"ಒಬ್ಬ ಲೂನಾದಲ್ಲಿ ಓಡಾಡುತ್ತಿರೋ ನನ್ನ ಲ್ಯಾಂಬೊರ್ಗಿನಿವರೆಗೂ ಕೂರಿಸಿದ್ದಾರೆ": ದರ್ಶನ್‌ ಮನದಾಳ!

Challenging Star Darshan: ಕಾಟೇರ ಚಿತ್ರದ ರೈತರ ಹಾಡಿನ ಬಿಡುಗಡೆಯ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಲ್ಲಿ ನಟ ದರ್ಶನ್‌ ಲೂನಾದಲ್ಲಿ ಓಡಾಡುತ್ತಿರೋನನ್ನು ಲ್ಯಾಂಬೊರ್ಗಿನಿವರೆಗೂ ಕರೆದುಕೊಂಡು ಹೋಗಿ ಕೂರಿಸಿದ್ದಾರೆ ಎಂದು ಹೇಳಿದ್ದಾರೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : Dec 24, 2023, 10:37 AM IST
  • ರೈತನ ಸಾಂಗ್‌ ರಿಲೀಸ್‌ ಕಾರ್ಯಕ್ರಮದಲ್ಲಿ ನಟ ದರ್ಶನ್ ಮತ್ತೆ ನಾನು ಮಾಡೋದು ಕನ್ನಡ ಸಿನಿಮಾ ಅಂತ ಪುನರುಚ್ಚರಿಸಿದ್ದಾರೆ.
  • ವೇದಿಕೆ ಮೇಲೆ ರೈತರಿಗೆ ದರ್ಶನ್ ಸಲಹೆ ಕೂಡ ನೀಡಿದ್ದಾರೆ. ಜಮೀನನ್ನು ಮಾರಿಕೊಳ್ಳಬೇಡಿ ಎಂದಿದ್ದಾರೆ.
  • ದರ್ಶನ್‌ ಎಲ್ಲಿವರೆಗೂ ನಿಮ್ಮನ್ನು ರಂಜಿಸುವುದಕ್ಕೆ ಆಗುತ್ತೋ ಅಲ್ಲಿವರೆಗೂ ನಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
"ಒಬ್ಬ ಲೂನಾದಲ್ಲಿ ಓಡಾಡುತ್ತಿರೋ ನನ್ನ ಲ್ಯಾಂಬೊರ್ಗಿನಿವರೆಗೂ ಕೂರಿಸಿದ್ದಾರೆ": ದರ್ಶನ್‌ ಮನದಾಳ! title=

Kaatera Farmer Song Release Event: ಕಾಟೇರ ಚಿತ್ರತಂಡ, ರೈತರ ದಿನದ ಅಂಗವಾಗಿ ಚಿತ್ರದ ರೈತನ ಸಾಂಗ್‌ ರಿಲೀಸ್‌ ಇವೆಂಟ್ ಅನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಾಟೇರ ಸಿನಿಮಾದಲ್ಲಿ,  ನಟಿಸಿದ ಬಹುತೇಕ ಎಲ್ಲಾ ಕಲಾವಿದರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ನಟ ದರ್ಶನ್ ಮತ್ತೆ ನಾನು ಮಾಡೋದು ಕನ್ನಡ ಸಿನಿಮಾ ಅಂತ ಪುನರುಚ್ಚರಿಸಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ " ಸಿನಿಮಾದಲ್ಲಿ ಕೆಲಸ ಮಾಡಿರೋ ಪ್ರತಿಯೊಬ್ಬ ಕಲಾವಿದನಿಂದ ಹಿಡಿದು ತಂತ್ರಜ್ಞ ಪ್ರತಿಯೊಬ್ಬರ ಶ್ರಮ ಇಲ್ಲಿದೆ. ಇದು ಯಾವುದೇ ಆಡಂಬರದ ಸಿನಿಮಾ ಅಲ್ಲ. ಈಗಲೇ ಹೇಳಿಬಿಡುತ್ತೇನೆ. ಇವತ್ತು ನಾವು ಕೇಳುವುದಕ್ಕೆ ಬಂದಿರೋದು ಇಷ್ಟೇನೆ. ನಾನು ಅವತ್ತು ಹೇಳ್ತಿರೋದು. ಇವತ್ತು ಹೇಳ್ತಿರೋದು ಅದೇನೆ. ಈ ಹಸಿರು ಶಾಲ್‌ಗೆ ಎಷ್ಟು ಪವರ್ ಇದೆ ಅಂತ ತೋರಿಸುವುದಕ್ಕೆ ಬಂದಿರೋದು." ಎಂದು ವೇದಿಕೆ ಮೇಲೆ ಹೇಳಿದ್ದಾರೆ. 

ಇದನ್ನೂ ಓದಿ: ಮಂಡ್ಯದಲ್ಲಿ ರೈತರ ದಿನಾಚರಣೆಯಂದು ʻಕಾಟೇರʼ ಸ್ಪೆಷಲ್‌ ಇವೆಂಟ್‌!

