ʼದಿ ಕೇರಳ ಸ್ಟೋರಿʼ ನಾಯಕಿ ತಮ್ಮ ಹೆಸರನ್ನು ಬದಲಾಯಿಸಿಕೊಂಡ್ರಾ? ಕಾರಣವೇನು

The Kerala Story : ಬಾಲಿವುಡ್‌ ನಟಿ ಅದಾ ಶರ್ಮಾ ಅವರು ಇತ್ತೀಚಿಗೆ ಬಿಡುಗಡೆಯಾದ ದಿ ಕೇರಳ ಸ್ಟೋರಿ ಮೂಲಕ ಖ್ಯಾತಿ ಗಳಿಸಿದರು. ಸಾಕಷ್ಟು ಚರ್ಚೆ ಮತ್ತು ಗ್ರಾಸಗಳಿಗೆ ಒಳಗಾಗದ ಈ ಸಿನಿಮಾ ಎಲ್ಲ ವಿವಾದಗಳ ನಡುವೆಯೂ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಎಲ್ಲ ಸಿನಿಮಾ ಥಿಯೇಟರ್‌ಗಳು ಹೌಸ್‌ಫುಲ್‌ ಆಗುತ್ತಿವೆ.   

Written by - Zee Kannada News Desk | Last Updated : May 16, 2023, 11:18 AM IST
  • ಕೇರಳದ ಕಥೆಯನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಗಿದೆ
  • ಚಲನಚಿತ್ರವು ಭಾರತದ ಇತರ ಭಾಗಗಳಲ್ಲಿನ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೇರುವಂತೆ ಮಾಡಿದೆ.
  • ಈ ಸಿನಿಮಾ ಬಿಡುಗಡೆಗೆ ಮುಂಚಿತವಾಗಿ, ಚಿತ್ರದ ನಾಯಕಿ ಅದಾ ಶರ್ಮಾ ಅವರು ಅನೇಕ ಸಂದರ್ಶನಗಳನ್ನು ನೀಡಿದ್ದಾರೆ.
ʼದಿ ಕೇರಳ ಸ್ಟೋರಿʼ ನಾಯಕಿ ತಮ್ಮ ಹೆಸರನ್ನು ಬದಲಾಯಿಸಿಕೊಂಡ್ರಾ? ಕಾರಣವೇನು title=

Adah Sharma : ಕೇರಳದ ಕಥೆಯನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಗಿದೆಯಾದರೂ, ಚಲನಚಿತ್ರವು ಭಾರತದ ಇತರ ಭಾಗಗಳಲ್ಲಿನ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೇರುವಂತೆ ಮಾಡಿದೆ. ಈ ಸಿನಿಮಾ ಬಿಡುಗಡೆಗೆ ಮುಂಚಿತವಾಗಿ, ಚಿತ್ರದ ನಾಯಕಿ ಅದಾ ಶರ್ಮಾ ಅವರು ಅನೇಕ ಸಂದರ್ಶನಗಳನ್ನು ನೀಡಿದ್ದಾರೆ. ಹೀಗೆ ಒಂದು ಸಂದರ್ಶನದಲ್ಲಿ ನಟಿ ತನ್ನ ನಿಜವಾದ ಹೆಸರು ಚಾಮುಂಡೇಶ್ವರಿ ಅಯ್ಯರ್‌ ಎಂದು ಹೇಳಿ ನಂತರ ಅಲ್ಲ ಅದಾ ಶರ್ಮಾ ಎಂದುದು ಬದಲಾಯಿಸಿದರು. 

ಅದಾ ಅವರಿಗೆ ಸಂದರ್ಶನದಲ್ಲಿ ನಿಮ್ಮ ಹೆಸರನ್ನು ಇಷ್ಟು ಸರಳವಾಗಿಟ್ಟುಕೊಂಡಿದ್ದೀರಲ್ಲಾ ಅದು ಹೇಗೆ ಸಾಧ್ಯ ಎಂದು ಕೇಳಿದರು. ಆಗ ನಟಿ ಅದಾ ಶರ್ಮಾ ತಮ್ಮ ಹೆಸರಿನ ಆಸಕ್ತಿದಾಯಕ ವಿಷಯೊಂದನ್ನು ಬಹಿರಂಗಪಡಿಸಿದರು. “ನನ್ನ ನಿಜವಾದ ಹೆಸರು ಚಾಮುಂಡೇಶ್ವರಿ ಅಯ್ಯರ್” ಎಂದು ಹೇಳಿ, ಅವರು ತಮ್ಮ ನಿಜವಾದ ಹೆಸರನ್ನು ಬದಲಾಯಿಸಲು ನಿರ್ಧರಿಸಿದ ಕಾರಣ 1920 ರ ನಟಿ ತನ್ನ ಮೂಲ ಹೆಸರನ್ನು ಉಚ್ಚರಿಸಲು ತುಂಬಾ ಕಷ್ಟಕರವಾಗಿತ್ತು ಮತ್ತು ಜನರು ತನ್ನ ಹೆಸರನ್ನು ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ, ಇದು ತನ್ನ ಹೆಸರನ್ನು ಚಾಮುಂಡೇಶ್ವರಿಯಿಂದ ಅದಾ ಎಂದು ಬದಲಾಯಿಸಲು ಪ್ರೇರೇಪಿಸಿತು ಎಂದರು. 

