ಉದ್ಯಮಿಯೊಂದಿಗೆ ಹಸೆಮಣೆ ಏರಿದ ಬೃಂದಾನವನ ನಟಿ: ಕಾರ್ತಿಕಾ ಮದ್ವೆಗೆ ತಾರೆಯರ ದಂಡು...

South Actress Karthika Nair Marriage: ಬಹುಭಾಷಾ ನಟಿ ಕಾರ್ತಿಕಾ ನಾಯರ್ ನವೆಂಬರ್ 19ರಂದು, ಕಾಸರಗೋಡು ಮೂಲದ ರೋಹಿತ್ ಮೆನನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಸಮಾರಂಭದಲ್ಲಿ ತಾರೆಯರ ದಂಡೇ ಸೇರಿತ್ತು.

Written by - Zee Kannada News Desk | Last Updated : Nov 20, 2023, 11:24 AM IST
  • ದಕ್ಷಿಣ ಭಾರತದ ನಟಿ ಕಾರ್ತಿಕಾ ನಾಯರ್ ಕೆಲವು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
  • ನವೆಂಬರ್ 19ರಂದು ತಿರುವನಂತಪುರಂನ ಕವಡಿಯಾರ್ ಉದಯಪಾಲಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಚಿತ್ರನಟಿ ಕಾರ್ತಿಕಾ ನಾಯರ್ ಹಾಗೂ ರೋಹಿತ್ ಮೆನನ್ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದೆ.
  • ಈ ಮದುವೆ ಸಮಾರಂಭದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರು, ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು.
ಉದ್ಯಮಿಯೊಂದಿಗೆ ಹಸೆಮಣೆ ಏರಿದ ಬೃಂದಾನವನ ನಟಿ: ಕಾರ್ತಿಕಾ ಮದ್ವೆಗೆ ತಾರೆಯರ ದಂಡು... title=

Karthika Nair And Rohith Menon Marriage: ದಕ್ಷಿಣ ಭಾರತದ ನಟಿ ಕಾರ್ತಿಕಾ ನಾಯರ್ ಕೆಲವು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಸಾಂಕೇತಿಕವಾಗಿ ಹೇಳಿಕೊಂಡು, ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಕೈಗೆ ಉಂಗುರ ಹಾಕಿರುವ ಫೋಟೊವನ್ನು ಹೈಲೈಟ್ ಮಾಡಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಸದ್ಯ ಈ ನಟಿ ನವೆಂಬರ್ 19ರಂದು, ಕಾಸರಗೋಡು ಮೂಲದ ರವೀಂದ್ರ ಮೆನನ್ ಹಾಗೂ ಶರ್ಮಿಳಾ ದಂಪತಿ ಪುತ್ರ ರೋಹಿತ್ ಮೆನನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ನಿನ್ನೆ ತಿರುವನಂತಪುರಂನ ಕವಡಿಯಾರ್ ಉದಯಪಾಲಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಚಿತ್ರನಟಿ ಕಾರ್ತಿಕಾ ನಾಯರ್ ಹಾಗೂ ರೋಹಿತ್ ಮೆನನ್ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದ್ದು,  ಮದುವೆಗೆ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ಹಾಗೇ ದಕ್ಷಿಣ ಭಾರತದ ಹಿರಿಯ ನಟಿಯರಾದ ಸುಹಾಸಿನಿ, ಅಂಬಿಕಾ, ರೇವತಿ ಸೇರಿದಂತೆ ನಟಿಯರು ಆಗಮಿಸಿದ್ದರು. ಇವರೊಂದಿಗೆ ಸ್ನೇಹಿತರು ಹಾಗೂ ಸಂಬಂಧಿಕರು, ರಾಜಕೀಯ ಮುಖಂಡರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು. 