ಇದೇ ವೇದಿಕೆ ಮೇಲೆ ರೈತರಿಗೆ ದರ್ಶನ್ ಸಲಹೆ ಕೂಡ ನೀಡುತ್ತಾ, "ಇವತ್ತು ರೈತರ ದಿನಾಚರಣೆ. ಇವತ್ತು ಹೇಳ್ತೀನಿ ರೈತರನ್ನು ಅಯ್ಯೋ ಪಾಪ ಅಂತ ಹೇಳಬೇಡಿ. ಅವರಿಗೆ ಸಿಂಪತಿ ಬೇಕಾಗಿಲ್ಲ. ನ್ಯಾಯವಾದ ಬೆಲೆ ಕೊಟ್ಟುಬಿಟ್ಟರೆ ಸಾಕು. ರೈತ ಎಷ್ಟು ಮುಖ್ಯ ಆಗ್ತಾನೆ ಅಂದರೆ, ಇವತ್ತು ಯಾರೆಲ್ಲ ಜಾಗ ಹಿಡಿದುಕೊಂಡಿದ್ದೀರ. ಅದಕ್ಕೆ ಇವತ್ತು ಕೋಟಿಗಟ್ಟಲೆ ಬೆಲೆ ಬಂದಿದೆ. ದಯವಿಟ್ಟು ಮಾರಿಕೊಳ್ಳುವುದಕ್ಕೆ ಹೋಗಬೇಡಿ. ಇವತ್ತು ಜಾಗಗಳನ್ನು ಮಾರಿಕೊಂಡರೆ, ನಾಳೆ ಜಾಗಗಳು ಸಿಗೋದಿಲ್ಲ ಅಣ್ಣ. ಅಕ್ಕಿ ಬೆಳೆಯೋಕೆ ಅಲ್ಲ. ಗೆಡ್ಡೆ ಗೆಣಸು ಬೆಳೆಯುವುದಕ್ಕೂ ಜಾಗ ಇರೋದಿಲ್ಲ." ಎಂದಿದ್ದಾರೆ. 

ಅದೇ ಸಂದರ್ಭದಲ್ಲಿ ಚಾಲೆಂಜಿಂಗ್‌ ಸ್ಟಾರ್‌, "ಆಯ್ತು 56 ಸಿನಿಮಾ ಆಯ್ತು. ನಮಗೂ ವಯಸ್ಸು ಆಗುತ್ತಿದೆ. ಹೌದು ಒಪ್ಪಿಕೊಳ್ಳೋಣ. ನನಗೆ 47 ವರ್ಷ ಆಗೋಯ್ತು. ಇವತ್ತು ನಮ್ಮ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು. ನಮ್ಮ ಹೀರೊಗಳು, ನಮ್ಮ ಕನ್ನಡ ಚಿತ್ರರಂಗದ ಹೀರೊಗಳು ಇಲ್ಲಿಗೆ ಬಂದು ಹಾರೈಸಿದ್ದಕ್ಕೆ ಚಿರಋಣಿ ಅಂತ ಹೇಳ್ತೀನಿ. ಅಷ್ಟು ಅಲ್ಲದೆ ಇಡೀ ಮಂಡ್ಯ ಜನತೆಗೆ ಒಂದೇ ಮಾತು. ಇದು ರಾಜಕೀಯವಾಗಿ ಅಲ್ಲ ಬೇಜಾರು ಮಾಡಿಕೊಳ್ಳಬೇಡಿ. ಚಿತ್ರರಂಗದಲ್ಲಿ ಅಲ್ಲ. ಯಾರೇ ಏನೇ ಹೇಳಿದರೂ ಕೂಡ ನಾವು ಕೋಪ ಮಾಡಿಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಸಿನಿಮಾ ಅಷ್ಟೇ ಮಾಡುತ್ತೇವೆ." ಎಂದು ಪಂಚ್ ಡೈಲಾಗ್ ಬಿಟ್ಟಿದ್ದಾರೆ. 

ಇದನ್ನೂ ಓದಿ: "ನನ್ನ ಮಣ್ಣು, ನನ್ನ ಹಕ್ಕು": ಕಾಟೇರ ರೈತರ ಸಾಂಗ್‌ ರಿಲೀಸ್‌!

ಕೊನೆಯದಾಗಿ ನಟ ದರ್ಶನ್‌, "ಅದು ಅಪ್ಪಟ ಕನ್ನಡ ಸಿನಿಮಾ ಅಷ್ಟೇನೆ ನಾನು ಮಾಡೋದು. ಸಾಕು ಚೆನ್ನಾಗಿದ್ದೀನಿ. ತುಂಬಾ ಹೆಮ್ಮೆಯಿಂದ ಹೇಳುತ್ತೇನೆ. ಒಬ್ಬ ಲೂನಾದಲ್ಲಿ ಓಡಾಡುತ್ತಿರೋ ನನ್ನ ಲ್ಯಾಂಬೊರ್ಗಿನಿವರೆಗೂ ಕೂರಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಹೊರಗಡೆ ಹೋದ ತಕ್ಷಣ ಏನು ಚಾಪರ್ ಕೊಡ್ತಾರಾ? ಅಲ್ಲಿ ಕೊಡೋದು ಅದನ್ನೇ." ಎಂದು ಕನ್ನಡ ಸಿನಿಮಾ ಮಾತ್ರ ಮಾಡುತ್ತೇನೆ ಎಂದು ಮಾತನಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.
 

Trending News