ನವದೆಹಲಿ : ಕೋವಿಡ್ (COVID) ಪ್ರಕರಣ ನಿರಂತರವಾಗಿ ಹೆಚ್ಚಾಗುತ್ತಿದ್ದು, ಈ ವೈರಸ್ ಬಾಲಿವುಡ್ ಮಂದಿಯನ್ನು ಕಾಡುತ್ತಿದೆ. ಇತ್ತೀಚೆಗಷ್ಟೇ ಕರೀನಾ ಕಪೂರ್ (Kareena Kapoor), ಅಮೃತಾ ಅರೋರಾ (Amrutha Arora) ಸೇರಿದಂತೆ ಹಲವರಿಗೆ ಕರೋನಾ ಸೋಂಕು ತಗುಲಿತ್ತು ಮತ್ತು ಈಗ ಕಪೂರ್ ಕುಟುಂಬದ ಇನ್ನು ಕೆಲವು ಮಂಡಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಕಪೂರ್ ಕುಟುಂಬದ ಮೇಲೆ ಕೊರೊನಾ ಕರಿನೆರಳು :
ಕರೋನಾ (Coronavirus) ಏಕಾಏಕಿ ಮತ್ತೊಮ್ಮೆ ವೇಗವಾಗಿ ಹರಡುತ್ತಿದೆ. ಇತ್ತೀಚೆಗಷ್ಟೇ ಕರೀನಾ ಕಪೂರ್ (Kareena Kapoor) ಮತ್ತು ಮಲೈಕಾ ಅರೋರಾ ಅವರ ಸಹೋದರಿ ಅಮೃತಾ ಕೊರೊನಾ ಅವರಲ್ಲಿ ಕರೋಣ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅರ್ಜುನ್ ಕಪೂರ್ (Arjun Kapoor), ಅವರ ಸಹೋದರಿ ಅಂಶುಲಾ, ರಿಯಾ ಕಪೂರ್ ಮತ್ತು ಅವರ ಪತಿ ಕರಣ್ ಬೂಲಾನಿ ಅವರೂ ಕೂಡಾ ಕರೋನಾ ಪಾಸಿಟಿವ್ ಆಗಿದ್ದಾರೆ.
ಇದನ್ನೂ ಓದಿ : Alia Bhatt: ಆಲಿಯಾ ಭಟ್ ದಕ್ಷಿಣ ಭಾರತದ 'RRR'ಚಿತ್ರಕ್ಕೆ ಸಹಿ ಮಾಡಿದ್ದೇಕೆ?
ಮಲೈಕಾ ಅವರಿಗೂ ನಡೆಯಲಿದೆ ಪರೀಕ್ಷೆ :
ಈ ನಾಲ್ವರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಅರ್ಜುನ್ ಕಪೂರ್ ಅವರ ವರದಿಯು ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಈಗ ಮಲೈಕಾ ಅರೋರಾ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅರ್ಜುನ್ ಇತ್ತೀಚೆಗೆ ಕ್ರಿಸ್ಮಸ್ ಪಾರ್ಟಿಗಾಗಿ ಮಲೈಕಾ ಮನೆಗೆ ಹೋಗಿದ್ದರು. ಈ ಪಾರ್ಟಿ ಯಲ್ಲಿ ಕರೀನಾ ಮತ್ತು ಅಮೃತಾ ಕೂಡ ಭಾಗವಹಿಸಿದ್ದರು.
ಕ್ವಾರಂಟೈನ್ ನಾಲ್ಕು ಮಂದಿ :
ವರದಿಯ ಪ್ರಕಾರ, ಅರ್ಜುನ್, ರಿಯಾ ಕಪೂರ್, ಅಂಶುಲಾ ಮತ್ತು ಕರಣ್ ಬೂಲಾನಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಕಳೆದ ವರ್ಷ ಅಂದರೆ 2020ರಲ್ಲಿ ಅರ್ಜುನ್ (Arjun Kapoor) ಮತ್ತು ಅಂಶುಲಾ ಇಬ್ಬರಲ್ಲಿಯೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.
ಇದನ್ನೂ ಓದಿ : Aditi Prabhudeva: ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ನಟಿ ಅದಿತಿ ಪ್ರಭುದೇವ..?
ರಣವೀರ್ ಶೌರಿಗೆ ಕರೊನಾ :
ಮಂಗಳವಾರವೇ ನಟ ರಣವೀರ್ ಶೌರೆ ಅವರ ಪುತ್ರ ಹರೂನ್ ಅವರಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ನೀಡಿದ ರಣವೀರ್ ಶೌರೆ, ನಾನು ಮತ್ತು ನನ್ನ ಮಗ ಹರೂನ್ ಗೋವಾಕ್ಕೆ ತೆರಳಿದ್ದು, ಹಿಂದಿರುಗುವಾಗ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕರೋನಾ ಪಾಸಿಟಿವ್ ಕಂಡುಬಂದಿರುವುದಾಗಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.