ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆ

Amul Franchise Business: ನೀವು ಮಾರಾಟ ಮಾಡುವ ಪ್ರಾಡಕ್ಟ್‌ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್‌ ವೆಬ್‌ಸೈಟ್‌ನಿಂದ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ಇರುವವರಿಗೆ ಅಮುಲ್ ಪ್ರಾಂಚೈಸಿ ಒಳ್ಳೆಯ ಆಯ್ಕೆ ಆಗಿದೆ.

Written by - Puttaraj K Alur | Last Updated : Jun 26, 2024, 07:44 PM IST
  • ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್‌ ಶುರು ಮಾಡಿ ಕೈತುಂಬಾ ಹಣ ಗಳಿಸಿ
  • ಕೇವಲ 2 ಲಕ್ಷ ರೂ.ಗೆ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್‌ ಪ್ರಾರಂಭಿಸಿರಿ
  • ಅಮುಲ್‌ ಪ್ರಾಡಕ್ಟ್‌ಗಳ ಮಾರಾಟದ ಮೇಲೆ ಉತ್ತಮ ಕಮಿಷನ್‌ ಪಡೆಯಿರಿ
ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆ title=
ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್‌

Amul Franchise Business: ಅನೇಕರಿಗೆ ತಮ್ಮದೇಯಾದ ಸ್ವಂತ ಉದ್ಯಮವನ್ನು ಶುರು ಮಾಡಬೇಕು ಅನ್ನೋ ಆಸೆ ಇರುತ್ತದೆ. ಆದರೆ ಯಾವ ಉದ್ಯಮ ಶುರು ಮಾಡಬೇಕು? ಹೇಗೆ ಶುರು ಮಾಡಬೇಕು? ಅದರಿಂದ ಲಾಭ ಪಡೆಯುವುದು ಹೇಗೆ? ಅನ್ನೋದು ಗೊತ್ತಿರುವುದಿಲ್ಲ. ಹೀಗಾಗಿ ಬ್ಯುಸಿನೆಸ್‌ ಬಗ್ಗೆ ಕನಸು ಕಂಡ ಬಹುತೇಕರು ಕೈಚೆಲ್ಲಿ ಕುಳಿತುಬಿಡುತ್ತಾರೆ. ಕೆಲವರು ಮಾತ್ರ ಮುಂದುವರೆದು ಸಕ್ಸಸ್‌ ಆಗುತ್ತಾರೆ. ನೀವು ಸಹ ಯಾವುದಾದರೂ ಒಂದು ಸ್ವಂತ ಬ್ಯುಸಿನೆಸ್‌ ಮಾಡಬೇಕು ಅನ್ನೋ ಕನಸು ಹೊಂದಿದ್ದರೆ ನಾವು ನಿಮಗೆ ಒಳ್ಳೆಯ ಬ್ಯುಸಿನೆಸ್ ಐಡಿಯಾ ನೀಡಲಿದ್ದೇವೆ.. ಕಡಿಮೆ ಬಜೆಟ್‌ನಲ್ಲಿ ನೀವು ಈ ಬ್ಯುಸಿನೆಸ್‌ ಪ್ರಾರಂಭಿಸಿ ಕೈತುಂಬಾ ಸಂಪಾದಿಸಬಹುದು. ಈ ಬ್ಯುಸಿನೆಸ್‌ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್

ಅಮುಲ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಹುತೇಕರು ಅಮುಲ್‌ ಪ್ರಾಡಕ್ಟ್‌ಗಳನ್ನು ಬಳಸಿರುತ್ತಾರೆ. ಇದು ನಮ್ಮ ದೇಶದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆಗಳಲ್ಲಿ ಒಂದು. ಈ ಬ್ರ್ಯಾಂಡ್‌ನ ಕ್ವಾಲಿಟಿ ಬಗ್ಗೆ ಹೇಳುವ ಹಾಗಿಲ್ಲ. ದೇಶದ ಜನರಿಗೆ ಹಾಲು, ಮೊಸರು, ತುಪ್ಪ, ಐಸ್‌ಕ್ರಿಮ್‌ ಹೀಗೆ ಹಲವಾರು ಉತ್ತಮ ಪ್ರಾಡಕ್ಟ್‌ಗಳನ್ನು ಅಮುಲ್‌ ನೀಡುತ್ತಿದೆ. ನೀವು ಸಹ ಅಮುಲ್ ಫ್ರಾಂಚೈಸಿ ಪಡೆದು ನಿಮ್ಮ ಹತ್ತಿರದ ಜಾಗದಲ್ಲಿ ಬ್ಯುಸಿನೆಸ್‌ ಶುರುಮಾಡಿ ಒಳ್ಳೆಯ ಲಾಭ ಗಳಿಸಬಹುದು. ಅಮುಲ್‌ನ ಪ್ರಾಡಕ್ಟ್‌ಗಳಾದ ಹಾಲು, ಮೊಸರು, ಚೀಸ್ ಸೇರಿದಂತೆ ಹಲವಾರು ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಿ ಅದರಿಂದ ಲಾಭ ಗಳಿಸಬಹುದು.

ಇದನ್ನೂ ಓದಿ: Ration Card: ಸೆಪ್ಟೆಂಬರ್ 30ರ ನಂತರ ಕ್ಯಾನ್ಸಲ್‌ ಆಗುತ್ತೆ ಇಂತವರ ರೇಷನ್ ಕಾರ್ಡ್!

