ಖಾಸಗಿ ಫೋಟೋ ಲೀಕ್‌ ಬಗ್ಗೆ ಕಣ್ಣೀರಿಡುತ್ತಲೇ ಸ್ಪಷ್ಟನೆ ನೀಡಿದ ನಟ ವರುಣ್‌ ಆರಾಧ್ಯ!

ನಟ ವರುಣ್ ಆರಾಧ್ಯ ಕಣ್ಣೀರು ಹಾಕುತ್ತಾ ತಮ್ಮ ಮೇಲಿನ ಎಲ್ಲ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Written by - Chetana Devarmani | Last Updated : Sep 13, 2024, 01:00 PM IST
  • ಬೃಂದಾವನ ಧಾರಾವಾಹಿಯ ನಟ ವರುಣ್‌ ಆರಾಧ್ಯ
  • ಖಾಸಗಿ ಫೋಟೋ ಲೀಕ್‌ ಬಗ್ಗೆ ಸ್ಪಷ್ಟನೆ
  • ಕಣ್ಣೀರಿಡುತ್ತಲೇ ಸ್ಪಷ್ಟನೆ ನೀಡಿದ ನಟ ವರುಣ್‌ ಆರಾಧ್ಯ
ಖಾಸಗಿ ಫೋಟೋ ಲೀಕ್‌ ಬಗ್ಗೆ ಕಣ್ಣೀರಿಡುತ್ತಲೇ ಸ್ಪಷ್ಟನೆ ನೀಡಿದ ನಟ ವರುಣ್‌ ಆರಾಧ್ಯ! title=

ಬೃಂದಾವನ ಧಾರಾವಾಹಿಯ ನಟ ವರುಣ್‌ ಆರಾಧ್ಯ ಮೇಲೆ ಇತ್ತೀಚೆಗೆ ಬಹುದೊಡ್ಡ ಆರೋಪವೊಂದು ಕೇಳಿಬಂದಿತ್ತು. ಮಾಜಿ ಪ್ರೇಯಸಿಯ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾವಾಗಿತ್ತು. ಬಳಿಕ ಆ ಯುವತಿಯೇ ಇದೊಂದು ಸುಳ್ಳು ಸುದ್ದಿ ಎಂದು ಹೇಳಿದರು. ಅದಾದ ಬಳಿಕ ಯೂಟೂಬ್‌ನಲ್ಲಿ ವರುಣ್‌ ಆರಾಧ್ಯ ಣ್ಣೀರು ಹಾಕುತ್ತಾ ತನ್ನ ಮೇಲಿನ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.

ವರುಣ್‌ ಆರಾಧ್ಯ ಬಗ್ಗೆ ವರದಿಗಳು ಪ್ರಸಾರವಾದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವರ್ಷಾ ಕಾವೇರಿ  ತಾನು ಹಾಗೆ ದೂರು ನೀಡಿಲ್ಲ. ಇದು ಸುಳ್ಳು ಎಂದಿದ್ದರು.

ಇದನ್ನೂ ಓದಿ: ಯು ಟರ್ನ್ 2 ಖ್ಯಾತಿಯ ಚಂದ್ರು ಓಬಯ್ಯ ಹೊಸ ಚಿತ್ರದ ಟೈಟಲ್‌ ಲಾಂಚ್‌

ಆ ಬಳಿಕ ವಿಡಿಯೋ ಮಾಡಿರುವ ವರುಣ್‌ ಆರಾಧ್ಯ, ತುಂಬಾ ವರ್ಷಗಳಿಂದ ನಾನು ಮತ್ತು ವರ್ಷಾ ಒಟ್ಟಿಗೆ ರೀಲ್ಸ್ ಮಾಡಿದ್ದೇವೆ. ಅವರ ಹಲವಾರು ಫೋಟೋ ಮತ್ತು ಒಟ್ಟಿಗೆ ಮಾಡಿದ ರೀಲ್ಸ್  ನನ್ನ ಇನ್​ಸ್ಟಾಗ್ರಾಮ್‌ ಖಾತೆಯಲ್ಲಿವೆ ಎಂದಿದ್ದಾರೆ. 

ನಾವು ದೂರವಾದ ಬಳಿಕ ವರ್ಷಾ ಅದನ್ನೆಲ್ಲ ತೆಗೆಯುವಂತೆ ಹೇಳಿದ್ದರು. ಆದರೆ ನನಗೆ ಸಮಯ ಸಿಗದ ಕಾರಣ ಡಿಲೀಟ್‌ ಮಾಡಿರಲಿಲ್ಲ. ವರ್ಷಾ ವಕೀಲರ ಸಮ್ಮುಖದಲ್ಲಿ ಮಾತನಾಡಿ ಅವನ್ನೆಲ್ಲ ಡಿಲೀಟ್‌ ಮಾಡಿಸಲು ಸೂಚಿಸಿದರು. ವರ್ಷಾಗೆ ಮದುವೆ ನಿಶ್ಚಯವಾಗಲಿದೆ ಅದಕ್ಕೆ ಸಮಸ್ಯೆ ಆಗಬಾರದೆಂದು ಇದನ್ನೆಲ್ಲ ಡಿಲೀಟ್‌ ಮಾಡಲು ಹೇಳಿದ್ದರು ಅಷ್ಟೆ. ಬೆದರಿಕೆ ಆಗಲಿ, ಖಾಸಗಿ ಫೊಟೊಗಳಾಗಲಿ ಇಲ್ಲ ಎಂದು ತಿಳಿಸಿದ್ದಾರೆ. 

ಕಣ್ಣೀರು ಹಾಕುತ್ತಲೇ ವರುಣ್ ಆರಾಧ್ಯಾ ಈ ವಿಡಿಯೋ ಮಾಡಿದ್ದಾರೆ. ಜೀವನದಲ್ಲಿ ಬೆಳೆಯುವಾಗ ಪದೇ ಪದೇ ಅಡ್ಡಗಾಲು ಹಾಕುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಸ್ಟಾರ್‌ಡಮ್‌.. ಅದ್ದೂರಿ ಜೀವನ.. ಕೇವಲ 24 ವರ್ಷಕ್ಕೆ ಶಾರುಖ್‌ ಖಾನ್‌ ಪುತ್ರಿ ಎಷ್ಟು ಕೋಟಿ ಆಸ್ತಿ ಗೆ ಒಡತಿ ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News