Kannada Serial Actress: ಮಾತಿನ ಮಧ್ಯೆ ಬಿಕ್ಕಿ ಬಿಕ್ಕಿ ಅತ್ತ ಖ್ಯಾತ ನಟಿ! ಈಕೆಯ ಕಣ್ಣೀರಿಗೆ ಕಾರಣವಾದ್ರು ಏನು? 

Malathi Sardeshpande: ಖ್ಯಾತ ಕಿರುತೆರೆ ನಟಿ ಮಾಲತಿ ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ  ಅನುಸೂಯ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ನಟಿ ಮಾಲತಿ ಸರ್‌ದೇಶಪಾಂಡೆ ಮನದಾಳದ ಮಾತುನ್ನು ಹಂಚಿಕೊಂಡಿದ್ಧಾರೆ. 

Written by - Zee Kannada News Desk | Last Updated : Apr 12, 2023, 07:31 PM IST
  • ಖ್ಯಾತ ಕಿರುತೆರೆ ನಟಿ ಮಾಲತಿ ಸರ್‌ದೇಶಪಾಂಡೆ ಮನದಾಳದ ಮಾತು
  • ಮಾತಿನ ಮಧ್ಯೆ ಬಿಕ್ಕಿ ಬಿಕ್ಕಿ ಅತ್ತ ಖ್ಯಾತ ನಟಿ ಮಾಲತಿ
Kannada Serial Actress: ಮಾತಿನ ಮಧ್ಯೆ ಬಿಕ್ಕಿ ಬಿಕ್ಕಿ ಅತ್ತ ಖ್ಯಾತ ನಟಿ! ಈಕೆಯ ಕಣ್ಣೀರಿಗೆ ಕಾರಣವಾದ್ರು ಏನು?  title=

ಬೆಂಗಳೂರು: ಖ್ಯಾತ ಕಿರುತೆರೆ ನಟಿ ಮಾಲತಿ ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ  ಅನುಸೂಯ ಪಾತ್ರದ ಬಗ್ಗೆ ಮಾತನಾಡಿದ ಅವರು ನಿಜ ಜೀವನದಲ್ಲೂ ನಾನು ಸೈಲೆಂಟ್‌, ಧಾರಾವಾಹಿಯಲ್ಲೂ ಸೈಲೆಂಟ್‌ ತುಂಬಾ ಮೃದು ಸ್ವಭಾವದವಳು ನನ್ನ ಸ್ವಭಾವಕ್ಕೆ ತಕ್ಕಂತೆ ಪಾತ್ರ ಸಿಕ್ಕಿದೆ. ಧಾರಾವಾಹಿಯಲ್ಲಿ ಸುಮಾರು ವರ್ಷಗಳ ನಂತರ ದಕ್ಷಿಣ ಮೂರ್ತಿ ಎರೆಡನೇ ಹೆಂಡ್ತಿಯಾಗಿ ಎಂಟ್ರಿಯಾಗಿದೆ.

ಇದನ್ನೂ ಓದಿ: Prashant Sambargi : ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ಕಿರುತೆರೆಗೆ ಎಂಟ್ರಿ 

ದಕ್ಷಿಣ ಮೂರ್ತಿ ಅವರ ಜೊತೆ ಕೆಲಸ ಮಾಡೋದೆ ಚಾಲೆಂಜಿಂಗ್‌ ಆಗಿರುತ್ತೆ. ಜೊತೆ ಈ ಧಾರಾವಾಹಿಯ ತಂಡ ಅದ್ಬುತವಾಗಿದೆ ಎಂದರು. ನಂತರ ತಮ್ಮ ಕಿರುತೆರೆ ಜರ್ನಿ ಬಗ್ಗೆ ಮಾತನಾಡಿದ ಅವರು ಒಂದು ಕಾಲದಲ್ಲಿ ಕಾದಂಬರಿ ಸೀರಿಯಲ್‌ ಮೆಘಾ ಧಾರಾವಾಹಿಯಾಗಿತ್ತು. ಅದರಲ್ಲಿ ನನ್ನ ಪಾತ್ರವನ್ನ ಜನ ಈಗಲೂ ಗುರುತಿಸುತ್ತಾರೆ ಎಂದರು.ನಂತರ ನೆಗೆಟೀವ್‌ ಪಾತ್ರ ಮಾಡಿದ್ದಾಗ  ನಾನು ನಿಜಜೀವನದಲ್ಲೂ ಕೆಟ್ಟವಳು ಅಂತಾ ಜನ ಊಹಿಸಿಕೊಂಡಿದ್ರು, ಪಬ್ಲಿಕ್‌ ಜಾಗಕ್ಕೆ ಹೋಗಿದ್ದಾಗ ಅವಳನ್ನ ಮಾತಾಡಿಸಬೇಡಿ ಆಕೆ ಬಜಾರಿ ಎನ್ನುತ್ತಿದ್ದರಂತೆ. 

ಇದನ್ನೂ ಓದಿ: Salman Khan : ಬಾಲಿವುಡ್‌ ಬಾದ್‌ ಷಾ ಸಲ್ಲುಗೆ ಬಂತು ಮತ್ತೊಂದು ಜೀವ ಬೆದರಿಕೆ ಕರೆ 

ಆದರು ನನಗೆ ಬಹಳ ಸಂತೋಷದ ವಿಷಯ ಅದು ಕಾರಣ ನನ್ನ ಪಾತ್ರಕ್ಕೆ ಜನ ಮೆಚ್ಚಿದರು ಎಂದು ಹೇಳಿದರು..ನಂತರ ಜೀವನದಲ್ಲಿ ಮರೆಯಲಾಗದಂತಹ ಘಟನೆಯನ್ನ ನೆನಪಿಸಿಕೊಂಡ ನಟಿ ಮಾಲತಿ ಸರ್‌ದೇಶಪಾಂಡೆ ಒಂದು ಮುದ್ದಾದ ನಾಯಿ ಮರಿಯನ್ನು ನನ್ನ ಮಗುವಿನ ರೀತಿಯಲ್ಲೇ ಸಾಕಿದ್ದೆ. ಇತ್ತೀಚಿಗಷ್ಟೇ ನನ್ನ ಮಗು ತೀರಿಹೋಯ್ತು, ನಾನು ಭೂಮಿ ಮೇಲೆ ಇರುವವರೆಗು ಆ ಘಟನೆಯನ್ನ ಮರೆಯಲು ಸಾಧ್ಯವಿಲ್ಲಾ ಎಂದು ಕಣ್ಣೀರು ಹಾಕಿದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News