ಮಧುಬಾಲಾ ಎಂದರೆ ಯಾರಿಗೆ ತಾನೇ ನೆನಪಾಗಲ್ಲ ಹೇಳಿ, ಭಾರತೀಯ ಚಿತ್ರರಂಗ ಕಂಡಂತಹ ಅತೀ ಸುಂದರ ನಟಿಯರಲ್ಲಿ ಮಧುಬಾಲಾ ಕೂಡ ಒಬ್ಬರು, ಅವರ ನಿಜವಾದ ಹೆಸರು ಮುಮ್ತಾಜ್ ಜಹಾನ್ ಬೇಗಂ ದೆಹೆಲ್ವಿ, ತಮ್ಮ ಎರಡು ದಶಕಗಳ ವೃತ್ತಿಜೀವನದಲ್ಲಿ, ಅವರು 60 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 1940 ರ ದಶಕದ ಅಂತ್ಯ ಮತ್ತು 1960 ರ ದಶಕದ ಆರಂಭದ ನಡುವೆ ಭಾರತದ ಅತ್ಯಂತ ಜನಪ್ರಿಯ ಮತ್ತು ಉತ್ತಮ ಸಂಭಾವನೆ ಪಡೆಯುವ ನಟಿಯರಲ್ಲಿ ಅವರು ಒಬ್ಬರಾದರು. ಇಂದು ಅವರು ಬದುಕಿದ್ದರೆ ಅವರು 88 ವರ್ಷಗಳನ್ನು ಪೂರೈಸಿದ್ದರು.
ಮಧುಬಾಲಾ ನೀಲ್ ಕಮಾಲ್‌ನಿಂದ ಬಾದಲ್, ಮೊಘಲ್-ಎ-ಆಜಮ್‌ವರೆಗಿನ ಚಿತ್ರಗಳಲ್ಲಿನ ನಟನೆಯಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.ಮುಮ್ತಾಜ್ ಜಹಾನ್ ಬೇಗಂ ದೆಹೆಲ್ವಿಯಾಗಿ ಜನಿಸಿದ ಈ ನಟಿ ಮಧುಬಾಲಾ 1942 ರಲ್ಲಿ ಬಸಂತ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.ಈ ಚಿತ್ರವು ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಗಳಿಸಿತು.ಬರ್ಸಾತ್ ಕಿ ರಾತ್, ಕಾಲಾ ಪಾನಿ, ಹೌರಾ ಬ್ರಿಡ್ಜ್, ಚಲ್ತಿ ಕಾ ನಾಮ್ ಗಾಡಿ, ಶರಾಬಿ, ಮತ್ತು ಇತರ ಚಿತ್ರಗಳಲ್ಲಿನ ನಟನಾ ಕೌಶಲ್ಯದೊಂದಿಗೆ ಅವರು ಅಂತರಾಷ್ಟ್ರೀಯ ಖ್ಯಾತಿಗೆ ಏರಿದರು.
ಮಧುಬಾಲಾ ಅವರು ತಮ್ಮ ಕಾಲಘಟ್ಟಕ್ಕಿಂತಲೂ ಮುಂದಿದ್ದರು, ಅವರ ಉಡುಗೆ ತೊಡುಗೆಗಳ ಮೂಲಕ ಗಮನ ಸೆಳೆದಿದ್ದರು.ಹೀಗಾಗಿ ಅವರ ಸೌಂದರ್ಯಕ್ಕೆ ಮಾರುಹೋದ ಮಾಧ್ಯಮಗಳು ಬಾಲಿವುಡ್ ನ ಮರ್ಲಿನ್ ಮನ್ರೋ ಎನ್ನುವ ಬಿರುದನ್ನು ನೀಡಿದವು.ಇನ್ನೊಂದೆಡೆಗೆ ಆಗ ಅವರ ಪ್ರೇಮದ ಕಥನವೂ ಸುದ್ದಿಯಲ್ಲಿತ್ತು, ಅದರಲ್ಲೂ ನಟ ದಿಲೀಪ್ ಕುಮಾರ್ ಅವರೊಂದಿಗಿನ ಅವರ ಸಂಬಂಧವು ಆಗ ಸಾಕಷ್ಟು ಸುದ್ದಿಯನ್ನು ಮಾಡಿತ್ತು.ತರಾನಾ ಚಿತ್ರದ ನಂತರ ಈ ಇಬ್ಬರು ಎರಡು ವರ್ಷಗಳ ಕಾಲ ಪ್ರೀತಿಸಿದ್ದರು.ಆದರೆ ಕೊನೆಗೆ ಮಧುಬಾಲಾ ಹಿನ್ನಲೆ ಗಾಯಕ ಮತ್ತು ನಟ ಕಿಶೋರ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾದರು.
1954 ರಲ್ಲಿ, ಮಧುಬಾಲಾ ಅವರು ಮದ್ರಾಸ್‌ನಲ್ಲಿ ಬಹುತ್ ದಿನ್ ಹೂವೆ ಚಿತ್ರದ ಶೂಟಿಂಗ್‌ನಲ್ಲಿದ್ದಾಗ ಅವರ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿತ್ತು. ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ನಂತರ ಸುಮಾರು ಒಂಬತ್ತು ವರ್ಷಗಳ ಕಾಲ ಅವರು ಹಾಸಿಗೆಗೆ ಸೀಮಿತರಾದರು.ಮಧುಬಾಲಾ ತಮ್ಮ 36 ನೇ ಹುಟ್ಟುಹಬ್ಬದ ಆಚರಣೆಯ ನಂತರ ಫೆಬ್ರವರಿ 23, 1969 ರಂದು ನಿಧನರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.