಅವರು ತಮ್ಮ ಮೊದಲ ಪತ್ನಿ ಮೆಹರ್ ಜೆಸಿಯಾ ಅವರಿಂದ ವಿಚ್ಛೇದನ ಪಡೆದರು. ಮೆಹರ್ ಮತ್ತು ಅರ್ಜುನ್ ಅವರಿಗೆ ಮಹಿಕಾ ರಾಂಪಾಲ್ ಮತ್ತು ಮೈರಾ ರಾಂಪಾಲ್ ಎಂಬ ಇಬ್ಬರು ಪುತ್ರಿಯರಿದ್ದಾರೆ. ಅರ್ಜುನ್‌ ರಾಂಪಾಲ್ ಸದ್ಯ ಬಾಬಿ ಡಿಯೋಲ್ ಎದುರು ಮಸ್ತಾನ್ ಅವರ ಪೆಂಟ್‌ಹೌಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರೀಡಾ ಸಾಹಸ ಚಿತ್ರ ಕ್ರಾಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ ಕಂಗನಾ ರನೌತ್ ಎದುರು ಧಕಡ್ ಚಿತ್ರದಲ್ಲಿ ಕಾಣಿಸಿಕೊಂಡರು. 

ಇದನ್ನೂ ಓದಿ: 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News