Darshan and Sudeep : ಬೆನ್ನಿಗೆ ನಿಂತ ಕಿಚ್ಚನಿಗೆ 'ಧನ್ಯವಾದಗಳು' ಎಂದ ಡಿ ಬಾಸ್!

ಚಾಲೆಂಜಿಂಗ್ ಸ್ಟಾರ್ ದರ್ಶನಗೆ ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದು ಖಂಡಿಸಿದ್ದರು. ಈಗ ಈ ಬಗ್ಗೆ ದರ್ಶನ ಪ್ರತಿಕ್ರಿಯಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಗೆ ಟ್ಯಾಗ್ ಮಾಡಿ, ಕಿಚ್ಚ ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Last Updated : Dec 21, 2022, 10:25 PM IST
  • ಚಾಲೆಂಜಿಂಗ್ ಸ್ಟಾರ್ ದರ್ಶನ
  • ಹೊಸಪೇಟೆಯಲ್ಲಿ ನಡೆದ ಘಟನೆ
  • ಕಿಚ್ಚ ಸುದೀಪ್ ಸುದೀರ್ಘ ಪತ್ರ
Darshan and Sudeep : ಬೆನ್ನಿಗೆ ನಿಂತ ಕಿಚ್ಚನಿಗೆ 'ಧನ್ಯವಾದಗಳು' ಎಂದ ಡಿ ಬಾಸ್! title=

Darshan and Sudeep : ಚಾಲೆಂಜಿಂಗ್ ಸ್ಟಾರ್ ದರ್ಶನಗೆ ಹೊಸಪೇಟೆಯಲ್ಲಿ ನಡೆದ ಘಟನೆಯ ಬಗ್ಗೆ ಕಿಚ್ಚ ಸುದೀಪ್ ಸುದೀರ್ಘ ಪತ್ರ ಬರೆದು ಖಂಡಿಸಿದ್ದರು. ಈಗ ಈ ಬಗ್ಗೆ ದರ್ಶನ ಪ್ರತಿಕ್ರಿಯಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಗೆ ಟ್ಯಾಗ್ ಮಾಡಿ, ಕಿಚ್ಚ ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿಗೆ ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ತುಂಬಿದ ಜನಜಂಗುಳಿ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಇಡೀ ಕನ್ನಡ ಚಿತ್ರರಂಗದವರನ್ನು ಘಾಸಿಗೊಳಿಸಿತ್ತು, ಈ ಘಟನೆಗೆ ಬಹುತೇಕ ಸಿನಿ ಕಲಾವಿದರು ಖಂಡಿಸಿ ದರ್ಶನ್ ಪರ ನಿಂತಿದ್ದರು.

ಇದನ್ನೂ ಓದಿ : Ramya on Fans War: "ನಟರು ಅಭಿಮಾನಿಗಳಿಗೆ ತಿಳವಳಿಕೆ ಹೇಳಿ" - ನಟಿ ರಮ್ಯಾ ಬೇಸರ

ಒಂದು ಕಾಲದಲ್ಲಿ ಕುಚ್ಚಿಕು ಗೆಳೆಯರಾಗಿದ್ದು, ಹಲವು ಕಾರಣಗಳಿಂದ ದುರಾಗಿದ್ದ ಕಿಚ್ಚ ಸುದೀಪ್ ಸಹ ಈ ಘಟನೆಯನ್ನು ಖಂಡಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ ಘಟನೆಯನ್ನು ಖಂಡಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. 

ದರ್ಶನ್ ವಿಚಾರದಲ್ಲಿ ಅವರ ಬಗ್ಗೆ ಪುನೀತ್ ಅಭಿಮಾನಿಗಳಿಗೆ ಬೇಸರ, ಅಸಮಾಧಾನ ಇರಬಹುದು. ಆದರೆ ಇಂತಹ ಪ್ರತಿಕ್ರಿಯೆ ನೀಡುವುದನ್ನು ಸ್ವತಃ ಪುನೀತ್ ಅವರೇ ಪ್ರೋತ್ಸಾಹಿಸುತ್ತಿದ್ದರೇ, ಪುನೀತ್ ಹೇಗಿದ್ದರು, ಅವರು ಹೇಗೆ ಬಾಳಿ ಬದುಕಿದ್ದರು ಎಂದು ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸುತ್ತೇನೆ. 

ತುಂಬಿದ ಜನರ ಮಧ್ಯೆ ಒಬ್ಬರ ಕ್ಷುಲ್ಲಕ ನಡವಳಿಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು, ಪ್ರೀತಿ, ಗೌರವ ಮತ್ತು ಘಟನೆಯನ್ನು ಎತ್ತಿ ತೋರಿಸುವ ಪುನೀತ್ ಅಭಿಮಾನಿಗಳು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬಹುದು. 

ದರ್ಶನ್ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದಾಕ್ಷಣ ನನ್ನ ಮನಸ್ಸಿಗೆ ತಟ್ಟಿದ ವಾಸ್ತವ ವಿಷಯಗಳ ಬಗ್ಗೆ ಮಾತನಾಡುವುದನ್ನು ನಾನೆಂದಿಗೂ ನಿಲ್ಲಿಸುವುದಿಲ್ಲ. ಚಪ್ಪಲಿ ಎಸೆಯುವಂತಹ ಕೃತ್ಯಗಳಿಗೆ ಖಂಡಿತಾ ದರ್ಶನ್ ಅರ್ಹರಲ್ಲ, ಈ ಘಟನೆ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಹೀಗೆ ಕಿಚ್ಚ ಸುದೀಪ್ ಸುದೀರ್ಘ ಪತ್ರ ಒಂದನ್ನ ಬರೆದಿದ್ದರು.

ಇದನ್ನೂ ಓದಿ : ಈಗ ನನ್ನ 125 ಸಿನಿಮಾಗಳು ಆಗಿವೆ. ಅದು ಮುಂದೆ ಸಾವಿರ ಆಗಲಿ - ಹ್ಯಾಟ್ರಿಕ್ ಹೀರೋ ಶಿವಣ್ಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News