ಇದನ್ನು ಓದಿ: Sanjay Gadhvi passes away : ಧೂಮ್ ಚಿತ್ರದ ನಿರ್ದೇಶಕ ಸಂಜಯ್ ಗಧ್ವಿ ಇನ್ನಿಲ್ಲ

ಈ ಹಿಂದೆ ಕಾರ್ತಿಕಾ ನಾಯರ್ ಅಕ್ಟೋಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಹೇಳಿಕೊಂಡಿದ್ದು, ಕೇವಲ ಮೂರು ದಿನಗಳ ಹಿಂದಷ್ಟೇ ರೋಹಿತ್ ಪರಿಚಯಿಸಿ ಪೋಸ್ಟ್ ಹಾಕಿದ್ದರು. "ನಿಮ್ಮನ್ನು ಭೇಟಿಯಾಗುವುದು ಅದೃಷ್ಟ. ನಿಮ್ಮ ಪ್ರೀತಿಯಲ್ಲಿ ಕರಗಿ ಹೋಗುವುದು ಕೇವಲ ಮ್ಯಾಜಿಕ್ ಆಗಿತ್ತು. ನಮ್ಮ ಕೌಂಟ್‌ಡೌನ್ ಈಗ ಶುರುವಾಗಿದೆ" ಎಂದು  ಕಾರ್ತಿಕಾ ಬರೆದುಕೊಂಡಿದ್ದರು. ಈ ನವ ಜೋಡಿಯ ಮದುವೆಯ ಫೋಟೊಗಳು ಹಾಗೂ ಯಾರೆಲ್ಲ ಗಣ್ಯರು ಮದುವೆಗೆ ಬಂದಿದ್ದರೋ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ನಟಿ ಕಾರ್ತಿಕಾ ನಾಯರ್‌ 2009ರಲ್ಲಿ ನಾಗಾರ್ಜುನಾ ಪುತ್ರ ನಾಗಚೈತನ್ಯ ನಟಿಸಿದ ಮೊದಲ ಸಿನಿಮಾ 'ಜೋಶ್' ಮೂಲಕ  ಚಿತ್ರರಂಗಕ್ಕೆ ಕಾಲಿಟ್ಟು, ಬಳಿಕ ತಮಿಳು ಚಿತ್ರ 'ಕೋ' ಚಿಕ್ಕದೊಂದು ಸಕ್ಸಸ್ ಕೊಟ್ಟಿತ್ತು. ಜೂ. ಎನ್‌ಟಿಆರ್ ಜೊತೆ 'ದಮ್ಮು' ಈಕೆಗೆ ತಕ್ಕ ಮಟ್ಟಿಗಿನ ಯಶಸ್ಸು ತಂದುಕೊಟ್ಟಿದ್ದು, ಕನ್ನಡದ 'ಬೃಂದಾವನ' ಸಿನಿಮಾದಲ್ಲೂ ಈ ನಟಿ ಅಭಿನಯಿಸಿದ್ದರು. ಆದರೆ, ಈ ಚಿತ್ರ ಸಹ ವೃತ್ತಿ ಬದುಕಿಗೆ ದೊಡ್ಡ ಸಕ್ಸಸ್ ಕೊಡದೆ, ಬಳಿಕ 'ಬ್ರದರ್ ಆಫ್ ಬೊಮ್ಮಾಲಿ', 'ಪುರಂಪೊಕು ಎಂಗಿರ ಪೊದ್ದುವುಡಮೈ' ಸಿನಿಮಾಗಳಲ್ಲಿ ನಟಿಸಿದ್ದರು. ಕಾರ್ತಿಕಾಗೆ ಅಂದುಕೊಂಡಿದ್ದಕ್ಕಿಂತ ದೊಡ್ಡ ಸಕ್ಸಸ್ ಸಿನಿಮಾದಲ್ಲಿ ಸಿಗದ ಕಾರಣ ಒಂದಷ್ಟು ದಿನ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿರದೆ, ಇದೀಗ ಮತ್ತೆ ಮದುವೆ ಮೂಲಕ ಸುದ್ದಿಯಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News