ಇದನ್ನೂ ಓದಿ-ಬಿಕಿನಿಯಲ್ಲಿ ಬಾನುಮತಿ ಅಲಿಯಾಸ್‌ ಶರ್ಮಿತಾ ಗೌಡ, ಪೋಟೋಸ್‌ ನೋಡಿ

ಅದಾ ಶರ್ಮಾ ಅವರು 2008ರಲ್ಲಿ ಹಾರರ್ ಥ್ರಿಲ್ಲರ್, ಮತ್ತು 1920 ರಲ್ಲಿ ರಜನೀಶ್ ದುಗ್ಗಲ್ ಜೊತೆ ನಟಿಸಿ ಮುನ್ನೆಲೆಗೆ ಬಂದರು. ಇವರು ಅಷ್ಟು ಜನಪ್ರಿಯತೆಯನ್ನು ಹೊಂದಿಲ್ಲವಾದರೂ ನಟಿಯ ನಟನೆ ಮಾತ್ರ ಅದ್ಭುತವಾಗಿದೆ. ಇವರು ಕನ್ನಡದ ಪವರ್‌ಸ್ಟಾರ್‌ ಅಪ್ಪು ಅವರ ಜೊತೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದಲ್ಲದೇ ಬಾಲಿವುಡ್‌ನಲ್ಲಿ ಕೆಲವು ಅತಿಥಿ ಪಾತ್ರಗಳಲ್ಲಿಯೂ ನಟಿ ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ.

ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಸಿನಿರಂಗದಲ್ಲಿ ಗರುರುತಿಸಿಕೊಂಡಿದ್ದ ನಟಿ ಅದಾ ಶರ್ಮಾ ಅವರಿಗೆ ಬಿಗ್‌ ರಿಲೀಫ್‌ ಕೊಟ್ಟಿದ್ದು ʼದಿ ಕೇರಳ ಸ್ಟೋರಿʼ ಎಂದರೇ ತಪ್ಪಾಗುವುದಿಲ್ಲ. ಹೌದು ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿವಾದ ಮತ್ತು ಅಡೆ ತಡೆಗಳನ್ನು ಮೀರಿ ತೆರೆಮೇಲೆ ಬಂದಿದೆ. ಇನ್ನೂ ಕೂಡ ಈ ಸಿನಿಮಾ ವಿವಾದಗಳ ರಾಶಿಯನ್ನೇ ಹೊರುತ್ತಿದೆ. 

ಇದನ್ನೂ ಓದಿ-Photo Gallery: ಪಿಂಕ್ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ತೇಜಸ್ವಿ ಪ್ರಕಾಶ್ ಬಾರ್ಬಿ

ಈ ʼದಿ ಕೇರಳ ಸ್ಟೋರಿʼ ಸಿನಿಮಾ ಸುದೀಪ್ತೋ ಸೇನ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಇದರಲ್ಲಿ ಕೆಲವು ಕಾಲೇಜಿಗೆ ಹೋಗುವ ಹುಡುಗಿಯರನ್ನು ಮನವೋಲಿಸಿ ಇಸ್ಲಾಂಗೆ ಮತಾಂತರವಾಗುವಂತೆ ಮಾಡಿ ನಂತರ ಅವರನ್ನು ಬಲವಂತವಾಗಿ ಭಯೋತ್ಪಾದಕ ಗುಂಪು ISIS ಗೆ ಸೇರುವಂತೆ ಮಾಡುವುದು ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಗೆ ಕಳುಹಿಸುವ ಚಿತ್ರಣವನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾದ ನಾಯಕಿಯಾಗಿ ಅದಾ ಶರ್ಮಾ ನಟಿಸಿದ್ದಾರೆ.

ಇದಲ್ಲದೇ ತಮಗೆ ಬಿಗ್‌ ರಿಲೀಫ್‌ ನೀಡಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ಯಶಸ್ಸಿನ ಕುರಿತು  “... ಪ್ರತಿಯೊಬ್ಬರೂ ಚಲನಚಿತ್ರವನ್ನು ನೋಡಬೇಕೆಂಬುದು ನನ್ನ ಏಕೈಕ ಕನಸಾಗಿತ್ತು, ಅದೇ ನನಗೆ ದೊಡ್ಡ ಪ್ರಶಸ್ತಿ, ಆ ಕನಸು ಈಗ ನನಸಾಗುತ್ತಿದೆ. ” ಎಂದು ನಟಿ ತಮ್ಮ ಮನದಾಳದ ಮಾತುಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News