ಅಮುಲ್‌ ಫ್ರಾಂಚೈಸಿ ಶುರು ಮಾಡುವುದು ಹೇಗೆ?

  • ಅಮುಲ್ ಫ್ರಾಂಚೈಸಿಗೆ ನಿಮಗೆ ಜಾಸ್ತಿ ಖರ್ಚು ಬರುವುದಿಲ್ಲ. ಕೇವಲ 2 ಲಕ್ಷ ರೂ.ಗೆ ನೀವು ಫ್ರಾಂಚೈಸಿ ತೆಗೆದುಕೊಳ್ಳಬಹುದು. ಈ ಬ್ಯುಸಿನೆಸ್ ಶುರು ಮಾಡಲು ಇದು ಬಹಳ ಕಡಿಮೆ ಮೊತ್ತದ ಹೂಡಿಕೆಯಾಗಿದೆ.
  • ಇದು ಬಹಳ ಲಾಭ ನೀಡುವ ಬ್ಯುಸಿನೆಸ್ ಆಗಿದ್ದು, ಅಮುಲ್ ಪ್ರಾಡಕ್ಟ್‌ಗಳ ಮೇಲೆ ನಿಮಗೆ ಶೇ.2.5ರಿಂದ ಶೇ.20ರವರೆಗೂ ಕಮಿಷನ್ ದೊರೆಯುತ್ತದೆ. ಉತ್ತಮ ಸೇಲ್ಸ್‌ ಆಧಾರದ ಮೇಲೆ ನೀವು ಹೆಚ್ಚಿನ ಲಾಭ ಪಡೆಯಬಹುದು..
  • ಅಮುಲ್ ಕಡೆಯಿಂದಲೇ ಮಾರ್ಕೆಟಿಂಗ್ ಮತ್ತು ಕಸ್ಟಮರ್ ಸರ್ವಿಸ್ ಬಗ್ಗೆ ನಿಮಗೆ ಟ್ರೇನಿಂಗ್ ನೀಡಲಾಗುತ್ತದೆ. ಅಮುಲ್ ಈಗಾಗಲೇ ಹೆಚ್ಚಿನ ಜನರು ಇಷ್ಟಪಡುವ ಬ್ರ್ಯಾಂಡ್ ಆಗಿರುವ ಕಾರಣ ಜನರು ಇಷ್ಟಪಟ್ಟು ಇದರ ಪ್ರಾಡಕ್ಟ್‌ಗಳನ್ನು ಖರೀದಿ ಮಾಡುತ್ತಾರೆ.

ಫ್ರಾಂಚೈಸಿ ಪಡೆಯುವ ವಿಧಾನ

  • ಅಮುಲ್ ಫ್ರಾಂಚೈಸಿ ಪಡೆದು ಬ್ಯುಸಿನೆಸ್ ಶುರು ಮಾಡಲು ಮೊದಲಿಗೆ ನೀವು ಭಾರತದ ಪ್ರಜೆ ಆಗಿರಬೇಕು. ಅದೇ ರೀತಿ ಕನಿಷ್ಠ 2 ಲಕ್ಷ ರೂ.ಗಳ ಬಂಡವಾಳ ಬೇಕಾಗುತ್ತದೆ.
  • ಒಂದು ಉತ್ತಮ ಜಾಗದಲ್ಲಿ ಫ್ರಾಂಚೈಸಿ ಓಪನ್‌ ಮಾಡಿದ್ರೆ ನಿಮಗೆ ಕೈತುಂಬಾ ಹಣ ಗಳಿಸಲು ಸಾಧ್ಯವಾಗುತ್ತದೆ. ಇದು ಬಹಳ ಮುಖ್ಯವಾದ ಕೆಲಸವಾಗಿದೆ. ಜೊತೆಗೆ ಅಮುಲ್ ಫ್ರಾಂಚೈಸಿ ತೆರೆಯುವುದಕ್ಕೆ ಕಡ್ಡಾಯವಾಗಿ ನೀವು FSSAI ಲೈಸೆನ್ಸ್ ಹೊಂದಿರಬೇಕು.  
  • ಈ ಬ್ಯುಸಿನೆಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಮುಲ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ನೀವು ಪಡೆದುಕೊಳ್ಳಬಹುದು. ಈ ಬ್ಯುಸಿನೆಸ್ ಹೇಗೆ ನಡೆಯುತ್ತದೆ ಅನ್ನೋದು ನೀವು ಬ್ಯುಸಿನೆಸ್ ಶುರು ಮಾಡುವ ಜಾಗ ಯಾವುದು ಅನ್ನೋದರ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ ಜನನಿಬಿಡ ಪ್ರದೇಶದಲ್ಲಿಯೇ ನೀವು ಈ ಬ್ಯುಸಿನೆಸ್‌ ಆರಂಭಿಸಬೇಕು. ಅಂದರೆ ಮಾತ್ರ ನೀವು ಉತ್ತಮ ಲಾಭವನ್ನು ನಿರೀಕ್ಷೆ ಮಾಡಬಹುದಾಗಿದೆ. 
  • ನೀವು ಮಾರಾಟ ಮಾಡುವ ಪ್ರಾಡಕ್ಟ್‌ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್‌ ವೆಬ್‌ಸೈಟ್‌ನಿಂದ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ಇರುವವರಿಗೆ ಅಮುಲ್ ಪ್ರಾಂಚೈಸಿ ಒಳ್ಳೆಯ ಆಯ್ಕೆ ಆಗಿದೆ.

ಇದನ್ನೂ ಓದಿ: IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News