/kannada/photo-gallery/kiss-heroine-entering-bollywood-do-you-know-who-the-hero-is-217121 ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ? ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ? 217121

ಮುಂಬೈ: ಬಾಲಿವುಡ್‍ನ ಖ್ಯಾತ ಗಾಯಕ ರಾಹುಲ್‌ ಜೈನ್‌ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿದೆ ಎಂದು ವರದಿಯಾಗಿದೆ. ರಾಹುಲ್ ಜೈನ್ ವಿರುದ್ಧ ಮಹಿಳೆಯೊಬ್ಬರು ಮುಂಬೈನ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಗಾಯಕನ ವಿರುದ್ಧ FIR ದಾಖಲಿಸಿದ್ದೇವೆಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ.

ಮೋಸದಿಂದ ಮಲಗುವ ಕೋಣೆಗೆ ಕರೆದೊಯ್ದು ತನ್ನ ಮೇಲೆ ರಾಹುಲ್ ಜೈನ್ ಅತ್ಯಾಚಾರವೆಸಗಿದ್ದಾನೆಂದು 30 ವರ್ಷದ ವಸ್ತ್ರ ವಿನ್ಯಾಸಕಿ ದೂರು ನೀಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಆರೋಪ ಎದುರಿಸುತ್ತಿದ್ದ ರಾಹುಲ್ ಜೈನ್‍ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ರಾಹುಲ್ ನಿವಾಸದಲ್ಲಿ ಈ ಅತ್ಯಾಚಾರದ ಘಟನೆ ನಡೆದಿದೆ ಎಂದು ವಸ್ತ್ರ ವಿನ್ಯಾಸಕಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಆಮೀರ್‌ ಖಾನ್‌ ಸಿನಿಮಾ ಜೀವನದಲ್ಲೇ ಇದು ಅತ್ಯಂತ ಕಳಪೆ ಓಪನಿಂಗ್..!

ಇನ್‌ಸ್ಟಾಗ್ರಾಂ ಮೂಲಕ ರಾಹುಲ್‌ ನನ್ನ ಪರಿಚಯ ಮಾಡಿಕೊಂಡಿದ್ದರು. ತನ್ನ ಕಾಸ್ಟೂಮ್‌ ಸ್ಟೈಲಿಸ್ಟ್‌ ಆಗಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆಗಸ್ಟ್‌ 11ರಂದು ಈ ಬಗ್ಗೆ ಮಾತನಾಡಲು ತಮ್ಮ ಫ್ಲಾಟ್‌ಗೆ ಕರೆಸಿಕೊಂಡಿದ್ದರು. ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದರು ಎಂದು ಮಹಿಳೆ ಓಶಿವಾರಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರವೆಸಗಲು ಬಂದಾಗ ಪ್ರತಿಭಟಿಸಿದ ವಸ್ತ್ರವಿನ್ಯಾಸಕಿಗೆ ರಾಹುಲ್ ಜೈನ್ ಕಿರುಕುಳ ನೀಡಿದ್ದಾರಂತೆ. ಹೊರಗಡೆ ವಿಷಯ ತಿಳಿಸಿದರೆ ನಿನ್ನ ಕಥೆ ಮುಗಿಸುತ್ತೇನೆಂದು ಬೆದರಿಕೆ ಸಹ ಹಾಕಿದ್ದರಂತೆ. ಅತ್ಯಾಚಾರದ ಬಳಿಕ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಮಹಿಳೆ ತಿಳಿಸಿದ್ದಾಳೆ. ರಾಹುಲ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), 323 (ಯಾವುದೇ ವ್ಯಕ್ತಿಗೆ ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 506 (ಬೆದರಿಕೆ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಇದನ್ನೂ ಓದಿ: “ಅವಳಿಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ”: ‘ಬಿಗ್’ ಮನೆಯಲ್ಲಿ ಉದಯ್ ಹೀಗಂದಿದ್ದು ಯಾರಿಗೆ ಗೊತ್ತಾ?

ಆರೋಪ ನಿರಾಕರಿಸಿದ ರಾಹುಲ್‌ ಜೈನ್

ಇನ್ನು ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ರಾಹುಲ್ ಜೈನ್ ನಿರಾಕರಿಸಿದ್ದಾರೆ. ಈ ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆ ಮಹಿಳೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ‘ನಾನು ಯಾರನ್ನು ಸೋಷಿಯಲ್ ಮೀಡಿಯಾದಲ್ಲಿ ಪರಿಚಯಿಸಿಕೊಂಡು ನನ್ನ ಫ್ಲಾಟ್‌ಗೆ ಕರೆಸಿಕೊಂಡಿಲ್ಲ. ಆ ಮಹಿಳೆ ಯಾರು ಎಂಬುದೇ ನನಗೆ ಗೊತ್ತಿಲ್ಲ. ಆಕೆ ಮಾಡುತ್ತಿರುವ ಆರೋಪಗಳು ಸುಳ್ಳು ಮತ್ತು ಆಧಾರ ರಹಿತ ಅಂತಾ ರಾಹುಲ್‌ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
FIR Against Bollywood Singer Rahul Jain For Allegedly Raping Costume Stylist
News Source: 
Home Title: 

ಬಾಲಿವುಡ್ ಸಿಂಗರ್ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು!

ಬಾಲಿವುಡ್ ಸಿಂಗರ್ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು!
Caption: 
ಗಾಯಕ ರಾಹುಲ್‌ ಜೈನ್‌ ವಿರುದ್ಧ ಅತ್ಯಾಚಾರ ಆರೋಪ!
Yes
Is Blog?: 
No
Tags: 
Facebook Instant Article: 
Yes
Highlights: 

ಬಾಲಿವುಡ್‍ನ ಖ್ಯಾತ ಗಾಯಕ ರಾಹುಲ್‌ ಜೈನ್‌ ವಿರುದ್ಧ ಅತ್ಯಾಚಾರ ಆರೋಪ

ವಸ್ತ್ರ ವಿನ್ಯಾಸಕಿ ದೂರಿನ ಮೇಲೆ ಗಾಯಕನ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪೊಲೀಸರು

ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ನಿರಾಕರಿಸಿದ ಗಾಯಕ ರಾಹುಲ್ ಜೈನ್

Mobile Title: 
ಬಾಲಿವುಡ್ ಸಿಂಗರ್ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು!
Puttaraj K Alur
Publish Later: 
No
Publish At: 
Tuesday, August 16, 2022 - 14:46
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No