ಬೆಂಗಳೂರು: 'ಕೆಜಿಎಫ್-1' ಆಗಲಿ ಅಥವಾ 'ಕೆಜಿಎಫ್-2' ಆಗಲಿ, 'ಕೆಜಿಎಫ್' ಅನ್ನೋ ಹೆಸರೇ ಕರೆಂಟ್ ಇದ್ದಂಗೆ. ಯಾಕಂದ್ರೆ 'ಕೆಜಿಎಫ್-1' ರಿಲೀಸ್ ಆದ ಸಂದರ್ಭದಲ್ಲಿ ಜಗತ್ತೇ ಒಂದು ಕ್ಷಣ ಬೆರಗಾಗಿತ್ತು. ಇದಾದ ನಂತರ 'ಕೆಜಿಎಫ್' ಚಾಪ್ಟರ್ 2 ನೋಡಿ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ರಾಕಿಭಾಯ್‌ಗೆ ಜೈ ಅಂದಿದ್ದಾರೆ. ಆದರೆ ಈ ಹೊತ್ತಲ್ಲೇ 'ಕೆಜಿಎಫ್' ಚಾಪ್ಟರ್ 2 ಶೂಟಿಂಗ್ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿದ್ದು, ಯಶ್ ಅಭಿಮಾನಿಗಳು ಮತ್ತಷ್ಟು ಖುಷ್ ಆಗಿದ್ದಾರೆ.
ಅಂದಹಾಗೆ 'ಕೆಜಿಎಫ್-2' ಸಿನಿಮಾದ ಹೈಲೈಟ್ಸ್ ಎಂದರೆ ಅದು ಕಾರ್ ಚೇಸ್ ಸೀನ್. ಈ ದೃಶ್ಯ ಇಡೀ ಸಿನಿಮಾಗೆ ಒಂದು ಭೂಷಣ ಎನ್ನಬಹುದು. ಅಕ್ಕಪಕ್ಕ ಮರಳು ತುಂಬಿದ ಜಾಗದಲ್ಲಿ, ಟಾರ್ ರಸ್ತೆ ಮೇಲೆ ನಡೆಯುವ ಕಾರ್ ಕಾಳಗ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಆದರೆ ಈ ಸೀನ್ ಕುರಿತು ಇದೀಗ ತುಂಬಾ ಅಂದ್ರೆ ತುಂಬಾ ಇಂಟರೆಸ್ಟಿಂಗ್ ಮಾಹಿತಿ ಸಿಕ್ಕಿದೆ.
The car chase sequence was shot on normal roads & the desert backdrop was added in VFX. Didn't even feel that it was VFX while watching the movie. Great job by the VFX team👏🏻 (also explains why there were blackouts during this scene)#KGF2 #KGFChapter2 pic.twitter.com/ij5QGwFOS7
— Dexter Morgan (@DexterM00766695) May 12, 2022
ಗ್ರೇಟ್.. ಗ್ರೇಟ್..!
ಹೌದು, ನೋಡೋದಕ್ಕೆ ಥೇಟ್ ಮರಳುಗಾಡಿನ ರೀತಿ ಕಾಣುವ 'ಕೆಜಿಎಫ್-2' ಸಿನಿಮಾದ ಕಾರ್ ಚೇಸ್ ಆ್ಯಕ್ಷನ್ ಸೀನ್ ತೆಗೆದಿದ್ದು ಒಂದು ಮಾಮೂಲಿ ರಸ್ತೆ ಮೇಲೆ ಅಂತೆ. ಅಷ್ಟಕ್ಕೂ ಇದು ಆಶ್ಚರ್ಯ ಎನಿಸಿದ್ರೂ ಸತ್ಯ. ಇದೀಗ ರಿವೀಲ್ ಆಗಿರುವ ಫೋಟೋದಲ್ಲಿ 'ಕೆಜಿಎಫ್-2' ಕಾರ್ ಚೇಸ್ ಸೀನ್ ಹೇಗೆ ಶೂಟಿಂಗ್ ಮಾಡಿದ್ರು ಅನ್ನೋ ಡೀಟೇಲ್ಸ್ ಇದೆ. ಮಾಮೂಲಿಯಾದ ದಾರಿಯಲ್ಲಿ ಕಾರ್ ಚೇಸ್ ಸೀನ್ ಶೂಟ್ ಮಾಡಿ, ನಂತರ ವಿಎಫ್‌ಎಕ್ಸ್ ಟೆಕ್ನಾಲಜಿಯನ್ನ ಬಳಸಿ ಮರಳುಗಾಡನ್ನೇ ಸೃಷ್ಟಿಸಲಾಗಿತ್ತು. ಆದರೆ ಪ್ರೇಕ್ಷಕರಿಗೆ ಇದು ಎಲ್ಲೂ ಗೊತ್ತೇ ಆಗಲ್ಲ. ಅಷ್ಟರಮಟ್ಟಿಗೆ 'ಕೆಜಿಎಫ್-2' ತಂಡದ ವಿಎಫ್‌ಎಕ್ಸ್ ತಂಡ ಹಾಗೂ ಡೈರೆಕ್ಟರ್ ಪ್ರಶಾಂತ್ ನೀಲ್ ವರ್ಕ್ ಮಾಡಿದ್ದರು. ಇದೀಗ ಅವರ ಶ್ರಮದ ಸಾಮರ್ಥ್ಯ ಏನು ಎಂಬುದನ್ನ ಈ ಫೋಟೋ ರಿವೀಲ್ ಮಾಡಿದ್ದು, ಇಡೀ ಜಗತ್ತು ಮತ್ತೆ ಶಾಕ್ ಆಗಿದೆ.
BTS - Car Chase Sequence 💨#KGFChapter2 pic.twitter.com/zHgznMlZvN
— ಯಶಸ್ | Yashas (@NameIsYashas) May 4, 2022
ಒಟ್ಟಾರೆ ಹೇಳುವುದಾದರೆ 'ಕೆಜಿಎಫ್-2' ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಎಂದೂ ಮರೆಯಲಾಗದ ನೆನಪು. ಕನ್ನಡ ಸಿನಿಮಾ ಹೀಗೆ ಸೃಷ್ಟಿಸಿದ ದೊಡ್ಡ ಮೈಲಿಗಲ್ಲು ಎಲ್ಲರನ್ನೂ ಸೆಳೆಯುತ್ತಿದ್ದು, ಜನರು ಕೂಡ 'ಕೆಜಿಎಫ್-2' ಸಿನಿಮಾ ನೋಡಿ ರಾಕಿಭಾಯ್‌ಗೆ ಫಿದಾ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.