ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.ಇಡೀ ಫ್ಯಾಮಿಲಿ ಕುಳಿತು ನೋಡೋ ಕಾರ್ಯಕ್ರಮವಿದು. ಎಷ್ಟೇ ಬ್ಯುಸಿ ಇದ್ರೂ ಕೂಡ ಮಿಸ್ ಮಾಡ್ದೆ ಒಂದು ಗಂಟೆಯ ಈ ಶೋವನ್ನ ಮನೆಮಂದಿಯೆಲ್ಲಾ ಕುಳಿತು ಒಂದು ನೋಡಿ ಎಂಜಾಯ್ ಮಾಡ್ತಾರೆ.ಆದ್ರೆ ಇನ್ಮುಂದೆ 24 ಗಂಟೆಗಳ ಕಾಲ ಬಿಗ್ ಬಾಸ್ ನೋಡಬೋದು.ಅದು ಹೆಂಗೇ ಅಂತೀರಾ ಇಲ್ಲಿ ಹೇಳ್ತೀವಿ ನೋಡಿ.
ಹೌದು, ಈಗಾಗಲೇ 8 ಸೀಸನ್ ಗಳು ಯಶಸ್ವಿಯಾಗಿ ಮುಗಿದಿದೆ. ಆದ್ರೆ ಮತ್ತೇ ಶುರುವಾಗೋದು 9ನೇ ಸೀಸನ್ ಅಲ್ಲ. ಬದಲಾಗಿ 1ನೇ ಸೀಸನ್ ಅಂತ ಸ್ವತಃ ಕಲರ್ಸ್ ವಾಹಿನಿ ಮತ್ತು ಕಿಚ್ಚ ಸುದೀಪ್ ಹೇಳ್ತಾ ಇದ್ದಾರೆ. ಅರೇ..ಅದು ಹೇಗಪ್ಪಾ ಅಂತ ನೀವು ಪ್ರಶ್ನೆ ಮಾಡಬೋದು.ಆ ಪ್ರಶ್ನೆಗೆ ಉತ್ತರ ನಾವು ನಿಮ್ಗೆ ಕೊಡ್ತೀವಿ.
ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?
'Voot Select ನಲ್ಲಿ ಬಿಗ್ ಬಾಸ್ ಮೊದಲ ಸೀಸನ್ ಶುರುವಾಗುತ್ತಿದೆ'
Voot Select ಬಿಗ್ ಬಾಸ್ ಮೊದಲ ಸೀಸನ್ ಗೆ ಕೌಂಟ್ ಡೌನ್ ಆರಂಭವಾಗಿದೆ.ಇದೇ ಆಗಸ್ಟ್ 6 ರಿಂದ ಡಿಜಿಟಲ್ ವೇದಿಕೆಯಲ್ಲಿ ಬಿಗ್ ಬಾಸ್ ನಡೆಯುತ್ತೆ.16 ಸೆಲೆಬ್ರೇಟಿ ಸ್ಪರ್ಧಿಗಳು ಈ ಶೋನಲ್ಲಿ ಇರುತ್ತಾರೆ ಅನ್ನೋದನ್ನ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿ ಕೊಟ್ರು.
ಮೊದಲ ಬಾರಿಗೆ ಪುಲ್ ಟೈಮ್ ಓಟಿಟಿಯಲ್ಲಿ ಮೂಡಿ ಬರಲಿರೋ ಬಿಗ್ ಬಾಸ್ ಶೋ ಸಾಕಷ್ಟು ಮಂದಿಗೆ ರೀಚ್ ಆಗುತ್ತಾ ಅನ್ನೋ ಪ್ರಶ್ನೆ ಕೂಡ ಸಹಜವಾಗೇ ಹುಟ್ಟಿಕೊಂಡಿದೆ.ಪ್ರತಿ ಬಾರಿಯಂತೆ ಈ ಸಲವೂ ಕಿಚ್ಚ ಸುದೀಪ್ ಕಾರ್ಯಕ್ರಮದ ಹೋಸ್ಟ್ ಮಾಡಲಿದ್ದಾರೆ.ಈ ಬಗ್ಗೆ ಕಲರ್ಸ್ ವಾಹಿನಿಯಿಂದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚ್ಚಿಕೊಂಡ್ರು.
ಇದನ್ನೂ ಓದಿ: ಬೆಲ್ಲದ ಮೇಲಿನ GST ಖಂಡಿಸಿ ರೈತರಿಂದ ಬೃಹತ್ ಪ್ರತಿಭಟನೆ
ಕಾರ್ಯಕ್ರಮದ ರೂಪುರೇಷೆ ಹೇಗಿರುತ್ತೆ,ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತೀವಿ ಅನ್ನೋದ್ರ ಬಗ್ಗೆ ಕಿಚ್ಚ ಸುದೀಪ್ ಕೂಡ ಮಾಹಿತಿ ಹಂಚಿಕೊಂಡ್ರು. ಸ್ಪರ್ಧಿಗಳ ಆಯ್ಕೆ ನಂಗೆ ಮಾತನಾಡಿದ ಕಿಚ್ಚ ನಂಗೆ ಸಂಬಂಧಪಟ್ಟಿಲ್ಲ.ಅದು ಪರಮ್ ಅವ್ರ ಕೆಲಸ ಅನ್ನೋದನ್ನ ತಿಳಿಸಿದ್ರು.
ನೋಡೋಣ ಯಾರೆಲ್ಲ ಸ್ಪರ್ಧಿಗಳು ಇರುತ್ತಾರೆ.ಯಾವ ರೀತಿ ಮನರಂಜನೆ ಸಿಗುತ್ತೆ ಅನ್ನೋದನ್ನ ಆಗಸ್ಟ್ 6 ವರೆಗೆ ಕಾದು ನೋಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.