ದಾಸನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌....2 ದಶಕಗಳ ಬಳಿಕ ಮತ್ತೆ ಒಂದಾಗ್ತಿದ್ದಾರೆ ದರ್ಶನ್-ಜೋಗಿ ಪ್ರೇಮ್!

Darshan-Prem Combination Movie : ದರ್ಶನ್‌ ಸದ್ಯ ಕಾಟೇರ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಮುಂಚಿನ ಸಿನಿಮಾ ಬಗ್ಗೆ ಬಾರೀ ಚರ್ಚೆ ಆಗುತ್ತಿದೆ. ಇದೀಗ ಡಿಬಾಸ್‌ ಮತ್ತೆ ಪ್ರೇಮ್‌ ಜೊತೆ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದೆ. ಇದು ನಿಜಾನಾ? ಸುಳ್ಳಾ? ಇಲ್ಲಿದೆ ನೋಡಿ ಡಿಟೇಲ್ಸ್‌.   

Written by - Savita M B | Last Updated : Aug 23, 2023, 01:53 PM IST
  • ಸದ್ಯ ಕನ್ನಡ ಸಿನಿರಂಗದಲ್ಲಿ ಈ ವರ್ಷ ಯಾವ ಸ್ಟಾರ್‌ ನಟರ ಸಿನಿಮಾಗಳು ರಿಲೀಸ್‌ ಆಗಿಲ್ಲ
  • ಹೌದು ಈ ವರ್ಷ ಮುಕ್ತಾಯದ ಹಂತಕ್ಕೆ ಬರುತ್ತಿದ್ದು, ಸಿನಿಪ್ರಿಯರನ್ನು ಚಿತ್ರಂಚಿರಕ್ಕೆ ಸೆಳೆಯುವಂತೆ ಯಾವ ಸಿನಿಮಾಗಳು ಬಿಡುಗಡೆಯಾಗಿಲ್ಲ.
  • ದರ್ಶನ್‌ ಕಾಟೇರ ನಂತರ ಡೈರೆಕ್ಟರ್‌ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ದಾಸನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌....2 ದಶಕಗಳ ಬಳಿಕ ಮತ್ತೆ ಒಂದಾಗ್ತಿದ್ದಾರೆ ದರ್ಶನ್-ಜೋಗಿ ಪ್ರೇಮ್!  title=

Darshan Next Movie Updates : ಸದ್ಯ ಕನ್ನಡ ಸಿನಿರಂಗದಲ್ಲಿ ಈ ವರ್ಷ ಯಾವ ಸ್ಟಾರ್‌ ನಟರ ಸಿನಿಮಾಗಳು ರಿಲೀಸ್‌ ಆಗಿಲ್ಲ. ಹೌದು ಈ ವರ್ಷ ಮುಕ್ತಾಯದ ಹಂತಕ್ಕೆ ಬರುತ್ತಿದ್ದು, ಸಿನಿಪ್ರಿಯರನ್ನು ಚಿತ್ರಂಚಿರಕ್ಕೆ ಸೆಳೆಯುವಂತೆ ಯಾವ ಸಿನಿಮಾಗಳು ಬಿಡುಗಡೆಯಾಗಿಲ್ಲ. 

ಇದರಿಂದಾಗಿಯೇ ಬಾಕಿ ಚಿತ್ರರಂಗಗಳು ಬಾಕಾಫಿಸ್‌ನಲ್ಲಿ ಸೌಂಡ್‌ ಮಾಡಿರುವಂತೆ ಕನ್ನಡ ಚಿತ್ರರಂಗ ಮಾಡಿಲ್ಲ. ಈ ವರ್ಷದ ಆರಂಭದಲ್ಲಿ ದರ್ಶನ್‌ ನಟನೆಯ ಕ್ರಾಂತಿ ಬಿಡುಗಡೆಯಾಗಿತ್ತಾದರೂ ನಿರೀಕ್ಷೆಗೆ ತಕ್ಕಂತ ಗೆಲುವನ್ನು ತಂದುಕೊಡಲಿಲ್ಲ. 

ಸದ್ಯ ದರ್ಶನ್‌ ಅಭಿಮಾನಿಗಳ ಗಮನವೆಲ್ಲವೂ ಕಾಟೇರ ಸಿನಿಮಾ ಮೇಲಿದೆ. ಈ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶಿಸುತ್ತಿದ್ದು, ಸಿನಿಮಾ ಶೂಟಿಂಗ್‌ ಮಾತ್ರ ಭರದಿಂದ ಸಾಗುತ್ತಿದೆ. ಇನ್ನು ಈ ಸಿನಿಮಾದ ನಂತರ ದರ್ಶನ್‌ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಚರ್ಚೆ ಶುರುವಾಗಿತ್ತು. 

ಇದನ್ನೂ ಓದಿ-Namratha Gowda : ಕೆಂಪು ಸೀರೆಯಲ್ಲಿ ಮಿಂಚಿದ ಕಿರುತೆರೆ ಸುಂದರಿ..ಪೋಟೋಸ್‌ ನೋಡಿ

ಅಲ್ಲದೇ ಮಿಲನ ಪ್ರಕಾಶ್‌ ಅವರ ಜೊತೆ ದರ್ಶನ್‌ ಮುಂದಿನ ಸಿನಿಮಾ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದೀಗ ದರ್ಶನ್‌ ಕಾಟೇರ ನಂತರ ಡೈರೆಕ್ಟರ್‌ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 

ಹೌದು ಜೋಗಿ ಪ್ರೇಮ್‌ ಜೊತೆ ದರ್ಶನ್‌ ಕೈ ಜೋಡಿಸಲಿದ್ದಾರೆ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹಾಕಲಿದೆ ಎಂಬ ಗುಸು ಗುಸು ಸುದ್ದಿ ಸದ್ಯ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಇನ್ನು ಕೆವಿಎನ್‌ ಪ್ರೊಡಕ್ಷನ್‌ ಸಹ ಕೆಲವು ದಿನಗಳಿಂದ ಆಗಸ್ಟ್‌ 25ಕ್ಕೆ ದೊಡ್ಡ ಘೋಷಣೆ ಮಾಡಲಿದ್ದೇವೆ ಎಂದು ಪೋಸ್ಟ್‌ ವೊಂದನ್ನು ಹಂಚಿಕೊಳ್ಳುತ್ತಿದೆ. ಇದೇ ಆ ಕಾಂಬಿನೇಷನ್‌ ಸಿನಿಮಾ ಇರಬಹುದು ಎಂದು ಊಹಿಸಲಾಗಿದೆ. 

ಕರಿಯಾ ಸಿನಿಮಾ ಬಳಿಕ 2 ವರ್ಷಗಳ ನಂತರ ಮತ್ತೆ ಈ ಜೋಡಿ ಒಂದಾದರೇ ಅದು ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುವುದರ ಜೊತೆಗೆ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇತ್ತೀಚೆಗೆ ದರ್ಶನ್‌ ಹಾಗೂ ಪ್ರೇಮ್‌ ನಡುವೆ ಇರುವ ಮನಸ್ತಾಪಕ್ಕೆ ಫುಲ್‌ ಪಾಯಿಂಟ್‌ ಇಡಲಿದೆ. 

ಇದನ್ನೂ ಓದಿ-ಈ ಖ್ಯಾತ ಕನ್ನಡ ನಟಿಯ ಹೋಟೆಲ್‌ ರೂಮ್‌ನಲ್ಲಿತ್ತಂತೆ ಸೀಕ್ರೇಟ್‌ ಕ್ಯಾಮೆರಾ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News