ದರ್ಶನ್, ಸಲ್ಮಾನ್, ಸಂಜಯ್ ಸೇರಿದಂತೆ ಜೈಲಿಗೆ ಹೋಗಿ ಬಂದ ಸಿನಿಮಾ ತಾರೆಯರು ಇವರೇ..

Film Actors who went to jail: ತಮ್ಮ ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ ಸದ್ಯ ಜೈಲಿನಲ್ಲೇ ಜೀವನ ಕಳೆಯುತ್ತಿದ್ದಾರೆ. 

Written by - Chetana Devarmani | Last Updated : Jul 2, 2024, 12:31 PM IST
  • ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾದ ದರ್ಶನ್‌
  • ನಟ ದರ್ಶನ್‌ ಸದ್ಯ ಜೈಲಿನಲ್ಲೇ ಜೀವನ ಕಳೆಯುತ್ತಿದ್ದಾರೆ
  • ಜೈಲಿಗೆ ಹೋಗಿ ಬಂದ ಸಿನಿಮಾ ತಾರೆಯರು
ದರ್ಶನ್, ಸಲ್ಮಾನ್, ಸಂಜಯ್ ಸೇರಿದಂತೆ ಜೈಲಿಗೆ ಹೋಗಿ ಬಂದ ಸಿನಿಮಾ ತಾರೆಯರು ಇವರೇ.. title=

Film Actors who went to jail: ತೆರೆಯ ಮೇಲಿನ ಹೀರೋಗಳು ನಿಜ ಜೀವನದಲ್ಲೂ ಹಾಗೆ ಇರುತ್ತಾರೆ ಅಂದುಕೊಂಡರೆ ತಪ್ಪು. ತೆರೆಯ ಮೇಲೆ ಹೀರೋ ಆಗಿ ಕಾಣಿಸಿಕೊಳ್ಳುವ ಹೀರೋಗಳು ನಿಜಜೀವನದಲ್ಲಿ ಖಳ ನಾಯಕರಾಗಿರುವ ಸಂದರ್ಭಗಳೂ ಇವೆ. ಇತ್ತೀಚೆಗಷ್ಟೇ ಕನ್ನಡದ ಸ್ಟಾರ್ ಹೀರೋ ದರ್ಶನ್ ತಮ್ಮ ಅಭಿಮಾನಿಯಾಗಿದ್ದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಲನ್ ಆಗಿದ್ದರು. ಇದರಿಂದಾಗಿ ದರ್ಶನ್ ಈಗ ಜೈಲು ಪಾಲಾಗಿದ್ದಾರೆ. ದರ್ಶನ್, ಸಲ್ಮಾನ್, ಸಂಜಯ್ ಸೇರಿದಂತೆ ಜೈಲಿಗೆ ಹೋಗಿ ಬಂದ ಸಿನಿಮಾ ತಾರೆಯರು ಇವರೇ..

ದರ್ಶನ್
ತಮ್ಮ ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ ಸದ್ಯ ಜೈಲಿನಲ್ಲೇ ಜೀವನ ಕಳೆಯುತ್ತಿದ್ದಾರೆ. ಹೊಸ ಕಾನೂನಿನ ಪ್ರಕಾರ, ಅವರು 10 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೂ ಗುರಿಯಾಗುವ ಸಾಧ್ಯತೆಯಿದೆ. 

ಸಂಜಯ್‌ ದತ್
ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್‌ ದತ್ 1993 ರಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ನ್ಯಾಯಾಲಯವು ಐದು ವರ್ಷಗಳ ಶಿಕ್ಷೆ ವಿಧಿಸಿತು. ಜೈಲು ಶಿಕ್ಷೆಯ ನಂತರ ಹೊರ ಬಂದ ಬಳಿಕ ಸಂಜಯ್‌ ದತ್ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ: Mannat Inside Photos: ಶಾರುಖ್ ಖಾನ್ ವಾಸಿಸುವ 200 ಕೋಟಿಯ ʻಮನ್ನತ್‌ʼ... ಸ್ವರ್ಗವೇ ಧರೆಗಿಳಿದಂತಿದೆ ಒಳಾಂಗಣ ನೋಟ, ಇಲ್ಲಿವೆ ಫೋಟೋಸ್

ಸಲ್ಮಾನ್ ಖಾನ್
1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಶೂಟಿಂಗ್ ವೇಳೆ ಕೃಷ್ಣಮೃಗ ಬೇಟೆಯಾಡಿದ ಆರೋಪದ ಮೇಲೆ ಜೋಧ್‌ಪುರ ನ್ಯಾಯಾಲಯ ಸಲ್ಮಾನ್ ಖಾನ್ ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣದಲ್ಲಿ ಸಲ್ಮಾನ್ ಹಲವು ವರ್ಷ ಜೈಲು ವಾಸ ಅನುಭವಿಸಿದ್ದರು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

ಸೈಫ್ ಅಲಿಖಾನ್
ವಿನಾಕಾರಣ ವ್ಯಕ್ತಿಯನ್ನು ಥಳಿಸಿದ್ದಕ್ಕಾಗಿ ಸೈಫ್ ಅಲಿಖಾನ್ ಜೈಲಿಗೆ ಹೋಗಬೇಕಾಯಿತು.

ಸೋನಾಲಿ ಬೇಂದ್ರೆ 
ಸೋನಾಲಿ ಬೇಂದ್ರೆ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಧರ್ಮವನ್ನು ಅವಹೇಳನ ಮಾಡಿದ್ದಕ್ಕಾಗಿ ಜೈಲು ವಾಸ ಅನುಭವಿಸಬೇಕಾಯಿತು. ಆ ಬಳಿಕ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.  

ಫರ್ದೀನ್ ಖಾನ್
ಫರ್ದೀನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಜೈಲಿನಲ್ಲಿ ಜೀವನ ಕಳೆದರು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.  

ಇದನ್ನೂ ಓದಿ: Nagarjuna : ಅನುಷ್ಕಾ ಶೆಟ್ಟಿಯೊಂದಿಗಿನ ಸಂಬಂಧದ ಬಗ್ಗೆ ಓಪನ್‌ ಆಗಿ ಮಾತನಾಡಿದ ನಾಗಾರ್ಜುನ! 

ಮೋನಿಕಾ ಬೇಡಿ
ಅಕ್ರಮ ಪಾಸ್‌ಪೋರ್ಟ್ ಹೊಂದಿದ್ದಕ್ಕಾಗಿ ಮೋನಿಕಾ ಬೇಡಿ ತನ್ನ ಪ್ರೇಮಿ ಅಬು ಸಲೇಂ ಜೊತೆಗೆ ಜೈಲು ವಾಸ ಅನುಭವಿಸಿದರು. 

ಅಕ್ಷಯ್ ಕುಮಾರ್ 
ಫ್ಯಾಷನ್ ವೀಕ್ ನಲ್ಲಿ ಅನುಚಿತವಾಗಿ ವರ್ತಿಸಿ ಜೈಲು ಪಾಲಾಗಿದ್ದ ಅಕ್ಷಯ್ ಕುಮಾರ್, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಸುನೀಲ್ ಶೆಟ್ಟಿ
ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೈಲು ಸೇರಬೇಕಾಯಿತು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News