'ಟೈಗರ್ ನಾಗೇಶ್ವರ್ ರಾವ್' ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಸಾಥ್!

'ದಿ ಕಾಶ್ಮೀರ್ ಫೈಲ್ಸ್' (The Kashmiri Files) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿರ್ಮಾಪಕ ಅಭಿಷೇಕ್ ಅರ್ಗವಾಲ್ ಟೈಗರ್ ನಾಗೇಶ್ವರ್ ರಾವ್ ಎಂಬ ಪ್ಯಾನ್ ಇಂಡಿಯಾ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ (Chiranjeevi), ಈ ಸಿನಿಮಾಗೆ ಕ್ಲಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

Written by - Chetana Devarmani | Last Updated : Apr 5, 2022, 08:03 PM IST
  • ಟೈಗರ್ ನಾಗೇಶ್ವರ್ ರಾವ್ ಎಂಬ ಪ್ಯಾನ್ ಇಂಡಿಯಾ ಸಿನಿಮಾಗೆ ಮುನ್ನುಡಿ
  • ಮಾಸ್ ಮಹಾರಾಜ ರವಿತೇಜ ನಾಯಕನಾಗಿರುವ ಸಿನಿಮಾ
  • ಈ ಸಿನಿಮಾಗೆ ಕ್ಲಾಪ್ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ
'ಟೈಗರ್ ನಾಗೇಶ್ವರ್ ರಾವ್' ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಸಾಥ್!   title=
ಟೈಗರ್ ನಾಗೇಶ್ವರ್ ರಾವ್

'ದಿ ಕಾಶ್ಮೀರ್ ಫೈಲ್ಸ್' (The Kashmiri Files) ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿರ್ಮಾಪಕ ಅಭಿಷೇಕ್ ಅರ್ಗವಾಲ್ ಟೈಗರ್ ನಾಗೇಶ್ವರ್ ರಾವ್ ಎಂಬ ಪ್ಯಾನ್ ಇಂಡಿಯಾ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಮಾಸ್ ಮಹಾರಾಜ ರವಿತೇಜ (Ravi Teja) ನಾಯಕನಾಗಿ ಬಣ್ಣ ಹಚ್ಚಿದ್ದು, ಯುಗಾದಿ ಹಬ್ಬಕ್ಕೆ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ಮೆಗಾಸ್ಟಾರ್ ಚಿರಂಜೀವಿ (Chiranjeevi), ಈ ಸಿನಿಮಾಗೆ ಕ್ಲಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬಳಿಕ ಟೈಗರ್ ನಾಗೇಶ್ವರ್ ರಾವ್ ಪ್ರಿ ಲುಕ್ ರಿಲೀಸ್ ಮಾಡಿ ಮಾತಿಗೆ ಇಳಿದ ಚಿರಂಜೀವಿ, “ಕೋವಿಡ್ (Covid) ಸಂದರ್ಭದಲ್ಲಿ ಟೈಗರ್ ನಾಗೇಶ್ವರ್ ರಾವ್ ನನಗೆ ಈ ಕಥೆಯನ್ನು ಹೇಳಿದ್ದರು. ಆದ್ರೆ ಕೆಲ ಸಮಸ್ಯೆಯಿಂದ ನಾನು ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಈಗ ನನ್ನ ತಮ್ಮ ರವಿತೇಜ ಈ ಸಿನಿಮಾ ಮಾಡ್ತಿದ್ದಾರೆ. ನಾನು ಚಿಕ್ಕವನಿದ್ದಾಗ ಸ್ಟುವರ್ಟ್‌ಪುರಂ ನಾಗೇಶ್ವರ ರಾವ್ ಬಗ್ಗೆ ಕೇಳಿದ್ದೆ. .ನನ್ನ ತಂದೆ ಚಿರಾಳ ಪೇರಾಲದಲ್ಲಿ ಕೆಲಸ ಮಾಡುತ್ತಿದ್ದರು.ಸ್ಟುವರ್ಟ್‌ಪುರಂ ಪಕ್ಕದಲ್ಲೇ ಇತ್ತು.ಅಲ್ಲಿನ ಜನರೆಲ್ಲ ನಾಗೇಶ್ವರನನ್ನು ಹೀರೋ ಎಂದು ಹೊಗಳುತ್ತಿದ್ದರು. ವರ್ಷಗಳ ನಂತರ ವಂಶಿ ಒಂದು ಕಮರ್ಷಿಯಲ್ ಕಥೆಯೊಂದಿಗೆ ಬಂದರು. ಅವರ ಬಗ್ಗೆ. ರವಿತೇಜ ಈ ಸಿನಿಮಾ ಮಾಡುತ್ತಿರುವುದು ಚೆನ್ನಾಗಿದೆ. ಅಭಿಷೇಕ್ ಅಗರ್ವಾಲ್ ಇದನ್ನು ಮಾಡುತ್ತಿರುವುದು ನನಗೆ ಖುಷಿ ತಂದಿದೆ. ರವಿತೇಜ, ಅಭಿಷೇಕ್ ಮತ್ತು ವಂಶಿ ಅವರು ಕಾಶ್ಮೀರ ಫೈಲ್‌ಗಳಿಗಿಂತ ದೊಡ್ಡ ಹಿಟ್ ಆಗಲಿ ಎಂದು ಹಾರೈಸಿದರು.

