ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಡ್ರಗ್ಸ್ ದಂಧೆಯ ತನಿಖೆಯ ವ್ಯಾಪ್ತಿ ಪ್ರತಿದಿನ ಹೆಚ್ಚುತ್ತಿದೆ. ಈ ಸಂಬಂಧ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರನ್ನು ಪ್ರಶ್ನಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಕೆಲವು ಪ್ರಮುಖ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ. ಅದರ ನಂತರ ಈ ವಿಷಯದಲ್ಲಿ ಹೆಚ್ಚು ಇನ್ನೂ ಹಲವು ಮುಖ್ಯ ವಿಷಯಗಳು ಹೊರ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ವಿಶೇಷವೆಂದರೆ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ (Karishma Prakash) ಅವರ ಹೆಸರು ಹೊರಬಿದ್ದಿದೆ. ಎನ್‌ಸಿಬಿ ಇತ್ತೀಚೆಗೆ ಕರಿಷ್ಮಾ ಪ್ರಕಾಶ್‌ರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ ಅವರು ಎನ್‌ಸಿಬಿ ಕಚೇರಿಗೆ ಹಾಜರಾಗಿಲ್ಲ.
ಚಾಟಿಂಗ್ ಸೋರಿಕೆಯಾಗಿದೆ ಎಂದು ಆರೋಪಿಸಿದ್ದ ದೀಪಿಕಾ:
ದೀಪಿಕಾ ಪಡುಕೋಣೆ ತಮ್ಮ ಪಿಆರ್ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಡ್ರಗ್ ಚಾಟ್ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಅದೇ ಸಮಯದಲ್ಲಿ ಕಾನೂನು ತಂಡವು ತನ್ನ ಪತಿ ರಣವೀರ್ ಅವರೊಂದಿಗೆ ವೀಡಿಯೊ ಕರೆಯ ಬಗ್ಗೆ ಮಾತನಾಡಿದರು.
ಮೂಲಗಳನ್ನು ನಂಬಬೇಕಾದರೆ, ಎನ್‌ಸಿಬಿಯ ತಂಡವು ಕರಿಷ್ಮಾಗೆ ಈ 16 ಪ್ರಶ್ನೆಗಳನ್ನು ಕೇಳಬಹುದು-
1- ನಿಮ್ಮ ಪೂರ್ಣ ಹೆಸರು ಏನು?
2- ಕ್ವಾನ್‌ಗೆ ಮೊದಲು ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡಿದ್ದೀರಿ?
3- ನೀವು ಯಾವಾಗ ಕ್ವಾನ್‌ಗೆ ಸೇರಿದ್ದೀರಿ?
4- ಕ್ವಾನ್‌ನಲ್ಲಿ ದೀಪಿಕಾ ಪಡುಕೋಣೆ ಅವರ ಪಿಆರ್ ವೀಕ್ಷಿಸಲು ಯಾರು ಹೇಳಿದರು?
5- ನೀವು ಮೊದಲು ದೀಪಿಕಾ ಅವರನ್ನು ಯಾವಾಗ ಭೇಟಿಯಾಗಿದ್ದೀರಿ?
ಡ್ರಗ್ಸ್ ಪ್ರಕರಣ: 4ನೇ ಬಾರಿಗೆ ಮುಂಬೈಗೆ ಬರುವ ಪ್ಲಾನ್ ಬದಲಾಯಿಸಿದ ದೀಪಿಕಾ ಪಡುಕೋಣೆ, ಇದು ಕಾರಣ
6- ದೀಪಿಕಾ ನಿಮ್ಮಿಂದ ಡ್ರಗ್ಸ್ ಗಾಗಿ ಡಿಮಾಂಡ್ ಮಾಡಿದ್ದರಾ? ಹೌದು ಎಂದಾದರೆ ಎಷ್ಟು ಬಾರಿ ಮತ್ತು ಯಾವ ಡ್ರಗ್ಸ್ ಗಾಗಿ ಬೇಡಿಕೆಯಿಡಲಾಗಿದೆ?
7- ಈ ಡ್ರಗ್ಸ್ ಗಳನ್ನು ನೀವು ಯಾರ ಮೂಲಕ ಪಡೆದುಕೊಂಡಿದ್ದೀರಿ?
8- ಅನುಜ್ ಕೇಸ್ವಾನಿ ನಿಮಗೆ ಗೊತ್ತಾ?
9- ಅನುಜ್ ಡ್ರಗ್ಸ್ (Drugs) ಪ್ಯಾಡ್ಲರ್ ಎಂದು ನಿಮಗೆ ತಿಳಿದಿದೆಯೇ?
10- ಅನುಜ್ ತನ್ನ ವಿಚಾರಣೆಯಲ್ಲಿ ನಿಮ್ಮ ಹೆಸರನ್ನು ಬಹಿರಂಗಪಡಿಸಿದ್ದಾನೆ?
11- ಅನುಜ್ ಅವರೊಂದಿಗಿನ ನಿಮ್ಮ ಸಂಭಾಷಣೆಯ ಪುರಾವೆಗಳನ್ನು ನಾವು ಪಡೆದುಕೊಂಡಿದ್ದೇವೆ?
12- ನೀವು ಡ್ರಗ್ಸ್ ಗಳನ್ನು ಪಡೆಯಲು ಅನುಜ್ ಅವರನ್ನು ಕೇಳಿದ್ದೀರಾ?
13- ದೀಪಿಕಾ ಮತ್ತು ನಿಮ್ಮ ಒಂದು ಚಾಟ್ ಬಂದಿದೆ, ಇದು ನಿಮ್ಮ ಚಾಟ್ ಹೌದಾ/ಅಲ್ಲವಾ?
14- ದೀಪಿಕಾ ಯಾವಾಗ ಡ್ರಗ್ಸ್ ಗಳನ್ನು ಕೇಳಿದರು?
15- ದೀಪಿಕಾ ನಿಯಮಿತವಾಗಿ ಡ್ರಗ್ಸ್ ಕೇಳುತ್ತಿದ್ದರಾ?
'ನಶಾ ಲೋಕ'ದಲ್ಲಿರುವ ತಾರೆಯರೆಷ್ಟು? ಪ್ರಕಾಶ್ ಮುಂದೆ ಮಸುಕಾದ ದೀಪಿಕಾ!
16- ಇದನ್ನು ಕೊಕೊ ರೆಸ್ಟೋರೆಂಟ್ ಬಗ್ಗೆ ಚಾಟ್‌ನಲ್ಲಿ ಬರೆಯಲಾಗಿದೆ, ಆ ದಿನ ಅಲ್ಲಿ ಏನಾಯಿತು? ಆ ದಿನದ ಘಟನೆಗಳ ವಿವರಗಳನ್ನು ನೀಡಿ ಎಂಬಿತ್ಯಾದಿ ಪ್ರಶ್ನೆಗಳನ್ನು ಎನ್‌ಸಿಬಿ ಕರಿಷ್ಮಾ ಪ್ರಕಾಶ್ ಅವರನ್ನು ಕೇಳುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಈ ಪ್ರಕರಣ ಇನ್ನೂ ಕೂಡ ಯಾವ ಯಾವ ತಿರುವು ಪಡೆಯಲಿದೆಯೋ... ಯಾರ್ಯಾರ ಹೆಸರು ಹೊರಬರಲಿದೆಯೋ ಕಾದುನೋಡಬೇಕಿದೆ.