ಇಂದು ಬೆಂಗಳೂರಿನಲ್ಲಿ ದೀಪ್-ವೀರ್ ಆರತಕ್ಷತೆ! ಅದ್ಧೂರಿ ತಯಾರಿ...

ಆರತಕ್ಷತೆ ಹಿನ್ನೆಲೆಯಲ್ಲಿ ದೀಪಿಕಾ ಪಡುಕೋಣೆ ಅವರ ಬೆಂಗಳೂರಿನ ನಿವಾಸವನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ. 

Last Updated : Nov 21, 2018, 01:43 PM IST
ಇಂದು ಬೆಂಗಳೂರಿನಲ್ಲಿ ದೀಪ್-ವೀರ್ ಆರತಕ್ಷತೆ! ಅದ್ಧೂರಿ ತಯಾರಿ... title=

ಬೆಂಗಳೂರು: ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಆರತಕ್ಷತೆ ಬುಧವಾರ ನಗರದ ಲೀಲಾ ಪ್ಯಾಲೇಸ್‍ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. 

ಮೂರುದಿನಗಳ ಹಿಂದಷ್ಟೇ ಇಟಲಿಯಲ್ಲಿ ಮದುವೆಯಾಗಿದ್ದ ದೀಪಿಕಾ-ರಣವೀರ್ ಜೋಡಿ ವಿವಾಹವಾದ ಬಳಿಕ ಮಂಗಳವಾರ ಮೊದಲ ಬಾರಿಗೆ ಕುಟುಂಬ ಸಮೇತ ಬೆಂಗಳೂರಿಗೆ ಆಗಮಿಸಿದ ನವದಂಪತಿಯ ಮದುವೆ ಆರತಕ್ಷತೆ ಇಂದು ಲೀಲಾ ಪ್ಯಾಲೇಸ್‍ನಲ್ಲಿ ನಡೆಯಲಿದ್ದು, ದಕ್ಷಿಣ ಭಾರತದ ಸಿನಿ ತಾರೆಯರು ಹಾಗೂ ಗಣ್ಯಾತಿ ಗಣ್ಯರು ಭಾಗವಹಿಸಿಲಿದ್ದಾರೆ. ಆರತಕ್ಷತೆ ಹಿನ್ನೆಲೆಯಲ್ಲಿ ದೀಪಿಕಾ ಪಡುಕೋಣೆ ಅವರ ಬೆಂಗಳೂರಿನ ನಿವಾಸವನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ. ಮನೆಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಬಣ್ಣ ಬಣ್ಣದ ದೀಪಗಳಿಂದ ಝಗಮಗಿಸುತ್ತಿದೆ.

ನವೆಂಬರ್ 14ರಂದು ಕೊಂಕಣಿ ಹಾಗೂ ನವೆಂಬರ್ 15ರಂದು ಸಿಂಧ್ ಸಂಪ್ರದಾಯದ ಪ್ರಕಾರ ದೀಪ್‍ವೀರ್ ಮದುವೆ ಇಟಲಿಯ ಕೊಮೊ ಸಿಟಿಯಲ್ಲಿ ನೆರವೇರಿತ್ತು. ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ವಿವಾಹದಲ್ಲಿ ಪಾಲ್ಗೊಂಡಿದ್ದರು. 
 

Trending News