ಆ ಸಿನಿಮಾ ಸೋಲಿನ ಬೆನ್ನಲ್ಲೆ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ಕಮಲ್‌ ಹಾಸನ್‌..! ವಿಶ್ವನಾಯಕನ ಫ್ಯಾನ್ಸ್‌ ಕಣ್ಣಲ್ಲಿ ನೀರು..

Kamal Hassan: ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ತಮಿಳು ಸೀಸನ್ 8 ಶೋ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಕಮಲ್ ಹಾಸನ್ ಇಂದು ಮಹತ್ವದ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದಾರೆ.   

Written by - Savita M B | Last Updated : Aug 6, 2024, 06:07 PM IST
  • ಬಿಗ್ ಬಾಸ್ ಶೋ ಇಂಗ್ಲಿಷ್ ಮತ್ತು ಕನ್ನಡದಂತಹ ವಿವಿಧ ಭಾಷೆಗಳಲ್ಲಿ ಪ್ರದರ್ಶನವಾಗಿದೆ
  • ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ
ಆ ಸಿನಿಮಾ ಸೋಲಿನ ಬೆನ್ನಲ್ಲೆ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ಕಮಲ್‌ ಹಾಸನ್‌..! ವಿಶ್ವನಾಯಕನ ಫ್ಯಾನ್ಸ್‌ ಕಣ್ಣಲ್ಲಿ ನೀರು.. title=

kamal haasan shocking decision: ಬಿಗ್ ಬಾಸ್ ಶೋ ಇಂಗ್ಲಿಷ್ ಮತ್ತು ಕನ್ನಡದಂತಹ ವಿವಿಧ ಭಾಷೆಗಳಲ್ಲಿ ಪ್ರದರ್ಶನವಾಗಿದೆ... ತಮಿಳಿನಲ್ಲಿ, ಕಳೆದ ವರ್ಷ 2017 ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ತಮಿಳು ಟಿವಿಯಲ್ಲಿ ಅತಿ ಹೆಚ್ಚು TRP ಶೋ ಆಗಿದೆ. ಇಲ್ಲಿಯವರೆಗೆ 7 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅದರಂತೆ ಬಿಗ್ ಬಾಸ್ ಸೀಸನ್ 7 ಕಳೆದ ವರ್ಷ ನಡೆದಿತ್ತು. ಇದರಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಅಲ್ಲದೆ, ಕಿರುತೆರೆ ನಟಿ ಅರ್ಚನಾ ಈ ಸೀಸನ್‌ನ ಟೈಟಲ್ ವಿನ್ನರ್ ಎಂದು ಘೋಷಿಸಲಾಯಿತು.  
 
ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. 70ರ ಹರೆಯಕ್ಕೆ ಕಾಲಿಡುತ್ತಿದ್ದರೂ ಹುಚ್ಚೆಬ್ಬಿಸುವ ಫೈಟ್ ಗಳನ್ನು ಮಾಡುತ್ತಾ ಯಂಗ್ ಹೀರೋಗಳಿಗೆ ಸಖತ್ ಪೈಪೋಟಿ ನೀಡುತ್ತಿದ್ದಾರೆ. ‌ ಕಳೆದ ಏಳು ವರ್ಷಗಳಿಂದ ಬಿಗ್ ಬಾಸ್‌ನ ತಮಿಳು ಆವೃತ್ತಿಯನ್ನು ಹೋಸ್ಟ್ ಮಾಡಿದ್ದ ಗ್ಲೋಬಲ್ ಹೀರೋ ಕಮಲ್ ಹಾಸನ್ ಇದೀಗ ಕಾರ್ಯಕ್ರಮದಿಂದ ಹೊರಬರುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.  

 

ಇದನ್ನೂ ಓದಿ-ʼಆʼ ನಟನೊಂದಿಗೆ ನಟಿಸಲು ಇಷ್ಟವಿಲ್ಲ ಎಂದು ಸಿನಿಮಾ ಕೈ ಬಿಟ್ಟ ರಶ್ಮಿಕಾ ಮಂದಣ್ಣ! ಅಷ್ಟಕ್ಕೂ ಹಿರೋ ಯಾರು?

ಈ ಹಿಂದೆ ಸಿಂಬು ಬಿಗ್ ಬಾಸ ಹೋಸ್ಟ್ ಮಾಡಿದ್ದರು. ಈಗ ಕಮಲ್ ಹಾಸನ್ ಕಾರ್ಯಕ್ರಮದಿಂದ ದೂರ ಉಳಿದಿದ್ದು, ಸಿಂಬು ಅವರೇ ಮತ್ತೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಆದರೆ, ಆದಷ್ಟು ಬೇಗ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬಹುದು.

ಕಳೆದ 4 ವರ್ಷಗಳಿಂತೆ ಬಿಗ್ ಬಾಸ್ ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಆರಂಭವಾಗಲಿದೆ. ಅದರಂತೆ ಇದೀಗ ಪ್ರೋಮೋ ಶೂಟಿಂಗ್ ಹಾಗೂ ಸ್ಪರ್ಧಿಗಳ ಆಯ್ಕೆ ನಡೆಯಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಶೋ ಆರಂಭವಾಗುವ ನಿರೀಕ್ಷೆ ಇದೆ.

 ಇದನ್ನೂ ಓದಿ-ʼಐಶ್ವರ್ಯ ರೈ ನನ್ನ ಪತ್ನಿʼ.. ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯವೇ ಖ್ಯಾತ ನಟನ ಸೆನ್ಸೇಷನಲ್‌ ಕಾಮೆಂಟ್‌! ವಿಡಿಯೋ ವೈರಲ್!!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News