ಕುತೂಹಲ ಹೆಚ್ಚಿಸಿದ ದೃಶ್ಯಂ 2 ಟೀಸರ್, ಕುಟುಂಬವನ್ನು ಮತ್ತೆ ಕಾಡಿದೆ ಮರ್ಡರ್..!

ಬ್ಲಾಕ್ ಬಾಸ್ಟರ್ ಹಿಟ್ ಆಗಿದ್ದ ದೃಶ್ಯಂ ಸಿನೆಮಾದ ನಂತರ ಇದೀಗ ದೃಶ್ಯಂ 2 ಬಿಡುಗಡೆಗೆ ಸಿದ್ಧವಾಗಿದೆ. ಫೆ 19ರಂದು ಅಮೆಜಾನ್ ಪ್ರೈಂ ಮೂಲಕ ಚಿತ್ರ ಒಟಿಟಿ ಫಾರಂನಲ್ಲಿ ಬಿಡುಗಡೆ ಆಗಲಿದೆ.

Written by - Ranjitha R K | Last Updated : Feb 7, 2021, 05:38 PM IST
  • ಪ್ರೇಕ್ಷಕನ ಮುಂದೆ ಬರಲು ಸಿದ್ಧವಾಗಿದೆ ದೃಶ್ಯಂ 2
  • ಫೆ 19ರಂದು ಅಮೆಜಾನ್ ಪ್ರೈಂ ಮೂಲಕ ಬಿಡುಗಡೆ
  • ಈಗಾಗಲೆ ರಿಲೀಸ್ ಆಗಿರುವ ಚಿತ್ರದ ಟ್ರೇಲರ್
ಕುತೂಹಲ ಹೆಚ್ಚಿಸಿದ ದೃಶ್ಯಂ 2 ಟೀಸರ್, ಕುಟುಂಬವನ್ನು ಮತ್ತೆ ಕಾಡಿದೆ ಮರ್ಡರ್..! title=
ಫೆ 19ರಂದು ಅಮೆಜಾನ್ ಪ್ರೈಂ ಮೂಲಕ ದೃಶ್ಯಂ 2 ಬಿಡುಗಡೆ (photo twitter)

ಬೆಂಗಳೂರು : ಮಲಯಾಳಂ ನಟ ಮೋಹನ್ ಲಾಲ್ (Mohanlal) ಅಭಿನಯದ ದೃಶ್ಯಂ 2 (drishyam 2) ಪ್ರೇಕ್ಷಕನ ಮುಂದೆ ಬರಲು ಸಿದ್ಧವಾಗಿದೆ. ಫೆ 19ರಂದು ಅಮೆಜಾನ್ ಪ್ರೈಂ (Amazon prime)ಮೂಲಕ ಚಿತ್ರ ಒಟಿಟಿ ಫಾರಂನಲ್ಲಿ ಬಿಡುಗಡೆ ಆಗಲಿದೆ. ಚಿತ್ರದ ಟ್ರೇಲರ್ ಈಗಾಗಲೇ ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ಬ್ಲಾಕ್ ಬಾಸ್ಟರ್ ಹಿಟ್ ಆಗಿದ್ದ ದೃಶ್ಯಂ ಸಿನೆಮಾದ (Cinema) ನಂತರ ಇದೀಗ ದೃಶ್ಯಂ 2 ಬಿಡುಗಡೆಗೆ ಸಿದ್ಧವಾಗಿದೆ. ದೃಶ್ಯಂ (Drishyam)ಚಿತ್ರ ಎಲ್ಲಿಗೆ ಮುಕ್ತಾಯವಾಗಿತ್ತೋ ಅಲ್ಲಿಂದಲೇ ದೃಶ್ಯಂ 2 ಆರಂಭವಾಗಲಿದೆ. ತನ್ನ ಕುಟುಂಬವನ್ನು ಕಾಪಾಡುವ ನಿಟ್ಟಿನಲ್ಲಿ ಕೊಲೆಯನ್ನು ಮುಚ್ಚಿಹಾಕಲು ಯತ್ನಿಸುವ ಕತೆಯನ್ನು ದೃಶ್ಯಂ ಆಧರಿಸಿತ್ತು. ದೃಶ್ಯಂ 2ನಲ್ಲಿ ಅದೇ ಕತೆಯನ್ನು ಮುಂದುವರೆಸಲಾಗಿದೆ. ಆವತ್ತು ಮಾಡಿದ ಕೊಲೆ ಈಗ ಕುಟುಂಬವನ್ನು ಮತ್ತೆ ಕಾಡಲು ಶುರು ಮಾಡಿದೆ. 

ಇದನ್ನೂ ಓದಿ Porn Video Shoot ಆರೋಪದ ಮೇಲೆ 'ಗಂಧಿ ಬಾತ್' ನಟಿ ಗಹನಾ ವಸಿಷ್ಠ ಬಂಧನ

ಮೊದಲ ಭಾಗದಲ್ಲಿ ಕೇಬಲ್ ಬ್ಯುಸಿನೆಸ್ ಮಾಡ್ತಾಯಿದ್ದ ನಾಯಕ 2ನೇ ಭಾಗದಲ್ಲಿ ಚಿತ್ರಮಂದಿರದ ಮಾಲೀಕ. ಕುಟುಂಬದಿಂದ ನಡೆದು ಹೋದ ಕೊಲೆಯ ಪ್ರಕರಣವನ್ನು ಪೊಲೀಸರು (Police)ಯಾವಾಗ ಭೇದಿಸುತ್ತಾರೋ ಎಂಬ ಭಯ ಕುಟುಂಬವನ್ನು ಕಾಡಲಾರಂಭಿಸಿದೆ. ಈ ಬಾರಿ ನಾಯಕ ಯಾವ ರೀತಿ ತನ್ನ ಕುಟುಂಬವನ್ನು ಕಾಪಾಡುತ್ತಾನೆ ಎನ್ನುವುದನ್ನೇ ಟ್ರೇಲರ್ ನಲ್ಲಿ (Trailer) ತೋರಿಸಲಾಗಿದೆ. ಚಿತ್ರದ ಟ್ರೇಲರ್ ಭಾರೀ ಕುತೂಹಲ ಮೂಡಿಸಿದೆ.

 

ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಗೆ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ಟ್ರೇಲರ್ ರಿಲೀಸ್ ಆದ ಒಂದೇ ದಿನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಟ್ರೇಲರ್ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ : 30 ವರ್ಷದ ಬ್ರೇಕ್ ಬಳಿಕ ಚಂದನವನಕ್ಕೆ ಮತ್ತೆ ‘ಮಹಾಲಕ್ಷ್ಮಿ’..! ಮುಂದೇನು.?

ದೃಶ್ಯಂ 2 ನಲ್ಲಿಯೂ ಮೋಹನ್ ಲಾಲ್ (Mohanlal)ಜೋಡಿಯಾಗಿ ಮೀನಾ ನಟಿಸಿದ್ದಾರೆ. ಚಿತ್ರಕ್ಕೆ ಜೀತೂ ಜೋಸೆಫ್ ನಿರ್ದೇಶನವಿದೆ. ಫೆ. 19ರಂದು ದೃಶ್ಯಂ 2 ಅಮೆಜಾನ್ ಪ್ರೈಂನಲ್ಲಿ (Amazon prime)ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News