ಇದನ್ನೂ ಓದಿ: ‘2023 ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ, ಜನ ಮೂರ್ಖರಲ್ಲ’

ನಾಯಕ ಕಿಶನ್ ರೆಡ್ಡಿ,  ಅಭಿಷೇಕ್ ಅಗರ್ವಾಲ್ ಮತ್ತು ಅವರ ತಂದೆ ಹಲವು ವರ್ಷಗಳಿಂದ ಕುಟುಂಬ ಸ್ನೇಹಿತರು. ಅವರು ಇತ್ತೀಚೆಗೆ ದಿ ಕಾಶ್ಮೀರ್ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಕಾಶ್ಮೀರಿ ಪಂಡಿತರ ಸಂಕಟವನ್ನು ಭಾರತೀಯರೆಲ್ಲರಿಗೂ ತಿಳಿಯುವಂತೆ ಮಾಡಿದರು.ನಿರ್ದೇಶಕ ವಿವೇಕ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಥೆಯನ್ನು ತೋರಿಸಿದರು.ಪಂಡಿತರ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಇದೆ.ಹೆಚ್ಚು ಜನ ಸಿನಿಮಾ ಮಾಡುತ್ತಾರೆ. ಈಗ ಅವರು ಟೈಗರ್ ನಾಗೇಶ್ವರ ರಾವ್ ಅವರ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರವೂ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಹೇಳಿದರು.

ನಿರ್ದೇಶಕ ವಂಶಿ, "ನಾನು ರವಿತೇಜ ಅವರೊಂದಿಗೆ ನಾಲ್ಕು ವರ್ಷ ಪ್ರಯಾಣ ಮಾಡಿದ್ದೇನೆ. ಅವರು ಕಥೆಯನ್ನು ಇಷ್ಟಪಟ್ಟಿದ್ದಾರೆ ಮತ್ತು ಅದನ್ನು ಮಾಡಲು ಒಪ್ಪಿಕೊಂಡಿದ್ದಾರೆ. ರವಿತೇಜ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ತೆಲುಗು ನಾಯಕರ ಅಭಿಮಾನಿಗಳು ಚಿತ್ರವನ್ನು ಮೆಚ್ಚುತ್ತಾರೆ ಎನ್ನುವ  ಆತ್ಮವಿಶ್ವಾಸದಿಂದ ಹೇಳಿದರು.

ನಿರ್ಮಾಪಕ ಅಭಿಷೇಕ್ ಅಗರ್ವಾಲ್, ಚಿರಂಜೀವಿ, ಕಿಶನ್ ರೆಡ್ಡಿ ಅವರಿಗೆ ಧನ್ಯವಾದಗಳು. ಕಾಶ್ಮೀರ್ ಫೈಲ್ಸ್ ಅನ್ನು ದೊಡ್ಡ ಹಿಟ್ ಮಾಡಿದ ಪ್ರೇಕ್ಷಕರಿಗೆ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರು ಟೈಗರ್ ನಾಗೇಶ್ವರ ರಾವ್ ಸಿನಿಮಾ ಆಶೀರ್ವಾದ ಮಾಡಿ ಎಂದರು.

ಇದನ್ನೂ ಓದಿ: ನಿಷೇಧಿತ ಸಮಯದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಿದ್ರೆ ಕಾನೂನು ಕ್ರಮ: ಕಮಲ್‌ ಪಂತ್

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಬಾಲಿವುಡ್ ಗೆ (Bollywood) ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕನಸಿನ ಸಿನಿಮಾವಾಗಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾ, 1970ರಲ್ಲಿ ಸ್ಟುವರ್ಟ್‌ಪುರಂ ಎಂಬಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣವಾಗಿ ತಮ್ಮ ಮೇಕ್ ಓವರ್ ನ್ನು ಬದಲಿಸಿಕೊಂಡಿದ್ದಾರೆ. ಒಂದು ವಿಭಿನ್ನ ಪಾತ್ರದಲ್ಲಿ ರವಿತೇಜ ಮಿಂಚಲಿದ್ದಾರೆ. ಬಾಲಿವುಡ್ ಬ್ಯೂಟಿ ಕೃತಿ ಸನೂನ್ ಸಹೋದರಿ ನೂಪೂರ್ ಸನೂನ್ ರವಿತೇಜ್ ಗೆ ಜೋಡಿಯಾಗಿ ಮಿಂಚಲಿದ್ದಾರೆ.

ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದ್ದು, 70ರ ದಶಕದ ಟಚ್ ಜೊತೆಗೆ ಮೈ ಜುಮ್ ಎನಿಸುವ ಆಕ್ಷನ್ ಸೀನ್ಸ್ ಸಿನಿಮಾದಲ್ಲಿರಲಿದೆ. ಆರ್.ಮ್ಯಾಥಿ ಐಎಸ್ ಸಿ ಕ್ಯಾಮೆರಾ ವರ್ಕ್, ಜೆವಿ ಪ್ರಕಾಶ್ ಕುಮಾರದ್ ಸಂಗೀತ, ಶ್ರೀಕಾಂತ್ ವಿಸ್ಸಾ ಸಂಭಾಷಣೆ ಬರೆದಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 

ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶರತ್ ಮಂಡವ, ತ್ರಿನಾಧ್ ರಾವ್ ನಿಕ್ಕಿನಾ, ಸುಧೀರ್ ವರ್ಮಾ, ತೇಜ ಮತ್ತು ಇತರರು ಉಪಸ್ಥಿತಿರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News