Chandan Shetty : ರಾಗಿಣಿಗೆ ʼ90ʼ ಕೊಡ್ಸೋಕೆ ರೆಡಿಯಾದ ಚಂದನ್‌ ಶೆಟ್ಟಿ..! ಸಖತ್‌ ಆಗಿದೆ ವಿಡಿಯೋ.. ನೋಡಿ

Elra Kaaleliyatte Kaala : ಚಂದನ್‌ ಶೆಟ್ಟಿ ನಟನೆಯ ʼಎಲ್ರ ಕಾಲೆಳೆಯುತ್ತೆ ಕಾಲʼ ಸಿನಿಮಾದ ಪ್ರಮೋಷನ್‌ ಹಾಡು ರಿಲೀಸ್‌ ಆಗಿದೆ. ಚಂದನ್ ಜೊತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಖತ್‌ ಸ್ಟೆಪ್‌ ಹಾಕಿದ್ದಾರೆ. ಈ ಸಾಂಗ್‌ನ್ನು ಸ್ವತಃ ಚಂದನ್ ಶೆಟ್ಟಿ ಸಂಯೋಜಿಸಿ ಹಾಡಿದ್ದು, ಟಾಲಿವುಡ್‌ ಸ್ಟಾರ್‌ ಸಿಂಗರ್‌ ಮಂಗ್ಲಿ ಸಹ ಈ ಟ್ರ್ಯಾಕ್‌ಗೆ ಧ್ವನಿ ನೀಡಿದ್ದಾರೆ.

Written by - Krishna N K | Last Updated : Apr 12, 2023, 01:40 PM IST
  • ಚಂದನ್ ಶೆಟ್ಟಿ ʼಎಲ್ರ ಕಾಲೆಳೆಯುತ್ತೆ ಕಾಲʼ ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ.
  • ʼಎಲ್ರ ಕಾಲೆಳೆಯುತ್ತೆ ಕಾಲʼ ಸಿನಿಮಾದ ಪ್ರಮೋಷನ್‌ ಹಾಡನ್ನು ಚಿತ್ರತಂಡ ರಿಲೀಸ್‌ ಮಾಡಿದೆ.
  • ಹಾಡಿನಲ್ಲಿ ಚಂದನ್ ಜೊತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಖತ್‌ ಸ್ಟೆಪ್‌ ಹಾಕಿದ್ದಾರೆ.
Chandan Shetty : ರಾಗಿಣಿಗೆ ʼ90ʼ ಕೊಡ್ಸೋಕೆ ರೆಡಿಯಾದ ಚಂದನ್‌ ಶೆಟ್ಟಿ..! ಸಖತ್‌ ಆಗಿದೆ ವಿಡಿಯೋ.. ನೋಡಿ title=

Chandan Shetty : ಸ್ಯಾಂಡಲ್‌ವುಡ್‌ ಖ್ಯಾತ ರ‍್ಯಾಪರ್ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಸುಜಯ್ ಶಾಸ್ತ್ರಿ ಅವರ ಮುಂಬರುವ ನಿರ್ದೇಶನದ ʼಎಲ್ರ ಕಾಲೆಳೆಯುತ್ತೆ ಕಾಲʼ ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಇಷ್ಟು ದಿನ ತಮ್ಮ ಹಾಡುಗಳ ಮೂಲಕ ಕರುನಾಡಿನ ಜನರ ಮನ ಗೆದ್ದಿದ್ದ, ಶೆಟ್ರು ಇದೀಗ ನಟನಯ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ಇದೀಗ ರಾಗಿಣಿ ಜೊತೆ ತಮ್ಮದೇ ಹಾಡಿಗೆ ರೀಲ್ಸ್‌ ಮಾಡಿರುವ ವಿಡಿಯೋ ಒಂದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ʼಎಲ್ರ ಕಾಲೆಳೆಯುತ್ತೆ ಕಾಲʼ ಸಿನಿಮಾದ ಪ್ರಮೋಷನ್‌ ಹಾಡು ರಿಲೀಸ್‌ ಆಗಿದೆ. ಈ ಹಾಡಿನಲ್ಲಿ ಚಂದನ್ ಜೊತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಖತ್‌ ಸ್ಟೆಪ್‌ ಹಾಕಿದ್ದಾರೆ. ಈ ಸಾಂಗ್‌ನ್ನು ಸ್ವತಃ ಚಂದನ್ ಶೆಟ್ಟಿ ಸಂಯೋಜಿಸಿ ಹಾಡಿದ್ದು, ಟಾಲಿವುಡ್‌ ಸ್ಟಾರ್‌ ಸಿಂಗರ್‌ ಮಂಗ್ಲಿ ಸಹ ಈ ಟ್ರ್ಯಾಕ್‌ಗೆ ಧ್ವನಿ ನೀಡಿದ್ದಾರೆ. ಮಾಸ್ಟರ್ ಮುರಳಿ ನೃತ್ಯ ಸಂಯೋಜನೆ ಈ ಸಾಂಗ್‌ಗೆ ಇದೆ.

ಇದನ್ನೂ ಓದಿ: Haripriya: ನಟಿ ಹರಿಪ್ರಿಯಾ ಫಸ್ಟ್ ಲವ್​ ವಸಿಷ್ಠ ಸಿಂಹ ಅಲ್ಲ!

80 ಮತ್ತು 90 ರ ದಶಕದಲ್ಲಿ ನಡೆಯುವ ಹಾಸ್ಯ ಕಥೆ ಆಧಾರಿತ ಸಿನಿಮಾದಲ್ಲಿ ಚಂದನ್‌ ಶೆಟ್ಟಿಗೆ ನಾಯಕಿಯಾಗಿ ಅರ್ಚನಾ ನಟಿಸಿದ್ದಾರೆ. ಚಿತ್ರದಲ್ಲಿ ಮಂಡ್ಯ ರಮೇಶ್, ಮಂಜು ಪಾವಗಡ, ರಾಕೇಶ್ ಪುರ್ಜರಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಗೋಕುಲ್ ಎಂಟರ್‌ಟೈನರ್ಸ್ ಅಡಿಯಲ್ಲಿ ಉಷಾ ಗೋವಿಂದರಾಜು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರವೀಣ್ ಮತ್ತು ಪ್ರದೀಪ್ ಸಂಗೀತ ನೀಡಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರ ತೆರೆ ಕಾಣಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News