ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣ: ನಟ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶನ!

Copyright infringement case: ಅನುಮತಿ ಪಡೆಯದೇ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ʼಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ೨ ಹಾಡುಗಳನ್ನು ಬಳಕೆ ಮಾಡಿದ್ದಕ್ಕೆ MRT Music ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು.

Written by - Puttaraj K Alur | Last Updated : Aug 17, 2024, 09:06 PM IST
  • ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ಅನುಮತಿ ಪಡೆಯದೆ ಹಾಡುಗಳ ಬಳಕೆ ಪ್ರಕರಣ
  • MRT Music ಹಕ್ಕು ಹೊಂದಿರುವ ʼನ್ಯಾಯ ಎಲ್ಲಿದೆʼ ಮತ್ತು ʼಒಮ್ಮೆ ನಿನ್ನನ್ನುʼ ಹಾಡು ಬಳಕೆ
  • ನಟ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ನಿರ್ದೇಶನ!‌
ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣ: ನಟ ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶನ! title=
ನಟ ರಕ್ಷಿತ್‌ ಶೆಟ್ಟಿಗೆ ʼಕಾಪಿ ರೈಟ್ಸ್‌ʼ ಶಾಕ್!

Copyright infringement case: ಅಭಿಜಿತ್ ಮಹೇಶ್ ಬರೆದು ನಿರ್ದೇಶಿಸಿರುವ ಮತ್ತು ಪರಂವಾ ಸ್ಟುಡಿಯೋಸ್ ಅಡಿ ರಕ್ಷಿತ್ ಶೆಟ್ಟಿ ನಿರ್ಮಿಸಿರುವ ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ MRT Musicನ ಹಕ್ಕು ಹೊಂದಿರುವ 'ನ್ಯಾಯ ಎಲ್ಲಿದೆ' ಮತ್ತು ʼಒಮ್ಮೆ ನಿನ್ನನ್ನುʼ ಹಾಡು ಅನುಮತಿ ಪಡೆಯದೇ ಬಳಸಿರುವ ಪ್ರಕರಣ ಸಂಬಂಧ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂ. ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.

ನಟ ರಕ್ಷಿತ್ ಶೆಟ್ಟಿಯವರು ತಮ್ಮ ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ MRT Music ಹಕ್ಕು ಹೊಂದಿರುವ ʼನ್ಯಾಯ ಎಲ್ಲಿದೆʼ ಮತ್ತು ʼಒಮ್ಮೆ ನಿನ್ನನ್ನುʼ ಹಾಡು ಬಳಕೆ ಮಾಡಿದ್ದರು. ಅನುಪತಿ ಪಡೆಯದೇ ಬಳಸಿದ್ದನ್ನೂ ಸ್ವತಃ ಅವರೇ ಒಪ್ಪಿಕೊಂಡಿದ್ದರು. ತುಣುಕು ಹಾಡುಗಳನ್ನು ಬಳಸಿಕೊಳ್ಳಲು ಅನುಮತಿ ಬೇಕಾ? ಅಂತಾ ಪ್ರಶ್ನೆ ಮಾಡಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಸಹ ಹಂಚಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ಈ ಸುಂದರಿ ಕಂಡ್ರೆ ಪ್ಯಾನ್‌ ಇಂಡಿಯಾ ನಟಿಯರಿಗೆ ನಡುಕ ಹುಟ್ಟುತ್ತೆ..! ಅಬ್ಬಬ್ಬಾ... ಈಕೆ ಸೌಂದರ್ಯವೇ ಒಂದು ಹಬ್ಬ..

ಹೀಗಾಗಿ ಅನುಮತಿ ಪಡೆಯದೇ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ʼಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ 2 ಹಾಡುಗಳನ್ನು ಬಳಕೆ ಮಾಡಿದ್ದಕ್ಕೆ MRT Music ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. ಕಾಪಿ ರೈಟ್ಸ್ ಉಲ್ಲಂಘನೆ ಆಗಿರುವ ವಿಚಾರವನ್ನು ಉಲ್ಲೇಖಿಸಿತ್ತು. ಇದೀಗ ದೆಹಲಿ ಹೈಕೋರ್ಟ್ ‌ನಟ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶಿಸಿದೆ.

ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಸ್‌ಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ರಕ್ಷಿತ್ ಶೆಟ್ಟಿ ಕೋರ್ಟ್‌ಗೆ ಹಾಜರಾಗದ ಕಾರಣ ಸೋಷಿಯಲ್ ಮೀಡಿಯಾ ಸೇರಿ ಹಾಡುಗಳು ಬಳಕೆಯಾದ ಕಡೆ ತೆಗೆದು ಹಾಕಬೇಕು. ಇದರ ಜೊತೆಗೆ 20 ಲಕ್ಷ ರೂ. ಠೇವಣಿ ಇಡಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಒಂದು ಮಗುವಿನ ತಾಯಿಯಾದ್ರೂ ಇನ್ನೂ ಸ್ವರ್ಣಸುಂದರಿ ರಾಧಿಕಾ ಕುಮಾರಸ್ವಾಮಿ! ಇವರ ನಿಜವಾದ ವಯಸ್ಸೆಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News